ಪರ್ವತ ಪ್ರಸಂಗ

43/43

“ಅದರ ಅಸ್ತಿವಾರವು ಬಂಡೆಯ ಮೇಲಿದ್ದದರಿಮ್ದ ಅದು ಬೀಳಲಿಲ್ಲ.”

ಜನರು ಕ್ರಿಸ್ತನ ಮಾಕ್ಯವನ್ನು ಕೇಳಿ ಏಕಾಗ್ರ ಚಿತ್ತತೆಯಿಮ್ದ ಭಾವಪರವಶರಾಗಿದ್ದರು. ಸತ್ಯ ತತ್ವಗಳ ದೈವ ಸೌಜನ್ಯವು ಅವರನ್ನು ಆಕರ್ಷಿಸಿತು;ಕ್ ರಿಸ್ತನ ವಾಕ್ಯಗಳು ಗಂಭೀರವಾದ ಎಚ್ಚರಿಕೆಗಳಂತೆ ದೇವರ ಹೃದಯ ಸಂಶೋಧನಾವಾಣಿಯೋ ಎಂಬಂತಿದ್ದುವು. ಆತನ ವಾಕ್ಯಗಳು ಅವರ ಹಳೆಯ ಮನೋಭಾವಗಳ ಮತ್ತು ನಂಬಿಕೆಯ ಬುಡಕ್ಕೆ ಧಕ್ಕೆಯನ್ನು ತಂದುವು; ಆತನ ಉಪದೇಶವನ್ನು ಅನುಕರಿಸಿ ನಡೆಯುವುದಾದರೆ ಅವರ ಹಿಂದಿನ ನಡತೆ ಮತ್ತು ಅಭಿಪ್ರಾಯಗಳಲ್ಲಿ ಒಂದು ಬದಲಾವಣೆಯಾಗಬೇಕಾದುದು ಅವಶ್ಯವಾಗಿತ್ತು. ಇದು ತಮ್ಮ ಮತಬೋಧಕರೊಡನೆ ವಿರೋಧವನ್ನ ತಂದೊಡ್ಡುವುದು; ಯಾಕಂದರ ತಲಾಂತರಗಳಿಂದಲೂ ಈ ಧರ್ಮೋಪದೇಶಕರು ಪೋಷಿಸುತ್ತಾ ಬಂದ ಸಕಲ ತತ್ವಗಳೂ ಪತನವಾಗುವ ಸಂಭವವು ಬಂದಿತ್ತು, ಆದುದರಿಂದ ಆ ಜನರ ಹೃದಯಗಳು ಆತನ ಉಪದೇಶಕ್ಕೆ ಪ್ರತಿವರ್ತಿಸಿದರೂ ಕೂಡ, ಬಹು ಸ್ವಲ್ಪ ಜನರೇ ಆತನ ವಾಕ್ಯಗಳನ್ನು ತಮ್ಮ ಜೀವನದ ಮಾರ್ಗದರ್ಶಕವಾಗಿ ಆರಿಸಿಕೊಳ್ಳಲು ಸಿದ್ಧರಿದ್ದರು. MBK 147.2

