ಪರ್ವತ ಪ್ರಸಂಗ
ನೀವು ಲೋಕಕ್ಕೆ ಬೆಳಕಾಗಿದ್ದೀರಿ
ಯೇಸುವು ಜನರಿಗೆ ಉಪದೇಶಿಸುತ್ತಾ, ತನ್ನ ಉಪದೇಶವನ್ನು ಸ್ವಾರಸ್ಯವಾಗಿ ಮಾಡಿದನು ಮತ್ತು ಅದರ ಸುತ್ತಲೂ ಇದ್ದ ಪ್ರಕೃತಿ ದೃಶ್ಯದಿಂದಲೇ ಪದೇ ಪದೇ ದೃಷ್ಟಾಂತಗಳನ್ನು ಕೊಡುತ್ತಾ ಕೇಳುವವರ್ ಗಮನವನ್ನು ಸೆಳೆದನು. ಈ ಜನರು ಅರುಣೋದಯದಲ್ಲೇ ಕೂಡಿಬಂದವರು. ಪ್ರಭಾವಶಾಲಿಯಾದ ಸೂರ್ಯನು ನೀಲಾಕಾಶದಲ್ಲಿ ಉನ್ನತಿಗೇರುತ್ತಾ, ಕಣಿವೆಗಳಲ್ಲಿಯೂ, ಪರ್ವತಗಳ ಇಕ್ಕಟ್ಟಾದ ಪ್ರದೇಶದಲ್ಲಿಯೂ ಅಡಗಿದ್ದ ಛಾಯೆಯನ್ನೋಡಿಸುತ್ತಾ ಇತ್ತು. ಪೂರ್ವ ದಿಕ್ಕಿನಲ್ಲಿ ಆಕಾಶದ ಪ್ರಭಾವವು ಇನ್ನೂ ಕಳೆಗುಂದಿರಲಿಲ್ಲ. ಸೂರ್ಯನ ಜ್ವಾಲೆಯು ಭೂಮಿಯನ್ನು ತೇಜಸ್ಸಿನಿಂದ ಆವರಿಸಿತ್ತು. ಸರೋವರದ ಸೌಮ್ಯಕ್ಷೇತ್ರವು ಮೊಂಬೆಳಕನ್ನೂ ಅರುಣೋದಯದ ಗುಲಾಬಿರಂಗಿನ ಮೇಘಗಳನ್ನೂ ಪ್ರತಿಬಿಂಬಿಸಿತು ಪ್ರತಿಯೊಂದು ಮೊಗ್ಗೂ, ಪುಷ್ಪವೂ ಮತ್ತು ಎಲೆಗೊಂಚಲೂ ಇಬ್ಬನಿಯ ಕಣಗಳಿಂದ ಕೂಡಿ ಥಳಥಳಿಸುತ್ತಿದ್ದುವು. ಪ್ರಕೃತಿಯು ಮತ್ತೊಂದು ಹೊಸ ದಿನದ ಆಶೀರ್ವಾದದ ಮಡಲಲ್ಲಿ ಕಿರುನಗೆಯನ್ನು ಸೂಸುತ್ತಿತ್ತು, ಪಕ್ಷಿಗಳು ವೃಕ್ಷಗಳಲ್ಲಿ ಕುಳಿತು ಇಂಪಾಗಿ ಹಾಡುತ್ತಿದ್ದುವು. ರಕ್ಷಕನು ತನ್ನ ಮುಂದೆ ಕೂಡಿದ್ದ ಸಮೂಹವನ್ನು ದೃಹ್ಟಿಸಿ, ತರುವಾಯ ಉದಯಿಸುತ್ತಿದ್ದ ಸೂರ್ಯನನ್ನು ನೋಡಿ ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ನೀವು ಲೋಕಕ್ಕೆ ಬೆಳಕಾಗಿದ್ದೀರಿ.” ಸೂರ್ಯನು ತನಗೆ ನೇಮಿಸಲ್ಪಟ್ಟ ಪ್ರೀತಿಯ ಪ್ರಯಾಣಗಮನನಾಗಿ ಓಡುತ್ತಾ, ಅಂಧಕಾರದ ಛಾಯೆಯನ್ನು ತೊಲಗಿಸುತ್ತಾ, ಪ್ರಪಂಚವನ್ನು ಜೇವಕ್ಕೆ ಎಚ್ಚರಗೊಳಿಸುತ್ತಾ ಹೋಗುವಂತೆ ಕ್ರಿಸ್ತನ ಹಿಂಬಾಲಕರೂ ತಮ್ಮ ಕಾರ್ಯಗಮನರಾಗಿ ಹೋಗುತ್ತಾ ತಮ್ಮ ದೋಷದಲ್ಲೂ ಮತ್ತು ಪಾಪದಲ್ಲೂ ಸಿಲುಕಿರುವವರ ಮೇಲೆ ಪರಲೋಕದ ಬೆಳಕನ್ನು ಸೂಸುತ್ತಿರಬೇಕು. MBK 43.2
