ಪರ್ವತ ಪ್ರಸಂಗ

33/43

“ನಮಗೆ ತಪ್ಪು ಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸು ತ್ತೇವಾದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು.”

ನಾವು ಇತರರನ್ನು ಕ್ಷಮಿಸಿದರೆ ಮಾತ್ರವೇ ನಾವು ದೇವರಿಮ್ದ ಕ್ಷಮಾಪಣೆಯನ್ನು ಹೊಂದಲು ಸಾಧ್ಯವೆಂದು ಯೇಸುವು ಬೋಧಿಸಿದನು. ನಮ್ಮನ್ನು ಆತನ ಬಳಿಗೆ ಸೆಳೆಯುವುದು ದೇವರ ಪ್ರೀತಿಯೇ, ಆ ಪ್ರೀತಿಯು ನಮ್ಮ ಸಹೋದರರಿಗೆಪ್ರೀತಿಯನ್ನು ನಮ್ಮಲ್ಲಿ ಹುಟ್ಟಿಸಿದ ಹೊರತು ನಮ್ಮ ಹೃದಯಗಳನ್ನು ಸ್ಪರ್ಶಿಸದು. MBK 115.2

ಕರ್ತನ ಪ್ರಾರ್ಥನೆಯನ್ನು ಮುಗಿಸಿದ ತರುವಾಯ ಯೇಸು ಹೇಳಿದ್ದೇನಂದರೆ: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.” ಕ್ಷಮಾರಹಿತನಾದವನು ದೇವರ ಕೃಪೆಯು ಪ್ರವಹಿಸುವ ಕಾಲುವೆಯನ್ನೇ ಅಡ್ಡಗಟ್ಟುವವನಾಗಿದ್ದಾನೆ. ನಮಗೆ ತಪ್ಪು ಮಾಡಿದವನು ಬಂದು ನಮ್ಮಲ್ಲಿ ತನ್ನ ತಪ್ಪನ್ನು ಒಪ್ಪಿಕೊಳ್ಳದಿದ್ದರೆ ನಾವು ಕ್ಷಮಿಸದೆ ಇರುವುದು ನ್ಯಾಯವೆಂದು ನಾವು ನೆನೆಸಬಾರದು. ಅವರು ತಮ್ಮನ್ನು ತಗ್ಗಿಸಿಕೊಂಡು ಪಶ್ಚಾತ್ತಾಪ ಪಟ್ಟು ತಪ್ಪನ್ನು ಒಪ್ಪಿಕೊಳ್ಳಬೇಕಾದುದು ಅವರ ಕರ್ತವ್ಯವೆಂಬುದರಲ್ಲಿ ಸಂದೇಹವಿಲ್ಲ; ಆದರೂ ಅವರು ಕ್ಷಮೆ ಬೇಡಿದರೂ ಬೇಡದಿದ್ದರೂ ನಮಗೆ ತಪ್ಪು ಮಾಡಿದವರ ವಿಷಯದಲ್ಲಿ ಅನುಕಂಪವುಳ್ಳವನಾಗಿರಬೇಕು. ಅವರು ನಮ್ಮನ್ನು ಎಷ್ಟು ತೀವ್ರವಾಗಿ ನೋಯಿಸಿದ್ದರೂ ಸಹ ನಾವು ಅಸಮಾಧಾನವನ್ನು ಬಗೆಯುತ್ತಾ, ನಮಗುಂಟಾದ ವ್ಯಥೆ ಯನ್ನು ಕುರಿತು ಆಲೋಚಿಸದವರಾಗಿರಬೇಕು; ಆದರೆ ನಾವು ದೇವರಿಗೆ ವಿರೋಧವಾಗಿ ಮಾಡಿದ ಪಾಪಗಳ ಕ್ಷಮೆಯನ್ನು ಹೊಂದಬೇಕೆಂದು ನಿರೀಕ್ಷಿಸುವವರಾದ್ದರಿಂದ, ನಮಗೆ ತಪ್ಪು ಮಾಡಿದವರನ್ನೆಲ್ಲಾ ಕ್ಷಮಿಸಬೇಕು. MBK 115.3