ಯೇಸುವು, ತಾನು ನುಡಿದ ವಾಕ್ಯಗಳನ್ನು ಅನುಸರಿಸಿ ನಡೆಯಬೇಕಾದುದರ ಪ್ರಾಮುಖ್ಯತೆಯನ್ನು ಉದಾರಿಸಲು ಆಶ್ಚರ್ಯವಾದ ಕಣ್ಣಿಗೆ ಕಟ್ಟಿದ ಹಾಗೆ ಒಂದು ಉಪಮೆಯನ್ನು ಹೇಳಿ ತನ್ನ ಉಪದೇಶವನ್ನು ಮುಕ್ತಾಯ ಮಾಡಿದನು. ರಕ್ಷಕನನ್ನು ಸುತ್ತುವರಿದಿದ್ದ ಸಮೂಹದಲ್ಲಿ ಅನೇಕರು ತಮ್ಮ ಜೀವಮಾನವನ್ನೆಲ್ಲಾ ಗಲಿಲಾಯ ಸಮುದ್ರದ ವಾತಾವರಣದಲ್ಲೇ ಕಳೆದಿದ್ದರು. ಪರ್ವತ ಪಾರ್ಶ್ವದಲ್ಲಿ ಅವರು ಕುಳಿತು, ಕ್ರಿಸ್ತನ ವಾಕ್ಯಗಳನ್ನು ಕೇಳುತ್ತಾ, ಬೆಟ್ಟಗುಡ್ಡಗಳಿಂದ, ಕಣಿವೆಗಳ ಮತ್ತು ಕಮರಿಗಳ ಮಾರ್ಗವಾಗಿ ಹರಿದು ಸಮುದ್ರಕ್ಕೆ ಬೀಳುತ್ತಿದ್ದ ನದಿತೊರೆಗಳನ್ನು ನೋಡಬಹುದಾಗಿತ್ತು. ಬೇಸಗೆಯಲ್ಲಿ ಈ ನದಿತೊರೆಗಳು ಸಂಪೂರ್ಣವಾಗಿ ಬತ್ತಿಹೋಗಿ, ಅವುಗಳ ಸ್ಥಾನದಲ್ಲಿ ಬರೇ ಶುಷ್ಕವಾದ ದೂಳಿನ ನೆಲವನ್ನು ಕಾಣಬಹುದು. ಆದರೆ ಶಿಶಿರ ಋತುವಿನ ಚಂಡಮಾರುತನು ಬೆಟ್ಟಗುಡ್ಡಗಳನ್ನು ಭೇದಿಸುವಾಗ, ಈ ನದಿಗಳು ಭಯಂಕರವಾಗಿ, ಪ್ರವಾಹವು ಕೆರಳಲು, ಕೆಲವು ವೇಳೆಗಳಲ್ಲಿ ಕಣಿವೆಗಳನ್ನೆಲ್ಲಾ ಆಕ್ರಮಿಸಿಕೊಂಡು, ಪ್ರತಿಭಟನೆಯಿಲ್ಲದ ತಮ್ಮ ಹೊನಲಿಗೆ ಸಿಕ್ಕಿದುದನ್ನೆಲ್ಲಾದೋಚಿಕೊಂಡುಹೋಗುವವು. ಆ ಸಮಯದಲ್ಲಿ ಹುಲ್ಲುಮೈದಾನಗಳಲ್ಲಿ ಕಟ್ಟಲ್ಪಟ್ಟಿದ್ದ ರೈತಾಪಿಗಳ ಕುಟೀರಗಳ ಕೊಚ್ಚಿಕೊಂಡು ಹೋಗಿಬಿಡುವವು. ಆದರೆ ಬೆಟ್ಟದ ಬಲವಾದ ಬಂಡೆಯ ಮೇಲೆ ಕಟ್ಟಲ್ಪಟ್ಟೀದ್ದ ಅನೇಕ ಮನೆಗಳೂ ಇದ್ದುವು. ದೇಶದ ಕೆಲವೆಡೆಗಳಲ್ಲಿ ವಾಸಗೃಹಗಳು ಸಂಪೂರ್ಣ ಬಂಡೆಯಿಂದಲೇ ಕಟ್ಟಲ್ಪಟ್ಟಿದ್ದುವು, ಇವುಗಳಲ್ಲನೇಕವು ನರಾರು ವರ್ಷಗಳಿಂದಲೂ ಎಲ್ಲಾ ವಿಧವಾದ ಪ್ರಚಂಡ ಮಾರುತನಿಗೂ ಭೇದಿಸಲಸಾಧ್ಯವಗಿ ಭದ್ರವಾಗಿ ನಿಂತಿವೆ. ಈ ಗೃಹಗಳು ಬಹಳ ಪ್ರಯಾಸದಿಂದ ಕಟ್ಟಲ್ಪಟ್ಟಿದುವು, ಮತ್ತು ಸುಲಭವಾಗಿ ಪ್ರವೇಶಿಸಲಸದಳವಾಗಿದ್ದುವು. ಇವೆಲ್ಲಾ ಬಂಡೆಯ ಮೇಲೆ ಕಟ್ಟಲ್ಪಟ್ಟಿದ್ದುವು; ಬಿರುಗಾಳಿ, ಪ್ರವಾಹ ಮತ್ತು ಬಿರುಹೊಯ್ಲು ವ್ಯರ್ಥವಾಗಿ ಇವುಗಳ ಮೇಲೆ ರಭಸದಿಂದ ಬಡಿಯುತ್ತವೆ. MBK 147.3