ಉದಯದ ಉಜ್ವಲ ಕಾಂತಿಯಲ್ಲಿ ಸುತ್ತಲಿನ ಗಡ್ಡಗಳ ಮೇಲೆ ಕಟ್ಟಲ್ಪಟ್ಟಿದ್ದ ನಗರಗಳೂ ಗ್ರಾಮಗಳೂ ದೃಶ್ಯವನ್ನು ಆಕರ್ಷನೀಯವಾಗಿಸುತ್ತಾ ಸ್ಫುಟವಾಗಿ ಎದ್ದು ತೋರುತ್ತಿದ್ದವು. ಅವುಗಳ ಕಡೆಗೆ ತೋರಿಸುತ್ತಾ ಯೇಸುವು ಹೇಳಿದ್ದೇನಂದರೆ, “ಗಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು,” ಮತ್ತೂ ಆತನು ಹೇಳಿದ್ದು, “ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ, ದೀಪಸ್ಥಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯವರೆಲ್ಲರಿಗೆ ಬೆಳಕು ಕೊಡುವುದು.” ಯೇಸುವಿನ ಉಪದೇಶವನ್ನು ಕೇಳಿದವರಲ್ಲಿ ಹೆಚ್ಚಿಗೆ ಬೇಸಾಯಗಾರರೂ ಮತ್ತು ಬೆಸ್ತರೂ ಇದ್ದರು; ಇವರ ವಿನೀತ ವಾಸಗೃಹಗಳಲ್ಲಿದ್ದ ಒಂದೇ ಕೋಣೆಯಲ್ಲಿ ಒಂದೇ ಒಂದು ದೀಪವು ದೀಪಸ್ಥಂಭದ ಮೇಲಿಡಲ್ಪಟ್ಟು ಮನೆಯವರೆಲ್ಲರಿಗೆ ಬೆಳಕು ಕೊಡುತ್ತಿತ್ತು. ಯೇಸುವು ಹೇಳಿದ್ದು “ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” MBK 44.1
ಕ್ರಿಸ್ತನಿಂದ ಉದ್ಭವಿಸುವ ಬೆಳಕೇ ಹೊರತು ಬೇರಾವುದೂ ಬಿದ್ದುಹೋದ ಮನುಷ್ಯನ ಮೇಲೆ ಪ್ರಕಾಶಿಸಲಿಲ್ಲ, ಮುಂದೆಯೂ ಪ್ರಕಾಶಿಸದು. ಪಾಪಾಂಧಕಾರದಲ್ಲಿ ಮುಳುಗಿರುವ ಲೋಕವನ್ನು ಬೆಳಗಿಸಲು ಯೇಸು ರಕ್ಷಕನೊಬ್ಬನೇ ಬೆಳಕಾಗಿದ್ದಾನೆ. ಕ್ರಿಸ್ತನ ವಿಷಯದಲ್ಲಿ ಬರೆಯಲ್ಪಟ್ಟಿರುವುದೇನಂದರೆ, “ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು” ಯೋಹಾನ 1:4. ಆತನ ಶಿಷ್ಯರು ಆತನ ಜೀವ್ಯವನ್ನು ಹೊಂದುವುದರಿಂದಲೇ ಬೆಳಕನೊಯ್ಯುವವರಾಗುವರು. ಆತ್ಮದಲ್ಲಿ ಯೇಸುವಿನ ಜೀವ್ಯವೂ, ಗುಣಗಳಲ್ಲಿ ವ್ಯಕ್ತವಾದ ಆತನ ಪ್ರೀತಿಯೂ ಅವರನ್ನು ಲೋಕಕ್ಕೆ ಬೆಳಕನ್ನಾಗಿ ಮಾಡುವವು. MBK 45.1
ಮಾನವತ್ವವು ತನ್ನಲ್ಲೇ ಬೆಳಕನ್ನು ಹೊಂದಿಲ್ಲ. ಕ್ರಿಸ್ತನಿಲ್ಲದೆ ನಾವು ಹೊತ್ತಿಸಲ್ಪಡದ ಒಂದು ಮೋಂಬತ್ತಿಯ ಹಾಗೆ, ಸೂರ್ಯನಿಂದ ಮರೆಯಾದ ಚಂದ್ರನ ಹಾಗೆ; ಲೋಕದ ಅಂಧಕಾರದ ಮೇಲೆ ಸೂಸಲು ನಮ್ಮಲ್ಲಿ ಪ್ರಕಾಶವುಳ್ಳ ಒಂದೇ ಒಂದು ಕಿರಣವೂ ಇಲ್ಲ. ಆದರೆ ನಾವು ನೀತಿಸೂರ್ಯನ ಕಡೆಗೆ ತಿರುಗಿದಾಗ, ಕ್ರಿಸ್ತನೊಡನೆ ಸಂಪರ್ಕವನ್ನು ಹೊಂದಿದಾಗ, ನಮ್ಮ ಆತ್ಮವು ಸಂಪೂರ್ಣ್ವಾಗಿ ದೈವಪ್ರಸನ್ನತೆಯ ಜ್ವಾಲೆಯಿಂದ ಪ್ರಜೊಲಿಸುವುದು. MBK 45.2