ಆದರೆ ಕ್ಷಮಾಪಣೆಯು ಅನೇಕರು ನೆನೆಸುವುದಕ್ಕಿಂತಲೂ ದೀರ್ಘವಾದ ಅರ್ಥವುಳ್ಳದ್ದಾಗಿದೆ. ದೇವರು ನಮ್ಮನ್ನು “ಮಹಾ ಕೃಪೆಯಿಂದ ಕ್ಷಮಿಸುವೆನು” ದು ವಾಗ್ದಾನಮಾಡಿ, ಆ ವಾಗ್ದಾನದ ಅರ್ಥವು ನಾವು ಯೋಚಿಸುವುದಕ್ಕಿಂತಲೂ ದೀರ್ಘವಾದುದೆಂದು ತೋರಿಸಲು ಆತನು ಹೇಳಿದ್ದೇನಂದರೆ: “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾಆರ್ಗಗಳು ನಿಮ್ಮಆಲೋಚನೆಗಳಿಗಿಂತ ನನ್ನ ಆಲೋಚನೆಗಳು ಅಷ್ಟು ಉನ್ನತವಾಗಿವೆ.” ಯೆಶಾಯ 55: 7-9. ದೇವರ ಕ್ಷಮೆಯು ನಮ್ಮನ್ನು ದೋಷಾರೋಪಣೆಯಿಂದ ಬಿಡಿಸುವ ವಿಮರ್ಶಾತ್ಮಕ ಕ್ರಿಯೆ ಮಾತ್ರವಲ್ಲ, ಪಾಪಕ್ಕೆ ಕ್ಷಮಾಪಣೆ ಮಾತ್ರವಲ್ಲ, ಆದರೆ ಪಾಪದಿಮ್ದ ಉದ್ಧರಿಸುವುದಾಗಿದೆ. ರಕ್ಷಣೆಯ ಪ್ರಿತಿಯ ಹೊರಹೊಮ್ಮುವಿಕೆಯೇ ನಮ್ಮ ಹೃದಯಗಳನ್ನು ಮಾರ್ಪಡಿಸುವಂಥಾದ್ದು. ದಾವೀದನು ಮಾಡಿದ ಪ್ರಾರ್ಥನೆಯಲ್ಲಿ ಕ್ಷಮಾಪಣೆಯ ಯಥಾರ್ಥವಾದ ಭಾವನೆಯು ಅಡಗಿತ್ತು: “ದೇವರೇ ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.” ಮತ್ತೂ ದಾವೀದನು ಹೇಳಿದ್ದೇನಂದರೆ: “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.” ಕೀರ್ತನೆ 51: 1೦; 1೦3: 12. MBK 116.1

ನಮ್ಮ ಪಾಪಗಳಿಗಾಗಿ ದೇವರು ಕ್ರಿಸ್ತನ ಮೂಲಕವಾಗಿ ತನ್ನನ್ನೇ ಒಪ್ಪಿಸಿಕೊಟ್ಟನು. ಪಾಪಭಾರವನ್ನು ನಮಗಾಗಿ ಹೊತ್ತು, ಕ್ರೂಜೆಯ ಮೇಲೆ ಕ್ರೂರ ಮರಣವನ್ನು ಅನುಭವಿಸಿದನು, ತನ್ನ ಪ್ರೀತಿಯನ್ನು ನಮಗೆ ಪ್ರಕಟಿಸಿ ತನ್ನ ಸನ್ನಿಧಿಗೆ ನಮ್ಮನ್ನು ಬರಸೆಳೆಯಲು “ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣಕೊಟ್ಟನು.” 1 ಪ್ರೇತ 3: 18. ಮತ್ತೂ ಆತನು ಹೇಳುವುದೇನಂದರೆ; “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.” ಎಫೆಸ 4: 32. ದೈವಜೀವನವಾದ ಕ್ರಿಸ್ತನು ನಿಮ್ಮಲ್ಲಿ ಜೀವಿಸಿ, ನಿಮ್ಮ ಮೂಲಕವಾಗಿ ನಿರೀಕ್ಷೆಯಿಲ್ಲದವರಿಗೆ ನಿರೀಕ್ಷೆಯನ್ನೂ, ಪಾಪಭರಿತವಾದ ಹೃದಯಕ್ಕೆ ಪರಲೋಕದ ಸಮಾಧಾನವನ್ನೂ ತರುವಂತೆ ಪರಮ ಪ್ರೀತಿಯು ವ್ಯಕ್ತಪಡಿಸಲ್ಪಡಲಿ. ನಾವು ದೇವರ ಬಳಿಗೆ ಬರುವಾಗ, ಬಾಗಿಲ ಬಳಿ ನಮ್ಮನ್ನು ಸಂಧಿಸುವ ನಿಯಮವೇನಂದರೆ, ಆತನಿಂದ ಕೃಪೆಯನ್ನು ಹೊಂದಿ, ಆ ಕೃಪೆಯನ್ನು ಇತರರಿಗೆ ಪ್ರಕಟಿಸುತ್ತೇವೆಂದು ನಮ್ಮನ್ನು ಆತನಿಗೆ ಒಪ್ಪಿಸಬೇಕು. MBK 116.2

