ಕ್ರೈಸ್ತ ಸಭೆಗೆ ಹಿತವಚನಗಳು

9/307

ಅಧ್ಯಾಯ-4 — ಸಹೋದರ ಸ್ನೇಹ ಹಾಗೂ ದೇವರಲ್ಲಿಕ್ರಿಸ್ತನೊಂದಿಗೆ ಒಂದಾಗುವುದು

ದೇವರ ಮಕ್ಕಳು ಐಕ್ಯತೆಯಲ್ಲಿ ಒಂದಾಗಿರಬೇಕೆನ್ನುವುದು ದೇವರ ಉದ್ದೇಶವಾಗಿದೆ. ಅದೇ ರೀತಿಯಾಗಿ ಅವರು ಪರಲೋಕದಲ್ಲಿಯೂ ಒಂದಾಗಿ ಜೀವಿಸಬೇಕೆಂದು ಆತನು ನಿರೀಕ್ಷಿಸುವುದಿಲ್ಲವೇ? ಕ್ರಿಸ್ತನು ತನ್ನಲ್ಲಿಯೇ ವಿಭಾಗಿಸಲ್ಪಟ್ಟಿದ್ದಾನೆಯೇ? ದೇವರ ದೃಷ್ಟಿಯಲ್ಲಿ ಪರಿಶುದ್ಧವಾಗಿರುವ ಆತನ ಕಾರ್ಯದಲ್ಲಿ ದೇವರಮಕ್ಕಳು ತಮ್ಮ ಹೃದಯ ಹಾಗೂ ಮನಸ್ಸುಗಳನ್ನು ಬಲಪಡಿಸಿಕೊಂಡು ಐಕ್ಯತೆಯಿಂದ ಒಂದಾಗಬೇಕು. ಅವರು ತಮ್ಮ ಎಲ್ಲಾ ದುಷ್ಟತನ ಹಾಗೂ ಭಿನ್ನಾಭಿಪ್ರಾಯಗಳನ್ನು ತೊಲಗಿಸದಿದ್ದಲ್ಲಿ, ದೇವರು ಅವರಿಗೆ ಜಯಕೊಡುವನೇ? ಐಕ್ಯತೆಯುಬಲಕೊಡುತ್ತದೆ; ವೈಮನಸ್ಸು ಹಾಗೂ ಭಿನ್ನಭೇದವು ಬಲಹೀನವಾಗಿರುತ್ತದೆ. ನಾವು ಪರಸ್ಪರ ಒಂದಾಗಿ, ಮಾನವರ ರಕ್ಷಣೆಗಾಗಿ ಸಾಮರಸ್ಯದಿಂದ ಒಟ್ಟಾಗಿ ಸೇವೆ ಮಾಡಿದಾಗ, ನಿಜವಾಗಿಯೂ “ದೇವರ ಜೊತೆ ಕೆಲಸಗಾರರಾಗಿರುತ್ತೇವೆ“. ಐಕ್ಯತೆ ಸಾಮರಸ್ಯದಿಂದ ಸೇವೆ ಮಾಡಲು ನಿರಾಕರಿಸುವವರು ದೇವರಿಗೆ ಬಹಳ ಅಗೌರವ ತರುತ್ತಾರೆ. ದೇವರ ಮಕ್ಕಳು ಒಬ್ಬರಿಗೊಬ್ಬರು ವಿರುದ್ಧವಾಗಿ ಕೆಲಸಮಾಡುವಾಗ ವೈರಿಯಾದ ಸೈತಾನನು ಬಹಳ ಆನಂದಗೊಳ್ಳುತ್ತಾನೆ. ಅಂತವರು ಸಹೋದರ ಸ್ನೇಹ ಹಾಗೂ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ತಮ್ಮಲ್ಲಿರುವ ಭಿನ್ನಾಭಿಪ್ರಾಯದ ಪರಿಣಾಮಗಳನ್ನು ಅವರು ಮುಂದಾಲೋಚನೆಯಿಂದ ನೋಡಿದಲ್ಲಿ, ಅವರು ಖಂಡಿತವಾಗಿಯೂ ಪಶ್ಚಾತ್ತಾಪ ಪಡುತ್ತಾರೆ. KanCCh 17.1