ಕ್ರಿಸ್ತನ ಅನುವರ್ತಕರು ಮನುಷ್ಯರ ನಡುವೆ ಒಂದು ಬೆಳಕಿಗಿಂತಲೂ ಅಧಿಕರಾಗಿರಬೇಕು. ಅವರು ಲೋಕಕ್ಕೆ ಬೆಳಕಾಗಿದ್ದಾರೆ. ಆತನ ನಾಮಧಾರಿಗಳಾದವರಿಗೆ ಕ್ರಿಸ್ತನು ಹೇಳುವುದೇನಂದರೆ, ನೀವು ನಿಮ್ಮನ್ನು ನನಗೆ ಒಪ್ಪಿಸಿಕೊಟ್ಟಿದ್ದೀರಿ, ನಾನು ನಿಮ್ಮನ್ನು ಲೋಕಕ್ಕೆ ನನ್ನ ಪ್ರತಿನಿಧಿಗಳನ್ನಾಗಿ ಒಪ್ಪಿಸಿದ್ದೇನೆ. ತಂದೆಯು ಆತನನ್ನು ಈ ಲೋಕಕ್ಕೆ ಕಳುಹಿಸಿರುವ ರೀತಿಯಲ್ಲಿ, “ನಾನೂ ಇವರನ್ನು ಲೋಕಕ್ಕೆ ಕಳುಹಿಸಿಕೊಟ್ಟೆನು,” (ಯೋಹಾನ 17:18) ಎಂದು ಹೇಳುತ್ತಾನೆ. ಕ್ರಿಸ್ತನು ದೇವರ ಪ್ರಕಟನೆಗೆ ಸಾಧನವಾಗಿರುವಂತೆ ನಾವು ಕ್ರಿಸ್ತನನ್ನು ಪ್ರಕಟಿಸುವ ಸಾಧನವಾಗಿದ್ದೇವೆ. ನಮ್ಮ ರಕ್ಷಕನು ಕಾಂತಿಬೀರುವ ಮಹಾಮೂಲನಾಗಿರುವಂತೆ ಓ! ಕ್ರೈಸ್ತನೇ ಆತನು ಮಾನವತ್ವದ ಮೂಲಕವಾಗಿಯೇ ಪ್ರಕಟವಾಗುತ್ತಾನೆಂಬುದನ್ನು ಮರೆಯದಿರು. ದೇವರ ಆಶೀರ್ವಾದಗಳು ಮಾನವ ಸಾಧನದ ಮೂಲಕವೇ ಅನುಗ್ರಹಿಸಲ್ಪಡುತ್ತವೆ. ಕ್ರಿಸ್ತನು ತಾನೇ ಮನುಷ್ಯಕುಮಾರನಾಗಿ ಈ ಲೋಕಕ್ಕೆ ಬಂದನು. ದೈವಸ್ವಭಾವದೊಡನೆ ಮಿಲನವಾದ ಮಾನವತ್ವವೇ, ಮಾನವರನ್ನು ಸ್ಪರ್ಶಿಸಬೇಕು. ಕ್ರಿಸ್ತನ ಸಭೆಯೂ, ಗುರುವಿನ ಪ್ರತಿಯೊಬ್ಬ ಶಿಷ್ಯನೂ, ದೇವರಿಂದ ನೇಮಿಸಲ್ಪಟ್ಟು ಮಾನವರಿಗೆ ದೈವಪ್ರಕಟನೆಯನೊಯ್ಯುವ ವಾಹಕವಾಗಿದ್ದಾನೆ. ಮಹಿಮೆಯ ದೂತರು ನಾಶವಾಗಲಿರುವ ಆತ್ಮಗಳಿಗೆ ಪರಲೋಕದ ಪ್ರಕಾಶವನ್ನೂ ಶಕ್ತಿಯನ್ನೂ ನಿನ್ನ ಮೋಲಕ ನಿವೇದಿಸಲು ಕಾದಿದ್ದಾರೆ. ಮಾನವ ರಾಯಭಾರಿಯು ತನಗೆ ನಿಯಮಿಸಲ್ಪಟ್ಟ ಕಾರ್ಯವನ್ನು ನಿರ್ವಹಿಸಲು ತಪ್ಪಬಹುದೇ? ಓ, ಹಾಗಾದರೆ ಲೋಕವು ವಾಗ್ದಾನ ಮಾಡಲ್ಪಟ್ಟ ಪರಿಶಿದ್ಧಾತ್ಮನ ಪ್ರಭಾವದಿಂದ ಇಷ್ಟು ಮೋಸವಾಗಿದೆ! MBK 45.3
