ಕೊನೆಯ ಕಾಲದ ಘಟನೆಗಳು

2/324

ಅಧ್ಯಾಯ-1
ಜಗತ್ತಿನ ಕೊನೆಯ ಸಂಕಟದ ಸಮಯ

ಭವಿಷ್ಯದ ಬಗ್ಗೆ ಎಲ್ಲೆಲ್ಲಿಯೂ ಭಯ

ಈಗ ಜೀವಿಸುತ್ತಿರುವ ಎಲ್ಲರಿಗೂ ವರ್ತಮಾನಕಾಲವು ಬಹಳ ಆಸಕ್ತಿಕರ ಸಮಯವಾಗಿದೆ. ಆಡಳಿತಗಾರರು, ನಾಯಕರು, ಅಧಿಕಾರಸ್ಥಾನ ಹೊಂದಿರುವವರು, ಬುದ್ದಿಜೀವಿಗಳಾದ ಎಲ್ಲಾ ವರ್ಗಗಳಿಗೆ ಸೇರಿದ ಸ್ತ್ರೀಪುರುಷರು ಕೊಕಾಘ 5.1

ಎಲ್ಲರೂ ಸಹ ಮುಂದೆ ತಮಗಾಗುವ ಘಟನೆಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ದೇಶದೇಶಗಳ ನಡುವೆ ಇರುವ ಸಂಬಂಧಗಳನ್ನು ಗಮನಿಸುತ್ತಿದ್ದಾರೆ. ಜಗತ್ತಿನ ಪ್ರತಿಯೊಂದು ಘಟನೆಯನ್ನು ತೀವ್ರವಾದ ಆಸಕ್ತಿಯಿಂದ ವೀಕ್ಷಿಸುತ್ತಿರುವಾಗ, ಮುಂದೆ ಒಂದು ಮಹತ್ತರವಾದ ಹಾಗೂ ನಿರ್ಣಾಯಕವಾದ ಘಟನೆ ಸಂಭವಿಸಲಿದೆ. ಜಗತ್ತು ಅತ್ಯಂತ ಅಪಾಯಕರವಾದ ಸಂಕಟಕಾಲಕ್ಕೆ ಒಳಗಾಗುವ ಸಮಯದಲ್ಲಿದೆ ಎಂದು ತಿಳಿದಿದ್ದಾರೆ (ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್, 914). ಕೊಕಾಘ 5.2

ಭೂಮಿಯಲ್ಲಿ ಸಮುದ್ರದಲ್ಲಿ ಉಂಟಾಗುತ್ತಿರುವ ವಿಪತ್ತುಗಳು, ಅಸ್ಥಿರವಾದ ಸಮಾಜ, ಯುದ್ದಗಳಾಗುವ ಭೀತಿ ಇವೆಲ್ಲವೂ ಮುಂದೆ_ಬರಲಿರುವ ಇಕ್ಕಟ್ಟಿನ ಸಮಯದ ಮುನ್ಸೂಚನೆಯಾಗಿವೆ. ಇವೆಲ್ಲವೂ ಸದ್ಯದಲ್ಲಿಯೇ ನಡೆಯಲಿರುವ ಅತ್ಯಂತ ಭೀಕರವಾದ ಘಟನೆಗಳು ಸಮೀಪಿಸುತ್ತಿರುವ ಸೂಚನೆಯಾಗಿವೆ. ಶೀಘ್ರದಲ್ಲಿಯೇ ನಮ್ಮ ಜಗತ್ತಿನಲ್ಲಿ ಮಹಾ_ಬದಲಾವಣೆಗಳು ನಡೆಯಲಿವೆ ಹಾಗೂ ಈ ಅಂತಿಮ ವಿದ್ಯಮಾನಗಳ ಬೆಳವಣಿಗೆಯು ಅತ್ಯಂತ ಕ್ಷಿಪ್ರಗತಿಯಲ್ಲಿ ಅಂದರೆ ವೇಗವಾಗಿ ನೆರವೇರಲಿವೆ (1909). ಕೊಕಾಘ 5.3