ಬಂಡೆಯ ಮೇಲೆ ಮನೆಗಳನ್ನು ಕಟ್ಟಿದವರಂತೆ, ನನ್ನ ವಾಕ್ಯಗಳನ್ನು ಕೇಳಿ ತನ್ನ ಗುಣಗಳನ್ನೂ ಜೀವನವನ್ನೂ ಕಟ್ಟುವುದಕ್ಕೆ ಅಸ್ಥಿವಾರವನ್ನಾಗಿ ಮಾಡಿಕೊಳ್ಳುವನು. ಶತಮಾನಗಳಿಗೆ ಮೊದಲು ಪ್ರವಾದಿಯಾದ ಯೆಶಾಯನು ಬರೆದಿರುವುದೇನಂದರೆ: “ಹುಲ್ಲು ಒಣಗಿ ಹೋಗುವದು, ಹೂವು ಬಾಡಿ ಹೋಗುವದು, ನಮ್ಮ ದೇವರ ಮಾತೋ ಸದಾಕಾಲವೂ ಇರುವುದು;” ಯೆಶಾಯ 4೦: 8. ಪರ್ವತ ಮೇಲೆ ಪ್ರಸಂಗಿಸಲ್ಪಟ್ಟ ಅನೇಕ ವರ್ಷಗಳನಂತರ ಪ್ರೇತನು ಯೆಶಾಯನ ವಾಕ್ಯಗಳನ್ನೇ ಆಧಾರವನ್ನಾಗಿಟ್ಟುಕೊಂಡು ಹೇಳಿದ್ದೇನಂದರೆ: “ಕರ್ತನ ಮಾತೋ ಸದಾಕಾಲವೂ ಇರುವುದು ಎಂದು ಹೇಳಿದೆಯಷ್ಟೆ. ಆ ಮಾತು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.” 1 ಪ್ರೇತ 1: 25, ನಮ್ಮ ಲೋಕಕ್ಕೆ ತಿಳಿದಿರುವಂತೆ ದೇವರ ವಾಕ್ಯ ಒಂದು ಮಾತ್ರವೇ ಸ್ಥಿರವಾದುದಾಗಿದೆ. ಇದು ಮಾತ್ರವೇ ಸುರಕ್ಷಿತವಾದ-ಖಾತ್ರಿಯಾದ ಅಸ್ತಿವಾರವಾಗಿದೆ. “ಭೂಮ್ಯಾಕಾಶಗಳು ಅಳಿದು ಹೋಗುವುವು, ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ.” ಮತ್ತಾಯ 24: 35, ಎಂದು ಯೇಸುಸ್ವಾಮಿಯು ಹೇಳಿದನು. MBK 148.1

ದೇವರ ಸ್ವಭಾವವಾದ, ಆತನ ಆಜ್ಞೆಗಳ ಮುಲತತ್ವದಲ್ಲಿಯೇ ಕ್ರಿಸ್ತನು ಪರ್ವತದ ಮೇಲೆ ಹೇಳಿದ ವಾಕ್ಯಗಳು ಮೂರ್ತೀಕರಿಸಿವೆ. ಅವುಗಳ ಮೇಲೆ ಮನೆಯನ್ನು ಕಟ್ಟುವವನು ಆದಿಬಂಡೆಯಾದ ಕ್ರಿಸ್ತನ ಮೇಲೆಯೇ ಕಟ್ಟುವವನಾಗಿದ್ದಾನೆ. ಈ ವಾಕ್ಯಗಳನ್ನು ನಾವು ಸ್ವೀಕರಿಸಿದರೆ ಕ್ರಿಸ್ತನನ್ನೇ ಸ್ವೀಕರಿಸುವವರಾಗಿದ್ದೇವೆ. ಹೀಗೆ ಆತನ ವಾಕ್ಯಗಳನ್ನು ಸ್ವೀಕರಿಸುವವರು ಮಾತ್ರವೇ ಆತನ ಮೇಲೆ ಕಟ್ಟುವವರಾಗಿದ್ದಾರೆ. “ಹಾಕಿರುವ ಅಸ್ತಿವಾರವು ಯೇಸುಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.” 1 ಕೊರಿಂಥ 3: 11. “ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ.” ಅ. ಕೃ. 4: 12, ವಾಕ್ಯವಾದ ಕ್ರಿಸ್ತನು, ದೇವರ ತತ್ವಮೂರ್ತಿಯು-ಆತನ ಸೌಜನ್ಯದ, ಆಜ್ಞೆಯ, ಪ್ರೀತಿಯ ಮತ್ತು ಜೀವ್ಯದ ತತ್ವಮೂತಿಯಾಗಿದ್ದಾನೆ,-ಆತನೊಬ್ಬನ ಮೇಲೆಯೇ ನಾವು ಬಲವಾದ ಮತ್ತು ಸ್ಥಿರವಾದ ಗುಣವನ್ನು ಕಟ್ಟಬಹುದು. MBK 149.1