ಆದರೆ ಯೇಸುವು ತನ್ನ ಶಿಷ್ಯರಿಗೆ “ನಿಮ್ಮ ಬೆಳಕು ಪ್ರಕಾಶಿಸುವಂತೆ ಮಾಡಲು ಹೆಣಗಾಡಿರಿ” ಎಂದು ಹೇಳಲಿಲ್ಲ. ಆತನು ಹೇಳಿದ್ದೇನಂದರೆ “ನಿಮ್ಮ ಬೆಳಕು ಪ್ರಕಾಶಿಸಲಿ.” ಕ್ರಿಸ್ತನು ಹೃದಯದಲ್ಲಿ ವಾಸಿಸುತ್ತಿರುವುದಾದರೆ, ಆತನ ಪ್ರಸನ್ನತೆಯ ಬೆಳಕನ್ನು ಬಚ್ಚಿಡಲು ಅಸಾಧ್ಯ. ಕ್ರಿಸ್ತನ ಅನುವಾಯಿಗಳೆಂದು ಹೇಳಿಕೊಳ್ಳುವವರು ಭೂಮುಗೆ ಬೆಳಕಾಗಿರದೆ ಹೋದರೆ, ಜೀವಂತ ಶಕ್ತಿಯು ಅವರನ್ನು ಬಿಟ್ಟು ಹೋಗಿರುವುದೇ ಇದಕ್ಕೆ ಕಾರಣ; ಇತರರಿಗೆ ಕೊಡಲು ಅವರಲ್ಲಿ ಬೆಳಕಿಲ್ಲದೆ ಹೋದರೆ, ಬೆಳಕಿಗೆ ಮೂಲನಾದಾತನೊಡನೆ ಅವರ ಸಂಪರ್ಕವಿಲ್ಲದುದೇ ಕಾರಣ್. MBK 46.1
ಎಲ್ಲಾ ಯುಗಗಳಲ್ಲೂ “ಅವರಲ್ಲಿದ್ದ ಕ್ರಿಸ್ತನ ಆತ್ಮನು” (1 ಪೇತ್ರ 1:11) ದೇವರ ನಿಜ ಪುತ್ರರನ್ನು ಅವರ ಸಂತತಿಯ ಜನರಿಗೆ ಬೆಳಕನ್ನಾಗಿ ಮಾಡಿದನು. ಯೋಸೇಫನು ಐಗುಪ್ತ ದೇಶದಲ್ಲಿ ಜ್ಯೋತಿವಾಹಕ (ಬೆಳಕನ್ನು ಒಯ್ಯುವವ)ನಾಗಿದ್ದನು. ಅವನು ತನ್ನ ನಿಷ್ಕಳಂಕತೆಯಲ್ಲೂ ಧರ್ಮಬುದ್ಧಿಯಲ್ಲೂ ಮತ್ತು ತಂದೆ ತಾಯಿಗಳ ಮೇಲಣ ಪ್ರೀತಿಯಿಂದಲೂ ವಿಗ್ರಹರಾಧಕರಾದ ಜನಾಂಗದವರ ಮಧ್ಯದಲ್ಲಿ ಕ್ರಿಸ್ತನನ್ನು ನಿರೂಪಿಸಿದನು. ಇಸ್ರಾಯೇಲರು ಐಗುಪ್ತದಿಂದ ವಾಗ್ದತ್ತ ದೇಶಾಭಿಮುಖವಾಗಿ ಹೋಗುವ ಸಮಯದಲ್ಲಿ ಯಥಾರ್ಥ ಹೃದಯರಾಗಿದ್ದವರು ಸುತ್ತಲಿನ ಜನಾಂಗಗಳಿಗೆ ಬೆಳಕಾಗಿದ್ದರು. ದೇವರು ಅವರ ಮೂಲಕವಾಗಿ ಲೋಕಕ್ಕೆ ವ್ಯಕ್ತಪಡಿಸಲ್ಪಟ್ಟನು. ಬಾಬಿಲೋನಿನಲ್ಲಿ ದಾನಿಯೇಲನಿಂದಲೂ ಅವನ ಮಿತ್ರರಿಂದಲೂ, ಪರ್ಶಿಯಾದಲ್ಲಿ ಮೊರ್ದೆಕೈಯ ಮೂಲಕವೂ ರಾಜಾಸ್ಥಾನದ ಅಂಧಕಾರದ ನಡುವೆ ಉಜ್ವಲ ಬೆಳಕಿನ ಕಿರಣಗಳು ಪ್ರಕಾಶಿಸಿದುವು. ಅದೇ ರೀತಿಯಲ್ಲಿ ಕ್ರಿಸ್ತನ ಶಿಷ್ಯರೂ ಪರಲೋಕ ಮಾರ್ಗದಲ್ಲಿ ದಿವ್ಯಜ್ಯೋತಿವಾಹಕರಾಗಿ ನಿಯಮಿಸಲ್ಪಟ್ಟಿದ್ದಾರೆ; ದೇವರ ವಿಷಯವಾದ ತಪ್ಪುಗ್ರಹಿಕೆಯ ಅಂಧಕಾರದಿಂದ ಮುಸುಕಲ್ಪಟ್ಟ ಲೋಕಕ್ಕೆ ಅವರ ಮೂಲಕವಾಗಿ ದೇವರ ಕೃಪೆಯೂ ಸೌಜನ್ಯವೂ ವ್ಯಕ್ತಪಡಿಸಲ್ಪಟ್ಟಿತು. ಇವರ ಸತ್ಕ್ರಿಯೆಗಳನ್ನು ನೋಡಿ, ಇತರರೂ ಪರಲೋಕದಲ್ಲಿರುವ ತಂದೆಯನ್ನು