ಕ್ರೈಸ್ತ ಸಭೆಗೆ ಹಿತವಚನಗಳು

1/307

ಕ್ರೈಸ್ತ ಸಭೆಗೆ ಹಿತವಚನಗಳು

ಪ್ರಕಾಶಕರ ಮಾತು

ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭಾ ಚಳುವಳಿಯು ಜಗತ್ತಿನ ಎಲ್ಲೆಡೆ, ಇಂದು ಬೆಳವಣಿಗೆ ಹೊಂದಿದೆ. ವಿವಿಧ ಭಾಷೆಗಳನ್ನು ಆಡುವ ಹಾಗೂ ಓದುವ, ಸಭಿಕರು ಶ್ರೀಮತಿ ವೈಟಮ್ಮನವರು ಬರೆದ “ಟೆಸ್ಟಿಮೊನೀಸ್ ಫಾರ್ ದಿ ಚರ್ಚ್” ಪುಸ್ತಕವನ್ನು ಸಂಪೂರ್ಣವಾಗಿಯೋ ಇಲ್ಲವೆ ಬಿಡಿಬಿಡಿಯಾಗಿಯೋ ಓದಬೇಕೆಂದು ಹಂಬಲಿಸಿದರು. ಈ ಪುಸ್ತಕವು ಲೋಕದಾದ್ಯಂತ ಅವರಿಗೆ ಆಶೀರ್ವಾದಕರವಾಗಿ ಆತ್ಮೀಕ ಬೆಳವಣಿಗೆಗೆ ಕಾರಣವಾಯಿತು. ಶ್ರೀಮತಿ ವೈಟಮ್ಮನವರು ಬರೆದ “ಟೆಸ್ಟಿಮೊನೀಸ್ ಪುಸ್ತಕಗಳ ಒಂಬತ್ತು ಸಂಪುಟಗಳನ್ನಾಗಲಿ ಇಲ್ಲವೆ “ಪೇಟ್ರಿಯಾರ್ಕ್ಸ್ ಅಂಡ್ ಪ್ರಾಫೆಟ್ಸ್” “ಪ್ರಾಫೆಟ್ಸ್ ಅಂಡ್ ಕಿಂಗ್ಸ್” “ದಿ ಡಿಸೈರ್ ಆಫ್ ಏಜಸ್” “ದಿ ಆಕ್ಟ್ಸ್ ಆಫ್ ದಿ ಅಫೋಸ್ತಲ್ಸ್” ಹಾಗೂ “ದಿ ಗ್ರೇಟ್ ಕಾಂಟ್ರೊವರ್ಸಿ” - ಈ ಐದು ಸ್ಪಿರಿಟ್ ಆಫ್ ಪ್ರಾಫಸಿ ಪುಸ್ತಕಗಳ ಸಂಪೂರ್ಣ ಸಾರಾಂಶವನ್ನು ಎಲ್ಲಾ ಪ್ರಮುಖ ಭಾಷೆಗಳಲ್ಲಿ ಪ್ರಕಟಿಸುವುದು ಅಸಾಧ್ಯ. ಆದರೆ “ಸಭೆಗೆ ಹಿತ ವಚನಗಳು ಎಂಬ ಈ ಸಂಪುಟದಲ್ಲಿ ಮೇಲೆ ತಿಳಿಸಿದ ಶ್ರೀಮತಿ ವೈಟಮ್ಮನವರ ಪುಸ್ತಕಗಳಿಂದ ಪ್ರಾಮುಖ್ಯವಾದ ವಿಷಯಗಳನ್ನು ಆರಿಸಿ ತೆಗೆದುಕೊಂಡು ಪ್ರಕಟಿಸಲಾಗಿದೆ. ಇವು ಸಭೆಗೆ ಪ್ರಾಯೋಗಿಕವಾಗಿ ಬಹಳ ಸಹಾಯಕವಾಗಿವೆ. KanCCh .0

ಈ ಸಂಪುಟದಲ್ಲಿ 64 ಅಧ್ಯಾಯಗಳಿವೆ. ಇವುಗಳನ್ನು ಅಮೇರಿಕಾ ದೇಶದ ವಾಷಿಂಗ್ಟನ್ ನಗರದಲ್ಲಿರುವ ಎಲೆನ್ ಜಿ ವೈಟ್ ಟ್ರಸ್ಟ್‍ನವರು ಆರಿಸಿ ಓದುಗರ ಪ್ರಯೋಜನಕ್ಕಾಗಿ ಸುವ್ಯವಸ್ಥಿತವಾಗಿ ವರ್ಗೀಕರಿಸಿದ್ದಾರೆ. ಶ್ರೀಮತಿ ವೈಟಮ್ಮನವರ ಅನೇಕ ಪುಸ್ತಕಗಳಿಂದ ಆರಿಸಿ ವ್ಯವಸ್ಥಿತವಾಗಿ ವರ್ಗೀಕರಿಸುವುದು ಪ್ರಯಾಸದಾಯಕ ಕಾರ್ಯ. ಪ್ರಕಾಶಕರ ಮಾತು ಹಾಗೂ ಮುನ್ನುಡಿಯು ಎಲೆನ್ ಜಿ ವೈಟ್ ಟ್ರಸ್ಟ್‍ನವರು ಬರೆದದ್ದು. ಶ್ರೀಮತಿ ವೈಟಮ್ಮನವರ ಬರವಣಿಗೆಯು ಒಂದನೇ ಅಧ್ಯಾಯದಿಂದ ಆರಂಭವಾಗುತ್ತದೆ. KanCCh .0

- ಪ್ರಕಾಶಕರು