ನಾವು ಕ್ರಿಸ್ತನ ವಾಕ್ಯಗಳಿಗೆ ವಿಧೇಯರಾಗುವುದರ ಮೂಲಕವಾಗಿ ಆತನ ಮೇಲೆ ಕಟ್ಟುತ್ತೇವೆ. ನೀತಿಯಲ್ಲಿ ಉಲ್ಲಾಸಿಸುವವನೇ ನೀತಿವಂತನಲ್ಲ, ಆದರೆ ನೀತಿಕಾರ್ಯಗಳನ್ನು ಮಾಡುವವನೇ ನೀತಿವಂತನಾಗಿದ್ದಾನೆ. ಪರಿಶುದ್ಧತೆಯು ಭಾವಪರವಶತೆಯಲ್ಲ; ನಮ್ಮದೆಲ್ಲವನ್ನೂ ದೇವರಿಗೆ ಅಧೀನಪಡಿಸುವುದರ ಪ್ರತಿಫಲವಾಗಿದೆ; ಪರಲೋಕದ ತಂದೆಯ ಚಿತ್ತವನ್ನು ಮಾಡುವುದೇ ಆಗಿದೆ. ಇಸ್ರಾಯೇಲ ಜನರು ವಾಗ್ದತ್ತದೇಶದ ಸರಹದ್ದಿನಲ್ಲಿ ಪಾಳೆಯಬಿಟ್ಟಿರುವಾಗ, ಕಾನಾನ ದೇಶದ ಪರಿಚಯವನ್ನು ಹೊಂದಿರುವುದೂ ಅಥವಾ ಅದರ ವಿಷಯದಲ್ಲಿ ಇಂಪಾದ ಗೀತೆಗಳನ್ನಾಡುವದೂ ಸಾಕಾಗಿರಲಿಲ್ಲ. ಫಲವತ್ತಾದ ಆ ದೇಶದ ದ್ರಾಕ್ಷೇತೋಟಗಳನ್ನೂ ಮತ್ತು ಎಣ್ಣೇಮರಗಳ ತೋಪುಗಳನ್ನು ಸ್ವಾಧೀನಪಡಿಸಿಕೊಳ್ಳಲು ಇವು ಮಾತ್ರವೇ ಸಾಕಾಗಿರಲಿಲ್ಲ. ದೇವರಲ್ಲಿ ನಿಶ್ಚಲ ನಂಬಿಕೆಯಿಂದಲೂ, ಆತನ ನಿಯಮಗಳಿಗನುಸಾರವಾಗಿ ನಡೆಯುವುದರಿಂದಲೂ ಆತನ ವಾಗ್ದಾನಗಳನ್ನು ತಮಗೋಸ್ಕರವಾಗಿ ಯೋಗ್ಯರೀತಿಯಲ್ಲಿ ವಿನಿಯೋಗಿಸುವುದರಿಂದಲೂ ಮತ್ತು ಆತನ ಎಚ್ಚರಿಕೆಗಳಿಗೆ ವಿಧೇಯರಾಗಿ ದೇಶವನ್ನು ನಿಜವಾಗಿಯೂ ಸ್ವಾಧೀನಮಾಡಿಕೊಂಡು ಅನುಭವಿಸಬಹುದು. MBK 149.2