ಮಹಿಮೆಪಡಿಸಲು ನಡಿಸಲ್ಪಡುವರು; ವಿಶ್ವದ ಸಿಂಹಾಸ ನಾಧೀಶನಾದ ದೇವರೊಬ್ಬನಿದ್ದಾನೆಂದೂ ಆತನ ಸೌಜನ್ಯವು ಪ್ರಶಂಸನೀಯವಾದದ್ದೂ ಮತ್ತು ಅನುಸರಿಸಲು ಯೋಗ್ಯವಾದದ್ದೂ ಎಂದು ಪ್ರಕಟಿಸಲ್ಪಟ್ಟಿದೆ. ಹೃದಯದಲ್ಲಿ ಬೆಳಗುವ ದೈವವಾತ್ಸಲ್ಯವೂ, ಜೀವ್ಯದಲ್ಲಿ ವ್ಯಕ್ತಪಡಿಸಲ್ಪಟ್ಟ ಕ್ರಿಸ್ತನ ಹೊಂದಿಕೆಯೂ ಪರಲೋಕದಿಂದ ಭೂಲೋಕದ ಮನುಷ್ಯರಿಗೆ ಅದರ ಮೇಲ್ಮೆಯ ಶ್ಲಾಘನೆಗಾಗಿ ಅನುಗ್ರಹಿಸಲ್ಪಟ್ಟ ಕ್ಷಣಿಕವಾದ ದೃಶ್ಯವಾಗಿದೆ. MBK 46.2
ಹೀಗೆ ಮನುಷ್ಯರು “ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು” 1 ಯೋಹಾನ 4:16. ನಂಬುವಂತೆ ನಡಿಸಲ್ಪಡುವರು. ಹೀಗೆ ಒಂದು ಕಾಲದಲ್ಲಿ ಪಾಪಭರಿತವೂ ಮತ್ತು ನೀತಿಭ್ರಷ್ಟವೂ ಆಗಿದ್ದ ಹೃದಯಗಳು ಶಿದ್ಧೀಕರಿಸಲ್ಪಟ್ಟು ಮತ್ತು ಮಾರ್ಪಟ್ಟು ಆತನ “ಪ್ರಭಾವದ ಸಮಕ್ಷಮದಲ್ಲಿ ನಿರ್ದೋಷಿಗಳನ್ನಾಗಿ ಹರ್ಷದೊಡನೆ ನಿಲ್ಲಿಸುವುದಕ್ಕೆ” ಯೂದ 24, ಯೋಗ್ಯವಾಗುತ್ತವೆ. MBK 47.1
“ನೀವು ಲೋಕಕ್ಕೆ ಬೆಳಕಾಗಿದ್ದೀರಿ” ಎಂಬ ನಮ್ಮ ರಕ್ಷಕನ ವಾಕ್ಯಗಳು, ಆತನು ತನ್ನ ಹೊಂಬಾಲಕರಿಗೆ ಲೋಕಾದ್ಯಂತ ಸೇವೆಯನ್ನು ನೇಮಿಸಿದ್ದಾನೆಂಬುದು ವಾಸ್ತವವೆಂದು ವ್ಯಕ್ತವಾಗುತ್ತದೆ. ಕ್ರಿಸ್ತನ ಕಾಲದಲ್ಲಿ, ಸ್ವಾರ್ಥತೆ, ದುರಭಿಮಾನ ಮತ್ತು ಅವಿಚಾರಾಭಿಪ್ರಾಯಗಳು, ಪರಮ ಪವಿತ್ರವದ ದೈವೋಕ್ತಿಗೆ ರಕ್ಷಕರಾಗಿ ನಿಯಮಿತರಾದವರಿಗೂ ಮತ್ತು ಭೂಮಿಯ ಮೇಲೆ ಇತರೇತರ ಜನಾಂಗಗಳಿಗೂ ಮಧ್ಯೆ, ಬಹು ಬಲವಾದ ಮತ್ತು ಅಘಾದವಾದ ಪ್ರತಿಬಂಧಕವಾಗಿದ್ದುವು. ಆದರೆ ರಕ್ಷಕನಾದರೋ ಇವೆಲ್ಲವನ್ನೂ ಪರಿವರ್ತಿಸಲು ಬಂದನು. ಆತನ ತುಟಿಗಳಿಂದ ಹೊರಟ ವಾಕ್ಯಗಳು ಕೂಡಿದ್ದ ಜನರು ಎಂದೂ ಯಾಜಕರಿಂದಾಗಲೀ ಅಥವಾ ಧರ್ಮೋಪದೇಶಕರಿಂದಾಗಲೀ ಕೇಳಿದವುಗಳಿಂದ ವ್ಯತ್ಯಾಸವಾಗಿದ್ದುವು. ಕ್ರಿಸ್ತನು ಈ ಪ್ರತಿಬಂಧಕಗಳನ್ನೂ, ಸ್ವಾರ್ಥಪ್ರೇಮವನ್ನೂ ಮತ್ತು ಜನಾಂಗಗಳನ್ನು ಬೇರ್ಪಡಿಸುವ ವಿರೋಧಭಾವವನ್ನು ಮುರಿದು, ಮಾನವ ಕುಲಕ್ಕೆಲ್ಲಾ ಪ್ರೀತಿಯನ್ನು