ಪರ್ವತ ಪ್ರಸಂಗ
“ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು.”
ಯೇಸುವು ನಮಗೆ ಕಲಿಸಿದ ಪ್ರಾರ್ಥನೆಯ ಪರಮಾರ್ಥವು ದೇವರ ನಾಮವನ್ನೂ ರಾಜ್ಯವನ್ನೂ ಮತ್ತು ಆತನ ಚಿತ್ತವನ್ನು ಕುರಿತದ್ದಾಗಿದೆ,-ಆತನ ಹೆಸರು ಪರಿಶುದ್ಧವೆಂದೆಣಿಸಲ್ಪಡಬೇಕು. ಆತನ ರಾಜ್ಯವು ಸ್ಥಾಪನೆಯಾಗಬೇಕು, ಆತನ ಚಿತ್ತವು ನೆರವೇರಬೇಕು, ಹೀಗೆ ದೇವರ ಸೇವೆಯನ್ನು ನಿನ್ನ ಪ್ರಥಮ ಧ್ಯೆಯವನ್ನಾಗಿ ಮಾಡಿದ ತರುವಾಯ, ನಿನ್ನ ಅವಶ್ಯಕತೆಗಳನ್ನು ಒದಗಿಸುವಂತೆ ಆತನಲ್ಲಿ ಭರವಸೆಯಿಂದ ವಿಜ್ಞಾಪಿಸಬಹುದು. ನೀನು ಸ್ವಾರ್ಥತೆಯನ್ನು ತ್ಯಜಿಸಿ, ನಿನ್ನನ್ನು ಸಂಪೂರ್ಣವಾಗಿ ಕ್ರಿಸ್ತನಿಗೊಪ್ಪಿಸಿದರೆ, ನೀನು ದೇವರ ಕುಟುಂಬದ ಒಂದು ಅಂಗವಾಗಿರುವಿ, ಮತ್ತು ತಂದೆಯ ಮನೆಯಲ್ಲಿರುವುದೆಲ್ಲಾ ನಿನಗೋಸ್ಕರವಾಗಿಯೇ ಇರುವುವು. ದೇವರ ಸಕಲ ಸಮ್ಫತ್ತೂ ನಿನಗೆ ತೆರೆದಿವೆ, ಈವಾಗ ಇರುವ ಮತ್ತು ಮುಂದೆ ಬರುವ ಲೋಕಗಳೆರಡರ ಸಂಪತ್ತೂ ನಿನ್ನವೇ. ದೇವದೂತರ ಸೇವೆ, ಪವಿತ್ರಾತ್ಮನ ವರದಾನ, ಆತನ ಸೇವಕರ ದುಡಿಮೆ,-ಇವೆಲ್ಲವೂ ನಿನಗಾಗಿವೆ. ಲೋಕವೂ ಅದರಲ್ಲಿರುವುದೆಲ್ಲವೂ, ನಿನಗೆ ಒಳ್ಳೇದನ್ನು ಮಾಡುವಮಟ್ಟಿಗೂ ನಿನ್ನವು. ವಿರೋಧಿಗಳ ದ್ವೇಷವೂ ನಿನಗೊಂದು ಆಶೀರ್ವಾದವಾಗಿಯೇ ಪರಿಣಮಿಸುವುದು. ಹೀಗೆ ನಿನ್ನನ್ನು ಪರಲೋಕಕ್ಕೆ ಅರ್ಹನಾಗುವಂತೆ ಮಾಡಲು ಶಿಕ್ಷಣವಾಗಿರುವುದು. “ನೀವಂತೂ ಕ್ರಿಸ್ತನವರು.” ಆದ್ದರಿಮ್ದ “ಸಮಸ್ತವೂ ನಿಮ್ಮದು”. 1 ಕೊರಿಂಥ 3: 23, 21. MBK 112.2
ಆದರೆ ನೀನು ಇನ್ನೂ ನಿನ್ನ ಸ್ವಾಸ್ತ್ಯದ ಹಕ್ಕನ್ನು ಹೊಂದದಿರುವ ಮಗುವಿನಂತಿದ್ದೀ. ಸೈತಾನನು ಏದೇನಿನಲ್ಲಿ ಪ್ರಥಮ ದಂಪತಿಗಳನ್ನು ವಂಚಿಸಿದಂತೆ ನಿಮ್ಮನ್ನೂ ವಂಚಿಸದಿರಲೆಂದು, ದೇವರು ನಿಮ್ಮ ಅಮೂಲ್ಯ ಸ್ವಾಸ್ತ್ಯವನ್ನು ನಿಮಗೆ ಒಪ್ಪಿಸುವುದಿಲ್ಲ. ಕ್ರಿಸ್ತನು ತಾನೇ ಅದನ್ನು ನಾಶಕನ ಕೈಗೆ ಸಿಗದಂತೆ ಸಂತಕ್ಷಿಸುತ್ತಿರುವನು. ಚಿಕ್ಕ ಮಗುವಿನಂತೆ ನೀನು, ನಿನಗೆ ಅನುದಿನಕ್ಕೆ ಅವಶ್ಯಕವಾದುದನ್ನು ಹೊಂದುವಿ. “ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ನಮಗೆ ದಮಗೆ ದಯಪಾಲಿಸು” ಎಂದು ನಿತ್ಯವೂ ನೀನು ಪ್ರಾರ್ಥಿಸಬೇಕು. ನಾಳೆಯ ದಿನಕ್ಕೆ ನಿನ್ನಲ್ಲಿ ಸಾಕಷ್ಟಿಲ್ಲದಿದ್ದರೆ ಭಯಪಡಬೇಡ. “ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು. ಆತನು ನಿನ್ನ ಇಷ್ಟಾರ್ಥಗಳನೆಲ್ಲಾ ನೆರವೇರಿಸುವನು.” ಎಂಬ ವಾಗ್ದಾನದ ಭರವಸೆಯು ನಿನಗಿದೆ, ಮತ್ತು ದಾವೀದನು ಹೇಳುವುದೇನಂದರೆ: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವುದನ್ನಾಗಲೀ ಅವನ ಸಂತತಿಯವರು ಭಿಕ್ಷೆ ಬೇಡಿ ತಿನ್ನುವುದನ್ನಾಗಲೀ ನೋಡಲಿಲ್ಲ. ಕೀರ್ತನೆ 37:3, 25. ಕರೀತ್ ಹಳ್ಳದ ಬಳಿ ಎಲೀಯನ ಪೋಷಣೆಗಾಗಿ ಕಾಗೆಗಳ ಮೂಲಕ ಆಹಾರವನ್ನು ಕಳುಹಿಸಿ ದೇವರು ನಂಬಿಗಸ್ತನೂ ಸ್ವಾರ್ಥಕ್ಕಾಗಿಯೂ ಆದ ಮಕ್ಕಳಲ್ಲಿ ಒಬ್ಬನನ್ನೂ ಹಾದುಹೋಗನು. ನೀತಿವಂತರಾಗಿ ನಡೆಯುವವನನ್ನು ಕುರಿತು ಹೇಳುವುದೇನಂದರೆ: ಅವನಿಗೆ “ಅನ್ನವು ಉಚಿತವಾಗಿ ಒದಗುವುದು, ನೀರೂ ನಿಸ್ಸಂದೇಹ.” “ಅವರಿಗೆ ವಿಪತ್ಕಾಲದಲ್ಲಿಯೂ ಆಶಾಭಂಗವಾಗದು, ಬರಗಾಲದಲ್ಲಿಯೂ ಅವರಿಗೆ ಕೊರತೆಯಿಲ್ಲ’ “ಸ್ವಂತಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ” ಯೆಶಾಯ 33: 16; ಕೀರ್ತನೆ 37: 19; ರೋಮಾಯ 8: 32. ವಿಧವೆಯಾದ ತನ್ನ ತಾಯಿಯ ಚಿಂತಾಭಾರಗಳನ್ನೆಲ್ಲಾ ಪರಿಹರಿಸಿ, ನಜರೇತಿನಲ್ಲಿ ಕುಟುಂಬದ ಜೀವನೋಪಾಯವನ್ನು ಒದಗಿಸಿದಾತನು, ತನ್ನ ಮಕ್ಕಳ ಪೋಷಣೆಗಾಗಿ ದುಡಿಯುವ ಪ್ರತಿಯೊಬ್ಬ ತಾಯಿಗೂ ಸಹಾನುಭೂತಿ ತೋರುವವನಾಗಿದ್ದಾನೆ. ತೊಳಲಿ ಬಳಲಿ ಹೋಗಿದ್ದ (ಮತ್ತಾಯ 9: 36), ಜನಸಮೂಹವನ್ನು ಕನಿಕರಿಸಿದಾತನು, ಈಗಲೂ ಸಂಕಟಪಡುವ ಬಡವರನ್ನು ಕನಿಕರಿಸುತ್ತಾನೆ. ಆಶೀರ್ಆದ ಭರಿತವಾಗಿ ಆತನ ಕರಗಳು ಅವರ ಕಡೆಗೆ ಚಾಚಲ್ಪಟ್ಟಿವೆ; ಮತ್ತು ಯೇಸುವು ತನ್ನ ಶಿಷ್ಯರಿಗೆ ಕಲಿಸಿದ ಪ್ರತಿಯೊಂದು ಪ್ರಾರ್ಥನೆಯಲ್ಲೂ ಬಡವರನ್ನು ಜ್ಞಾಪ್ತಿ ಮಾಡಿಕೊಳ್ಳುವಂತೆ ಬೋಧಿಸುತ್ತಾನೆ. MBK 112.3
“ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ನಮಗೆ ದಯಪಾಲಿಸು” ಎಂದು ನಾವು ಪ್ರಾರ್ಥಿಸುವಾಗ, ನಮಗೋಸ್ಕರವಾಗಿ ಮಾತ್ರವಲ್ಲದೆ ಇತರರಿಗಾಗಿಯೂ ವಿಜ್ಞಾಪಿಸುತ್ತೇವೆ. ದೇವರು ನಮಗೆ ಕೊಡುವಂಥಾದ್ದು ನಮ್ಮೊಬ್ಬರಿಗೆ ಮಾತ್ರವೇ ಅಲ್ಲವೆಂದು ಅರಿತವರಾಗಿದ್ದೇವೆ. ಹಸಿದವರಿಗೆ ಅನ್ನವನ್ನಿಕ್ಕುವೆವೆಂಬ ಭರವಸೆಯಿಮ್ದ ದೇವರು ನಮಗೆ ಅನುಗ್ರಹಿಸುತ್ತಾನೆ. “ದೇವರು ದಯಾಪರನಾಗಿ ದರಿದ್ರರಿಗೆ ಬೇಕಾದ್ದೆಲ್ಲವನ್ನು ಸವರಿಸಿಕೊಟ್ಟ.” ಕೀರ್ತನೆ 68: 10. ಮತ್ತು ಆತನು ಹೇಳುವುದೇನಂದರೆ: “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲೀ, ನಿನ್ನ ಅಣ್ಣ ತಮ್ಮಂದಿರನ್ನಾಗಲೀ, ನಿನ್ನ ಬಂಧುಬಾಂಧವರನ್ನಾಗಲೀ ಐಸ್ವರ್ಯವಂತರಾದ ನೆರೆಯವರನ್ನಾಗಲೀ ಕರೆಯಬೇಡ...ಆದರೆ ನೀನು ಔತಣ ಮಾಡಿಸುವಾಗ ಬಡವರು, ಊನಾದವರು, ಕುಂಟರು, ಕುರುಡರು ಇಂಥವರನ್ನು ಕರೆ; ಅವರು ನಿನಗೆ ಮುಯ್ಯಿಗೆ ಮುನಿಮಾಡುವುದಕ್ಕೆ ಏನೂ ಇಲ್ಲದವರಾಗಿದ್ದರೂ ನೀತಿವಂತರು ಜೀವಿತರಾಗಿ ಎದ್ದು ಬರುವಲ್ಲಿ ನನಗೆ ಮುಯ್ಯಿಗೆ ಮುಯ್ಯಾಗುವುದರಿಂದ ನೀನು ಧನ್ಯನಾಗುವಿ ಅಂದನು.” ಲೂಕ 14: 12-14. MBK 113.1
“ದೇವರು ಸಕಲವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತನಾದ್ದರಿಮ್ದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು”. ” ಆದರೆ ಸ್ವಲ್ಪವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂದು ತಿಳಿದುಕೊಳ್ಳಿರಿ.” 2 ಕೊರಿಂಥ 9: 8. 6. MBK 114.1
