ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

1/43

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

ಜೀವನ ಚರಿತ್ರೆ

ಎಲೆನ್ ಗೌಲ್ಡ್ ವೈಟ್ 1827- 1915 GCKn 14.1

ಕ್ರಿಸ್ತಯೇಸುವಿನ ಒರ್ವ ಭಕ್ತೆಯಾದ ಈಕೆ ತನ್ನ 17ನೇ ವಯಸ್ಸಿನವರೆಗೂ ಮೆಥೊಡ್ಡಿಸ್ಟಳಾಗಿದ್ದಳು,1843ರಲ್ಲಿ ದೇವರು,ದರ್ಶನವನ್ನೂ ಮತ್ತು ಈ ಲೋಕಕ್ಕೆ ಅರುಹಲೇ ಬೇಕಾದ ಸಂದೇಶಗಳನ್ನು ಈಕೆಗೆ ನೀಡಿದರು. ಇದಕ್ಕೆ ಮೊದಲೇ ಇಬ್ಬರಿಗೆ ಈ ವರ ದೊರೆಕಿದ್ದರೂ, ಅವರು ತಿರಸ್ಕರಿಸಿದಾಗ ಈಕೆ ಅಂಗೀಕರಿಸಿ ಕ್ರಿಸ್ತನ ಎರಡನೇ ಬರುವಣವನ್ನು ನಂಬಿ ಪ್ರಚಾರಮಾಡುತ್ತಿದ್ದುದರಿಂದ ಮೆಥೊಡಿಸ್ಟರು ತಮ್ಮ ಸದಸ್ಯತ್ವದಿಂದ ಹೊರಹಾಕಿದರು, ಈಕೆ ಹಲವಾರು ಲೇಖನಗಳನ್ನೂ, ತಿದ್ದುಪಾಟಿ ಹಾಗೂ ಎಚ್ಚರಿಕೆಗಳನ್ನು ಒಳಗೊಂಡ ಪುಸ್ತಕಗಳನ್ನು ಬರೆದಿದ್ದಾಳೆ. ಒಳ್ಳೆಯ ಅರೋಗ್ಯ ಸಂದೇಶದ ಬೆಳಕನ್ನು ಹೊಂದಿದ ನಂತರ ಏದೆನ್ ತೋಟದಲ್ಲಿದ್ದ ಮೂಲ ಪಥ್ಯಾಹಾರದೆಡೆಗೆ ಒತ್ತುಕೊಡುವ ಹಾಗೂ ಆರೋಗ್ಯಕ್ಕೆ ಆಪಾಯಕಾರಿ ವಸ್ತು ವರ್ಜನೆಗೂ ಮತ್ತು ಎಲ್ಲದರಲ್ಲೂ ಮಿತಸಾಧಿಸುವ ಒರ್ವ ಪ್ರಬಲ ಪಕ್ಷವಾದಿಯಾಗಿದ್ದಾಳೆ. GCKn 14.2

ಶ್ರೀಮತಿ ವೈಟ್ ರವರನ್ನು ‘ಪ್ರವಾದಿನಿ ‘ ಎಂದು ಇತರರು ಹೇಳಿಕೊಂಡರೂ .ತಾನು ಮಾತ್ರ ಹಾಗೆ ಹೇಳದೆ ‘ಸಂದೇಶಕಳು’ ಎಂದೇ ಸಂಬೋಧಿಸಿಕೊಂಡಳು, ಇದಕ್ಕೆ ಉತ್ತರವಾಗಿ ದೇವರ ದೃಷ್ಟಿ ಯಲ್ಲಿ ಎಷ್ಟೋ ಪ್ರವಾದಿಗಳೆನಿಸಿಕೊಂಡವರು ಹೇಳುತ್ತಿದ್ದ- ಮಾಡಿತ್ತಿದ್ದ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳಿಗೂ ಹೆಚ್ಚಾಗಿ ಒಳಗೂಂಡಂತಹ ಆರೋಗ್ಯ ಸುಧಾರಣೆಗಳು, ಪಾಪಕ್ಕೆ ಪಶ್ಚಾತ್ತಾಪದ ಕರೆ, ಒಡಕುಗಳನ್ನು ಸರಿಪದಿಸುವ ಚಳುವಳಿಗಳಿಗೆ ಒತ್ತುಕೊಡುವ ಕೆಲಸಗಳನ್ನು ಮಾಡುತ್ತಿದ್ದಳು. ದೇವಭಕ್ತಿ ತುಂಬಿದ ಹಲವಾರು ಕೃತಿಗಳನ್ನು ರಚಿಸಿದ್ದು, ಅದರಲ್ಲಿ ‘ಸ್ಟೆಪ್ಸ್ ಟು ಕ್ರೈಸ್ಟ’ ಎಂಬುದು ಪ್ರಸಿದ್ದವಾಗಿದೆ. ಅದರೆ ಕ್ರಿಸ್ತನು ಮತ್ತು ಅತನ ದೂತರಿಗೂ, ಸೈತಾನನೂ, ಮತ್ತು ಅತನ ದೂತರಿಗೂ ನಡುವಿನ ಮಹಾವಿವಾದ’ ವನ್ನು ತಿಳಿಸುವ ಪುಸ್ತಕವು ಬಹುಮುಖ್ಯವಾದದ್ದೆಂದು ಈಕೆ ಎಣಿಸಿದ್ದಾಳ. GCKn 14.3