ಬೋಧಿಸುತ್ತಾನೆ. ಆತನು ಮನುಷ್ಯರನ್ನು ಅವರ ಸ್ವಾರ್ಥತೆಗಾಗಿ ನಿಯಮಿತವಾದ ಸಂಕುಚಿತ ಭಾವನೆಗಳಿಂದ ಉದ್ಧರಿಸುತ್ತಾನೆ; ಮತಗಳ ಕೃತಕ ಭಿನ್ನಭೇದಗಳನ್ನೂ, ಮತ್ತು ಎಲ್ಲಾ ಪ್ರಾದೇಶಿಕ ಎಲ್ಲೆಗಳನ್ನೂ ರದ್ದುಮಾಡಿದನು. ಆತನು ನೆರೆಯವರೆಂದೂ ಪರಕೀಯರೆಂದೂ, ಮಿತ್ರರೆಂದೂ ವಿರೋಧಿಗಳೆಂದೂ ತಾರತಮ್ಯವನ್ನೆ:ಅಸುವುದಿಲ್ಲ. ಸಹಾಯಶೂನ್ಯರಾದವರೆಲ್ಲಾ ನಮ್ಮ ನೆರೆಯವರೆಂದೂ ಲೋಕವೇ ನಮ್ಮ ರಂಗಸ್ಥಳವೆಂದೂ ನಾವು ನೆನಸುವಂತೆ ನಮಗೆ ಬೋಧಿಸುತ್ತಾನೆ. MBK 47.2
ಸೂರ್ಯನ ಕಿರಣಗಳು ಭೂಮಂಡಲದ ಬಹುದೂರ ಪ್ರದೇಶವನ್ನೂ ಹಾದು ಹೋಗುವಂತೆ, ಸುವಾರ್ತೆಯ ಬೆಳಕೂ ಸಹ ಭೂಮಿಯ ಮೇಲಿರುವ ಪ್ರತಿಯೊಂ ದು ಆತ್ಮಕ್ಕೂ ನಿಲುಕಬೇಕೆಂದು ದೇವರು ಸಂಕಲ್ಪಿಸಿದ್ದಾನೆ. ಕ್ರಿಸ್ತನ ಸಭೆಯು ನಮ್ಮ ಕರ್ತನ ಸಂಕಲ್ಪವನ್ನು ನೆರವೇರಿಸಿದ್ದರೆ, ಈ ಬೆಳಕು ಅಂಧಕಾರದಲ್ಲಿರುವವರಿಗೂ, ವಿಶ್ವದೆಲ್ಲೆಡೆಗಳಲ್ಲೂ ಮತ್ತು ಮರಣದ ಕಣಿವೆಯಲ್ಲೂ ಹರಡಿರುತ್ತಿತ್ತು. ಸಮೂಹವಾಗಿ ಕೂಡಿಕೊಂಡು ಜವಾಬ್ದಾರಿಕೆಯನ್ನೂ ಮತ್ತು ಕ್ರೂಜೆಯ ಭಾರವನ್ನೂ ಅಲ್ಲಗಳೆಯುವುದಕ್ಕೆ ಬದಲು, ಸಭಾಂಗಿಗಳೆಲ್ಲಾ ಭೂಮಿಯ ಎಲ್ಲಾ ಕಡೆಗಳಲ್ಲೂ ಹರಡಿ ಕ್ರಿಸ್ತನ ಬೆಳಕು ತಮ್ಮ ಮೂಲಕವಾಗಿ ಪ್ರತಿಬಿಂಬಿಸುವಂತೆ ವರ್ತಿಸುತ್ತಾ, ಆತನು ಮಾಡಿದಂತೆ ಆತ್ಮಗಳ ರಕ್ಷಣೆಗಾಗಿ ದುಡಿಯುವುದಾದರೆ, “ಪರಲೋಕ ರಾಜ್ಯದ ಸುವಾರ್ತೆಯು” ಅತಿ ತ್ವರೆಯಾಗಿ ಲೋಕದೆಲ್ಲೆಡೆಗಳಲ್ಲೂ ಸಾರಲ್ಪಡುವುದು. MBK 47.3
ಹೀಗೆ ಮೆಸೆಪಟೋಮಿಯದ ಬೈಲುಸೀಮೆಯಿಂದ ಕರೆಯಲ್ಪಟ್ಟ ಅಬ್ರಹಾಮನಿಂದ ಈ ಕಾಲದವರೆಗೂ ದೇವರು ತನ್ನ ಜನರನ್ನು ಕರೆದ ಉದ್ದೇಶವು ಇದರ ಪರಿಪೂರ್ಣತೆಗಾಗಿಯೇ. ಆತನು ಹೇಳುವುದೇನಂದರೆ, “ನಾನು ನಿನ್ನನ್ನು...... ಆಶೀರ್ವದಿಸುವೆನು............