ಅನುದಿನದ ಆಹಾರಕ್ಕಾಗಿ ಪ್ರಾರ್ಥಿಸುವುದು ದೇಹಪೋಷಣೆಗೆ ಅವಶ್ಯವಾದ ಆಗಾರವನ್ನು ಮಾತ್ರವಲ್ಲದೆ ನಿತ್ಯಜೀವಕ್ಕಾಗಿ ಆತ್ಮವನ್ನು ಪೋಷಿಸುವ ಆಹಾರವನ್ನೂ ಒಳಗೊಂಡಿದೆ. ಯೇಸುಸ್ವಾಮಿಯು ಹೇಳುವುದೇನಂದರೆ: “ಕೆಟ್ಟು ಹೋಗುವ ಆಹಾರಕ್ಕಾಗಿ ದುಡಿಯಬೇಡಿರಿ, ನಿತ್ಯ ಜೀವಕ್ಕೆ ಉಳಿಯುವ ಆಹಾರಕ್ಕಾಗಿ ದುಡಿಯಿರಿ.” “ಪರಲೋಕದಿಮ್ದ ಇಳಿದುಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು.” ಯೋಹಾನ 6:27, 51. ನಮ್ಮ ರಕ್ಷಕನು ತಾನೇ ಜೀವಕೊಡುವ ರೊಟ್ಟಿಯಾಗಿದ್ದಾನೆ, ಆತನ ಪ್ರೀತಿಯನ್ನು ದೃಷ್ಟಿಸುವುದರ ಮೂಲಕವೂ, ಅದನ್ನು ಆತ್ಮಕ್ಕೆ ಸ್ವೀಕರಿಸುವುದರ ಮೂಲಕವೂ, ಪರಲೋಕದಿಂದ ಇಳಿದುಬಂದ ರೊಟ್ಟಿಯನ್ನು ತಿನ್ನುವವರಾದ್ದೇವೆ. MBK 114.2
ಕ್ರಿಸ್ತನನ್ನು ನಾವು ಆತನ ವಾಕ್ಯದ ಮೂಲಕ ಅಂಗೀಕರಿಸುತ್ತೇವೆ; ಮತ್ತು ನಾವು ದೇವರ ವಾಕ್ಯವನ್ನು ಗ್ರಹಿಸಿಕೊಳ್ಳುವ ಹಾಗೆ ಯಾವತ್ತು ನಮ್ಮ ಹೃದಯಕ್ಕೆ ಅದರ ಸತ್ಯಗಳನ್ನು ತರಲಿಕ್ಕೂ ನಮಗೆ ಪರಿಶುದ್ಧಾತ್ಮನು ಅನುಹ್ರಹಿಸಲ್ಪಡುವನು. ಆತನ ವಾಕ್ಯವನ್ನು ಓದುವಾಗಲೆಲ್ಲಾ, ದೇವರು ತನ್ನ ಆತ್ಮನನ್ನು ದಯಪಾಲಿಸಿ ತನ್ನ ಸತ್ಯಗಳನ್ನು ನಮಗೆ ವ್ಯಕ್ತಪಡಿಸುವಂತೆಯೂ ಅದರಿಂದ ನಮ್ಮ ಆತ್ಮ ಗಳು ಆಯಾ ದಿನದ ಅವಶ್ಯಕತೆಗಾಗಿ ಬಲಪಡಿಸುವಂತೆಯೂ ನಾವು ಪ್ರತಿದಿನವೂ ಪ್ರಾರ್ಥಿಸಬೇಕು. MBK 114.3
ನಮಗೆ ಬೇಕಾದುವುಗಳನ್ನು,-ಐಹಿತ ಮತ್ತು ಆತ್ಮೀಕವಾದವುಗಳನ್ನು,-ಪ್ರತಿದಿನವೂ ಕೇಳುವಂತೆ ಹೇಳುವುದರಲ್ಲಿ ನಮ್ಮ ಒಳ್ಳೆಯದಕ್ಕಾಗಿ ನೆರವೇರಿಸಬೇಕಾದ ದೇವರ ಮಹೋದ್ದೇಶವೊಂದಿದೆ. ಆತನ ಎಡೆಬಿಡದ ಸಂರಕ್ಷಣೆಯ ಮೇಲೆ ನಾವು ಆತುರಕೊರಡಿದ್ದೇವೆಂಬುದನ್ನು ಗ್ರಹಿಸಬೇಕೆಂದು ಇಚ್ಛಿಸುತ್ತಾನೆ; ಯಾಕೆಂದರೆ ಆತನು ನಮ್ಮನ್ನು ತನ್ನ ಅನ್ಯೋನ್ಯತೆಗೆ ಸೆಳೆಯುವವನಾಗಿದ್ದಾನೆ. ಪ್ರಾರ್ಥನೆಯ ಮೂಲಕವೂ ಮತ್ತು ಆತನ ವಾಕ್ಯದ ಅತ್ಯಮೂಲ್ಯವಾದ ಸತ್ಯಗಳ ಪಠನೆಯಿಂದಲೂ ನಾವು ಹೊಂದುವ ಕ್ರಿಸ್ತನ ಸಂಪರ್ಕದಿಮ್ದ, ಹಸಿದವರು ಹೇಗೋ ಹಾಗೆ ತೃಪ್ತಿಹೊಂದುವೆವು; ಬಾಯಾರಿದವರಂತೆ ಜೀವಬುಗ್ಗೆಯಲ್ಲಿ ಪಾನಗೈದು ನವಚೈತನ್ಯ ಹೊಂದುವೆವು. MBK 115.1