ಕೊನೆಯ ಕಾಲದ ಘಟನೆಗಳು

264/324

ಅಧ್ಯಾಯ-18
ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು (ಮಹಾಸಂಕಟದ ಸಮಯ - ಭಾಗ 2)

ಕೃಪಾಕಾಲ ಮುಕ್ತಾಯವಾದ ನಂತರ ಮಹಾಸಂಕಟದ ಸಮಯ ಆರಂಭವಾಗುತ್ತದೆ.

ಯೇಸುಕ್ರಿಸ್ತನು ಪರಲೋಕದ ದೇವದರ್ಶನ ಗುಡಾರದಲ್ಲಿ ಮನುಷ್ಯನ ಮಧ್ಯವರ್ತಿಯಾಗಿ ತನ್ನ ಕಾರ್ಯ ಮುಗಿಸಿದಾಗ, ಮಹಾಸಂಕಟದ ಸಮಯ ಆರಂಭವಾಗುವುದು. ಪ್ರತಿಯೊಬ್ಬರ ಪಕರಣವು ಈಗಾಗಲೇ ನಿರ್ಧಾರಿತವಾಗಿರುತ್ತದೆ ಮತ್ತು ಪಾಪವನ್ನು ಶುದ್ಧೀಕರಿಸಲು ಬೇರಾವುದೇ ದೋಷಪರಿಹಾರಕ ರಕ್ತವಿರುವುದಿಲ್ಲ, ಆಗ ‘ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ; ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ತನ್ನ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ’ ಎಂಬ ಗಂಭೀರವಾದ ಘೋಷಣೆಯಾಗುವುದು (ಪ್ರಕಟನೆ 22:11), ಆಗ ದೇವರ ಪರಿಶುದ್ಧಾತ್ಮನ ಶಕ್ತಿಯು ಈ ಲೋಕದಿಂದ ಹಿಂದೆಗೆಯಲ್ಪಡುವುದು (ಪೇಟಿಯಾರ್ಕ್ ಅಂಡ್ ಪ್ರಾಫೆಟ್ಸ್,201). ಕೊಕಾಘ 148.1