ನೀನು ಆಶೀರ್ವಾದನಿಧಿಯಾಗುವಿ.” ಆದಿಕಾಂಡ 12:2. ಸುವಾರ್ತಾ ಪ್ರವಾದಿಯಾದ ಯೆಶಾಯನಿಂದ ನುಡಿಯಲ್ಪಟ್ಟ ಕ್ರಿಸ್ತನ ವಾಕ್ಯಗಳು ಕೊನೆಯ ಕಾಲದಲ್ಲಿರುವ ನಮಗಾಗಿ ಪರ್ವತಪ್ರಸಂಗದಲ್ಲಿ ಪ್ರತಿಧ್ವನಿಸಿವೆ “ಏಳು ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ” ಯೆಶಾಯ 6೦:1. ನಿಮ್ಮ ಆತ್ಮದಲ್ಲಿ ಯೆಹೋವನ ತೇಜಸ್ಸು ಉದಯಿಸಿದ್ದರೆ; “ಹತ್ತುಸಾವಿರ ಜನರಲ್ಲಿ ಧ್ವಜಾಭಿಪ್ರಾಯ” ನಾದ ಮತ್ತು “ಸರ್ವಾಂಗದಲ್ಲಿಯೂ ಮನೋಹರ” ನಾದ ಆತನ ಸೌಂದರ್ಯವನ್ನು ನೀನು ನೋಡಿದ್ದರೆ; ಆತನ ತೇಜಸ್ಸಿನ ಪ್ರಸನ್ನತೆಯಿಂದ ನಿನ್ನ ಆತ್ಮವು ಪ್ರಜ್ವಲಿಸಿದ್ದರೆ, ಗುರುವಿನಿಂದ ಕಳುಹಿಸಲ್ಪಟ್ಟ ಈ ಸುವಾರ್ತೆಗಳು ನಿನಗಾಗಿಯೇ. ಯೆಸುವು ಪ್ರಕಾಶರೂಪವನ್ನು ಧರಿಸಿದ ಪರ್ವತದ ಮೇಲೆ ಆತನೊಡನೆ ಇದ್ದಿಯಾ? ಕೆಳಗಡೆ ಬೈಲಿನಲ್ಲಿ ಸೈತಾನನ ಗುಲಾಮತನಕ್ಕೆ ಕಟ್ಟುಬಿದ್ದ ಆತ್ಮಗಳಿವೆ; ಅವರು ತಮ್ಮ ಬಿಡುಗಡೆಗಾಗಿ ಭರವಸೆ ಮತ್ತು ಪ್ರಾರ್ಥನೆಗಳಿಗಾಗಿ ಕಾದುಕೊಂಡಿದ್ದಾರೆ. MBK 48.1
ನಾವು ಕ್ರಿಸ್ತನ ತೇಜಸ್ಸನ್ನು ಧ್ಯಾನಿಸುವುದು ಮಾತ್ರವಲ್ಲ, ಆದರೆ ಆತನ ಘನತೆಯನ್ನು ಕುರಿತು ಸಂಭಾಷಿಸಬೇಕು. ಯೆಶಾಯನು ಕ್ರಿಸ್ತನ ತೇಜಸ್ಸನ್ನು ನೋಡಿದ್ದು ಮಾತ್ರವಲ್ಲದೆ, ಆತನ ವಿಷಯದಲ್ಲಿ ಮಾತಾಡಿದನು. ದಾವೀದನು ಧ್ಯಾನಮಗ್ನನಾಗಿರುವಾಗ, ಬೆಂಕಿಯು ಉರಿಯಿತು: ಆಗ ತನ್ನ ನಾಲಿಗೆಯಿಂದ ಮಾತಾಡಿದನು. ದೇವರ ಅತಿಶಯವಾದ ಪ್ರೀತಿಯನ್ನು ಅವನು ಧ್ಯಾನಿಸುತ್ತಿರು ವಾಗ, ತಾನು ಕಂಡು ಅನುಭವಿಸಿದವುಗಳನ್ನು ಹೇಳದೆ ಇರಲಾರದಾದನು. ನಂಬಿಕೆಯಿಂದ ರಕ್ಷಣೆಯ ಅದ್ಭುತ ಹವಣುಕೆಯನ್ನೂ, ಮತ್ತು ದೇವರ ಒಬ್ಬನೇ ಮಗನ ತೇಜಸ್ಸನ್ನೂ ನೋಡಿ, ಅದರ ವಿಷಯದಲ್ಲಿ ಹೇಳದಿರುವವನಾರು? ನಾವು ನಾಶವಾಗದೆ ನಿತ್ಯಜೀವವನ್ನು ಹೊಂದುವಂತೆ ಕಲ್ವೇರಿಯ ಕ್ರೂಜೆಯ ಮೇಲೆ ವ್ಯಕ್ತವಾದ ಅಗಾಧ ಪ್ರೀತಿಯನ್ನು ಯಾರು ಧ್ಯಾನಿಸಬಲ್ಲರು? ಇದನ್ನು ನೋಡಿಯೂ ರಕ್ಷಕನ ತೇಜಸ್ಸನ್ನು ಶ್ಲಾಘಿಸಲು ಶಬ್ದಗಳಿಲ್ಲದ್ದು ಯಾರಿಗೆ? MBK 48.2