ಮತಧರ್ಮವು ಕ್ರಿಸ್ತನ ವಾಕ್ಯಗಳನ್ನು ಕೈಕೊಂಡು ನಡೆಯುವುದರಲ್ಲಿ ಅಡಕವಾಗಿದೆ; ದೇವರ ಅನುಗ್ರಹವನ್ನು ಹೊಂದುವದಕ್ಕಲ್ಲ, ಆದರೆ ಅಯೋಗ್ಯರಾಗಿದ್ದುದರಿಂದಲೇ ಆತನ ಪ್ರೀತಿಯ ದಾನಗಳನ್ನು ಹೊಂದಿದ್ದೇವೆ. ಕಂಠೋಕ್ತಿಯಾಗಿ ಹೇಳುವುದರಿಂದ ಮಾತ್ರವೇ ಕ್ರಿಸ್ತನು ಒಬ್ಬ ಮನುಷ್ಯನಿಗೆ ರಕ್ಷಣೆಯನ್ನು ಅನುಗ್ರಹಿಸನು, ಆದರೆ ನೀತಿಕಾರ್ಯದಲ್ಲಿ ತೋರಿಬರುವ ನಂಬಿಕೆಯಿಂದಲೇ ರಕ್ಷಣೆಯು ದೊರಕುತ್ತದೆ. ಕ್ರೈಸ್ತಹಿಂಬಾಲಕರಲ್ಲಿ ಕ್ರಿಯೆಯನ್ನೇ ಅಪೇಕ್ಷಿಸುತ್ತಾನೆಯೇ ಹೊರತು ಬರೇ ಬಾಯುಪಚಾರವನ್ನಲ್ಲ. ಕ್ರಿಯೆಯ ಮೂಲಕ ಗುಣ ನಿರ್ಮಾಣವಾಗುತ್ತದೆ. “ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು” ರೋಮಾಯ 8: 14. ಪ್ರಿಶುದ್ಧಾತ್ಮ ಪ್ರೇರಿತ ಹೃದಯವುಳ್ಳವರಲ್ಲ, ಆದರೆ ಶಕ್ತಿಗೆ ಪದೇ ಪದೇ ಅಧೀನರಾಗುವವರಲ್ಲ, ಆದರೆ ಅದರಿಂದ ಯಾರು ನಡಿಸಿಕೊಳ್ಳುತ್ತಾರೋ ಅವರೇ ದೇವರ ಮಕ್ಕಳು. MBK 150.1

ನೀನು ಕ್ರಿಸ್ತನ ಹಿಂಬಾಲಕನಾಗಬೇಕೆಂದು ಇಚ್ಛಿಸಿಯೂ ಹೇಗೆ ಆರಂಭಿಸಬೇಕೆಂದು ತಿಳಿದಿರುವೆಯಾ? ನೀನು ಅಂಧಕಾರದಲ್ಲಿದ್ದು ಬೆಳಕಿಗೆ ಬರುವುದು ಹೇಗೆ ಎಂಬುದನ್ನು ತಿಳಿದಿರುವೆಯಾ? ನಿನಗೆ ಕೊಡಲ್ಪಟ್ಟಿರುವ ಬೆಳಕನ್ನೇ ಹಿಂಬಾಲಿಸು. ದೇವರ ವಾಕ್ಯದ ವಿಷಯದಲ್ಲಿ ನಿನಗೆ ತಿಳಿದಿರುವಂತೆ ಅನುಸರಿಸಲು ಹೃದಯದಲ್ಲಿ ದೃಢಮಾಡಿಕೋ. ಆತನ ಶಕ್ತಿಯೂ ಮತ್ತು ಆತನ ಜೀವಮಾನವೇ ಆತನ ವಾಕ್ಯದಲ್ಲಿ ನೆಲೆಗೊಂಡಿದೆ. ವಿಶ್ವಾಸದಿಂದ ಆ ವಾಕ್ಯವನ್ನು ಸ್ವೀಕರಿಸಿದರೆ, ವಿಧೇಯನಾಗಲು ನಿನಗೆ ಶಕ್ತಿಯನ್ನು ಕೊಡುವದು. ನಿನಗೆ ಕೊಡಲ್ಪಟ್ಟಿರುವ ಬೆಳಕನ್ನು ಅನುಕರಿಸಿದರೆ ಹೆಚ್ಚಿನ ಬೆಳಕು ನಿನಗೆ ಅನುಗಹಿಸಲ್ಪಡುವುದು. ನೀನು ದೇವರ ವಾಕ್ಯದ ಮೇಲೆ ಕಟ್ಟುತ್ತಾ ಇದ್ದೀಯೆ, ಮತ್ತು ನಿನ್ನ ಗುಣವೂ ಕ್ರಿಸ್ತನ ಗುಣಗಳ ಸ್ವಾರೂಪ್ಯದಲ್ಲಿ ಕಟ್ಟಲ್ಪಡುವುದು. MBK 150.2