ದೇವರ ಕ್ಷಮಾಪೂರ್ಣ ಪ್ರೇಮವನ್ನು ಹೊಂದಿ ಇತರರಿಗೆ ಅದನ್ನು ಹಂಚಲು ಅತಿ ಪ್ರಾಮುಖ್ಯವಾದ ಕಾರ್ಯವೇನಂದರೆ ಆತನಿಗೆ ನಮ್ಮ ಮೇಲೆ ಇರುವ ಪ್ರೀತಿಯನ್ನು ಗ್ರಹಿಸಿಕೊಂದು ಅದನ್ನು ನಂಬಬೇಕು. (1 ಯೋಹಾನ 4: 16). ಆ ಪ್ರೀತಿಯನ್ನು ನಾವು ಅರಿತುಕೊಳ್ಳದಂತೆ ಮಾಡಲು ಸೈತಾನನು ತನ್ನ ಶಕ್ತಿಯಲ್ಲಿರುವ ಕೃತ್ರಿಮವನ್ನೆಲ್ಲಾ ಉಪಯೋಗಿಸುತ್ತಾನೆ. ನಮ್ಮ ತಪ್ಪುಗಳೂ ಮತ್ತು ಪಾಪಗಳೂ ಬಹಳ ದುರ್ಭರವೆಂದೂ, ಕರ್ತನು ನಮ್ಮ ಪ್ರಾರ್ಥನೆಗಳನ್ನು ಗೌರವಿಸುವುದಿಲ್ಲವೆಂದೂ ಮತ್ತು ನಮ್ಮನ್ನು ಆಶೀರ್ವದಿಸಿ ರಕ್ಷಿಸುವುದಿಲ್ಲವೆಂದೂ ನಾವು ಸಂದೇಹಪಡುವಂತೆ ಪ್ರೇರಿಸುತ್ತಾನೆ. ನಾವು ನಮ್ಮಲ್ಲಿ ನಿರ್ಬಲವನ್ನೇ ಕಾಣುತ್ತೇವೆ, ದೇವರಿಗೆ ನಮ್ಮನ್ನು ಶಿಫಾರಸು ಮಾಡುವಂಥಾದ್ದು ನಮ್ಮಲ್ಲಿ ಯಾವುದೂ ಇಲ್ಲ, ಇದರಿಂದ ಪ್ರಯೋಜನವಿಲ್ಲವೆಂದು ಸೈತಾನನು ಹೇಳುತ್ತಾನೆ; ನಮ್ಮ ಗುಣಗಳ ನ್ಯೂನತೆಯನ್ನು ಪರಿಹರಿಸುವುದು ನಮ್ಮಿಂದಾಗದು. ನಾವು ದೇವರ ಬಳಿಗೆ ಬರಲು ಪ್ರಯತ್ನಿಸುವಾಗ ವಿರೋಧಿಯು ನಮ್ಮ ಪಕ್ಕದಲ್ಲಿದ್ದು ನೀನು ಪ್ರಾರ್ಥನೆ ಮಾಡುವುದೆಲ್ಲಾ ಪ್ರಯೋಜನವಿಲ್ಲ ಎಂದು ಪಿಸುಗುಟ್ಟುತ್ತಾನೆ; ನೀನು ಆ ತಪ್ಪನ್ನು ಮಾಡಲಿಲ್ಲವೇ? ನೀನು ದೇವರಿಗೆ ವಿರುದ್ಧ ಪಾಪಮಾಡಿ ನಿನ್ನ ಸ್ವಂತ ಮನಸ್ಸಾಕ್ಷಿಯನ್ನು ಪ್ರತಿಭಟಿಸಿದ್ದೀ; ಆದರೆ ನಾವು ನಮ್ಮ ವಿರೋಧಿಗೆ ಹೇಳಬಹುದಾದ್ದೇನಂದರೆ: “ಆತನ ಮಗನಾದ ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣಮಾಡಿ ನಮ್ಮನ್ನು ಶುದ್ಧಿಮಾಡುತ್ತದೆ.” 1 ಯೋಹಾನ 1: 7. ನಾವು ಪಾಪ ಮಾಡಿದ್ದೇವೆ, ಆದುದರಿಂದ ಪ್ರಾರ್ಥನೆ ಮಾಡಲಾಗುವುದಿಲ್ಲವೆಂದು ನಾವು ಭಾವಿಸುವಾಗಲೇ, ಪ್ರಾರ್ಥನೆ ಮಾಡುವದಕ್ಕೆ ಅದೇ ಸುಸಮಯ. ನಾವು ಲಜ್ಜೆಯುಳ್ಳವರಾಗಿ ಕುಗ್ಗಿಹೋಗಿರಬಹುದು; ಆದರೆ ನಾವು ಪ್ರಾರ್ಥನೆ ಮಾಡಲೇಬೇಕು, ಮತ್ತು ನಂಬಲೇಬೇಕು. “ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ತಾನೇ ಮುಖ್ಯನು.” 