ಕ್ರೈಸ್ತ ಸಭೆಗೆ ಹಿತವಚನಗಳು

83/307

ಮದುವೆಯನಂತರಕ್ರಿಸ್ತನನ್ನುಅಂಗೀಕರಿಸಿದವರಿಗೆಬುದ್ಧಿವಾದಗಳು

ಮದುವೆಗೆ ಮೊದಲು ಹುಡುಗ ಹುಡುಗಿಯರು ಅನ್ಯರಾಗಿದ್ದು, ಮದುವೆಯ ನಂತರ ಅವರಲ್ಲಿ ಒಬ್ಬರು ಮಾತ್ರ ಕ್ರಿಸ್ತನನ್ನು ಅಂಗೀಕರಿಸಿದದಲ್ಲಿ, ನೀವು ನಿಮ್ಮ ಸಂಗಾತಿಯು ಇನ್ನೂ ಅನ್ಯರಾಗಿದ್ದರೂ ಅವರಿಗೆ ಬಹಳವಾಗಿ ಪ್ರಾಮಾಣಿಕರಾಗಿರಬೇಕು. ಅವರು ತಮ್ಮ ಧಾರ್ಮಿಕ ನಂಬಿಕೆಯಲ್ಲಿ ಪರಸ್ಪರ ವಿರುದ್ಧವಾಗಿದ್ದು, ಭಿನ್ನಾಭಿಪ್ರಾಯವು ಎಷ್ಟೇ ದೊಡ್ಡದಾಗಿರಬಹುದು. ಆದರೂ ಕಷ್ಟಸಂಕಟ ಹಿಂಸೆಗಳು ಸಂಭವಿಸಿದರೂ ಎಲ್ಲಾ ಮಾನವ ಸಂಬಂಧಗಳಿಗಿಂತಲೂ ಹೆಚ್ಚಾಗಿ ಮಾಡಿದ ವಾಗ್ದಾನಕ್ಕೆ ಆದ್ಯತೆ ನೀಡಬೇಕು. ಕ್ರೈಸ್ತರು ಗಂಡನಾಗಲಿ ಇಲ್ಲವೆ ಹೆಂಡತಿಯಾಗಲಿ ತಮ್ಮ ಪ್ರೀತಿ, ವಿನಯತೆ, ನಿಷ್ಠೆಯ ಮೂಲಕ ಅವಿಶ್ವಾಸಿಗಳಾದ ಸಂಗಾತಿಯನ್ನು ಕ್ರಿಸ್ತನಿಗಾಗಿ ಗೆಲ್ಲಬಹುದು. KanCCh 135.3

*****