“ಆತನ ಮಂದಿರದಲ್ಲಿರುವವರೆಲ್ಲರೂ-ಎಷ್ಟೋ ಪ್ರಭಾವ ಎನ್ನುತ್ತಾರೆ” ಕೀರ್ತನೆ 29:9. ಇಸ್ರಾಯೇಲರ ಮಧುರ ಗಾಯಕನು ತನ್ನ ಕಿನ್ನರಿಯನ್ನು ನುಡಿಸುತ್ತಾ ಆತನನ್ನು ಸ್ತೋತ್ರಿಸಿದ್ದು ಹೇಗೆಂದರೆ: “ನಾನು ನಿನ್ನ ಮಹಾ ಪ್ರಭಾವಯುಕ್ತವಾದ ಮಹಿಮೆಯನ್ನೂ ಅದ್ಭುತ ಕಾರ್ಯಗಳನ್ನೂ ಧ್ಯಾನಿಸುವೆನು. ಮನುಷ್ಯರು ನಿನ್ನ ಭಯಂಕರ ಕೃತ್ಯಗಳಲ್ಲಿ ಕಂಡುಬಂದ ಪ್ರತಾಪವನ್ನು ಕೊಂಡಾಡುವರು. ನಾನು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವೆನು.” ಕೀರ್ತನೆ 145: 5,6. MBK 49.1
ಕಲ್ವೇರಿಯ ಕ್ರೂಜೆಯು ಜನರಿಗೆ ಮೇಲೆ ಉನ್ನತಕ್ಕೆ ಏರಿಸಲ್ಪಟ್ಟು, ಅವರ ಮನಸ್ಸನ್ನಾಕರ್ಷಿಸುವಂತೆಯೂ, ಮತ್ತು ಅವರ ಯೋಚನೆಗಳನ್ನು ಕೇಂದ್ರೀಕರಿಸುವಂತೆಯೂ ಇರಬೇಕು. ತರುವಾಯ ಎಲ್ಲಾ ಆತ್ಮೀಯ ಸಾಮರ್ಥ್ಯವೂ ದೈವ ಪ್ರಭಾವದಿಂದ ದೇವರ ಸನ್ನಿಧಿಯಿಂದಲೇ ಭರ್ತಿಯಾಗುವುದು. ಆಗ ಕರ್ತನಿಗಾಗಿ ಯಥಾರ್ಥ ಸೇವೆಗೆ ಸಕಲ ಸಾಮರ್ಥ್ಯವನ್ನೂ ಕೇಂದ್ರೀಕರಿಸುವುದಕ್ಕೆ ಸಾಧ್ಯವಾಗುವುದು. ಆಗ ಕ್ರಿಸ್ತನ ಸೇವಕರು ಭೂಮಿಯನ್ನು ಬೆಳಗುವ ಸಜೀವ ನಿಯೋಗಿಗಳಾಗಿ ಬೆಳಕಿನ ಕಿರಣಗಳನ್ನು ಲೋಕಕ್ಕೆಲ್ಲಾ ಪ್ರಸರಿಸುವರು. MBK 49.2
ತನಗೆ ಸ್ವಾಧೀನವಾಗುವ ಮಾನವ ನಿಯೋಗವನ್ನೆಲ್ಲಾ ಕ್ರಿಸ್ತನು ಸಂತೋಷದಿಂದ ಅಂಗೀಕರಿಸಿಕೊಳ್ಳುವನು. ಆತನು ಮಾನವತ್ವವನ್ನು ದೈವತ್ವದೊಡನೆ ಒಂದುಗೂಡಿಸಿ ಮೂರ್ತಿಮತ್ತಾದ ಪ್ರೀತಿಯ ರಹಸ್ಯವನ್ನು ಲೋಕಕ್ಕೆ ನಿವೇದಿಸುವನು. ಅದನ್ನು ತೆಗೆದುಕೊಂಡು ಪ್ರಾರ್ಥಿಸಿ ಕೊಂಡಾಡಿರಿ; ಆತನ ಮಹಿಮೆಯ ಸಂದೇಶವನ್ನು ಎಲ್ಲಾ ಕಡೆಗಳಿಗೂ ಘೋಷಿಸುತ್ತಾ ಆಚೆಯಿರುವ ಪ್ರದೇಶಕ್ಕೆ ಸಾಗಿರಿ. MBK 49.3
ಸಾವಧಾನದಿಂದ ಸಹಿಸಿದ ಸಂಕಟ್ಗಲೂ, ಕೃತಜ್ಞತೆಯಿಂದ ಸ್ವೀಕರಿಸಿದ ಆಶೀರ್ವಾದಗಳೂ, ಪೌರುಷದಿಂದ ಪ್ರತಿಭಟಿಸಿದ ಶೋಧನೆಗಳೂ, ರೂಢಿಯಾಗಿ ವ್ಯಕ್ತವಾದ ಶಾಂತತೆ, ದಯೆ, ಮತ್ತು ಕೃಪೆ ಇವುಗಳು ಎಂದೆಂದೂ ಜೀವಕರಣಗಳು ಪ್ರವೇಶಿಸಿಸದ, ಪ್ರಕಾಶಿಸದ ಸ್ವಾರ್ಥತೆಯ ಹೃದಯದ ಅಂಧಕಾರಕ್ಕೆ ವ್ಯತ್ಯಾಸವಾದ ಗುಣಗಳಿಂದ ಪ್ರಕಾಶಿಸುವ ಬೆಳಕಾಗಿದೆ. MBK 49.4