1 ತಿಮೋಥೆ 1: 15. ಕ್ಷಮಾಪಣೆಯು, ದೇವರೊಡನೆ ಸಮಾಧಾನವೂ, ನಮ್ಮ ಪುಣ್ಯಕಾರ್ಯಗಳ ಬಹುಮತಿಯಾಗಿ ಬಂದುದಲ್ಲ, ಪಾಪಭರಿತರಾದಮ್ನವರ ಅರ್ಹತೆಯಿಂದ ಅನುಗ್ರಹಿ ಸಲ್ಪಟ್ಟದ್ದಲ್ಲ, ಆದರೆ ದೇವರಿಂದಾದ ಉಚಿತ ವರವಾಗಿದೆ, ಇದಕ್ಕೆ ಕ್ರಿಸ್ತನ ಕಳಂಕವಿಲ್ಲದ ನೀತಿಯೇ ಆಧಾರವಾಗಿದೆ. ನಾವು ಪಾಪಗಳನ್ನು ನೆಪಗಳಿಂದ ನಿವಾರಿಸುತ್ತಾ ನಮ್ಮ ಅಪರಾಧಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬಾರದು. ಪಾಪ ವಿಚಾರವಾದ ದೇವರ ಗಣನೆಯನ್ನು ನಾವು ಅಂಗೀಕರಿಸಿಕೊಳ್ಳಬೇಕು, ಅದಿ ನಿಶ್ಚಯವಾಗಿಯೂ ಭಾರವೆ. ಪಾಪದಘೋರ ವೈಪರೀತ್ಯವನ್ನು ಕಲ್ವೇರಿಯೊಂದೇ ವ್ಯಕ್ತಪಡಿಸಬಲ್ಲುದು. ನಾವೇ ನಮ್ಮ ಅಪರಾಧಗಳನ್ನು ಹೊರುವುದಾದರೆ ಅದು ನಮ್ಮನ್ನು ಜಜ್ಜಿಬಿಡುವದು, ಆದರೆ ಪಾಪರಹಿತನಾದಾತನು ನಮ್ಮ ಸ್ಥಾನವನ್ನು ತೆಗೆದುಕೊಂಡಿದ್ದಾನೆ; ನಾವು ಅರ್ಹರಲ್ಲದಿದ್ದರೂ, ಆತನು ನಮ್ಮ ಅಪರಾಧಗಳನ್ನು ಹೊತ್ತುಕೊಂದನು. “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ: ದೇವರು “ನಂಬಿಗಸ್ಥನೂ ನೀತಿವಂತನೂ ಆಗಿರುವುದರಿಮ್ದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನೂ ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.” 1 ಯೋಹಾನ 1: 9. ಮಹತ್ವವಾದ ಸತ್ಯ!- ತನ್ನ ಆಜ್ಞೆಯಂತೆ ನಿಷ್ಪಕ್ಷಪಾತಿಯಾಗಿದ್ದಾನೆ, ಆದರೂ ಯೇಸುವನ್ನು ನಂಬುವವರೆಲ್ಲರ ಹೊಣೆಯಾಗಿದ್ದಾನೆ.” ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವಾಸ್ತ್ಯದವರಲ್ಲಿ ಉಳಿದವರ ಅಪರಾಧವನ್ನು ಕ್ಷಮಿಸುವವನೂ ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ; ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ, ಕರುಣೆಯೇ ಆತನಿಗೆ ಇಷ್ಟ” ಮೀಕ 7: 18. MBK 117.1