ನಿಜವಾದ ಅಸ್ತಿವಾರದ ಕ್ರಿಸ್ತನೇ ಜೀವಬಂಡೆಯಾಗಿದ್ದಾನೆ; ಆತನ ಮೇಲೆ ಕಟ್ಟುವವರೆಲ್ಲರಿಗೂ ಆತನ ಜೀವವು ಅನುಗ್ರಹಿಸಲ್ಪಡುತ್ತದೆ. “ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮಸಂಬಂಧವಾದ ಮಂದಿರವಾಗಲಿಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ.” 1 ಪ್ರೇತ 2: 5, “ಯೇಸುಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು. ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳೂ ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ.” ಎಫೆ ಸ 2: 21. ಈ ಕಲ್ಲುಗಳು ಅಸ್ತಿವಾರದೊಂದಿಗೆ ಐಕ್ಯವಾಗುತ್ತವೆ; ಯಾಕಂದರೆ ಎಲ್ಲರಲ್ಲೂ ಒಂದೇ ಜೀವವು ನೆಲಸಿದೆ, ಆ ಕಟ್ಟಡವನ್ನು ಯಾವ ಚಂಡಮಾರುತವೂ ಭೇದಿಸಲಾರದು; ಯಾಕಂದರೆ ದೇವರ ಜೀವದಲ್ಲಿ ಭಾಗಿಗಳಾದವರೆಲ್ಲರೂ ಆತನೊಡನೆ ಜೀವವುಳ್ಳವರಾಗಿರುವರು. MBK 150.3

ಆದರೆ ದೇವರ ವಾಕ್ಯದ ಮೇಲಲ್ಲದೆ ಬೇರೊಂದು ಅಸ್ತಿವಾರದ ಮೇಲೆ ಕಟ್ಟಲ್ಪಟ್ಟ ಕಟ್ಟಡವು ಬಿದ್ದುಹೋಗುವದು. ಕ್ರಿಸ್ತನ ಕಾಲದಲ್ಲಿ ಯೆಹೂದ್ಯರಂತೆ, ಮಾನವ ಮನೋಗತ ಭಾವನೆಗಳ ಅಸ್ತಿವಾರದ ಮೇಲೆ ಕಟ್ಟುವವನೂ, ಮತ್ತು ಮಾನವ ಕಲ್ಪಿಅತ ಮತಸಂಬಂಧವಾದಆಚರಣೆಗಳ ಮೇಲೆ ಕಟ್ಟುವವನೂ, ಅಥವಾ ಕ್ರಿಸ್ತನ ಕೃಪೆಯಿಲ್ಲದೆ ತನ್ನ ಸ್ವಂತ ಕ್ರಿಯೆಯ ಶಕ್ತಿಯ ಮೇಲೆ ಕಟ್ಟುವವನು, ತನ್ನ ಗುಣಗಳೆಂಬ ಕಟ್ಟಡವನ್ನು ಚಾಲಕ ಉಸುಬಿನ ಮೇಲೆ ಕಟ್ಟುವವನಾಗಿದ್ದಾನೆ. ಶೋಧನೆಗಳೆಂಬ ಚಂಡಮಾರುತನು ಈ ಉಸುಬಿನ ಅಸ್ಥಿವಾರವನ್ನು ಕೊಚ್ಚಿಕೊಂಡುಹೋಗಿ, ಕಾಲವೆಂಬ ನದೀದಡದಲ್ಲಿ ಅವನ ಮನೆಯನ್ನು ಹಾಳುಬೀಡಾಗಿ ಹಾಕಿಬಿಡುವುದು. ಆದುದರಿಂದ “ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ-...ನಾನು ನ್ಯಾಯವನ್ನು ನೂಲನ್ನಾಗಿಯೂ, ಧರ್ಮವನ್ನು ಮಟ್ಟುಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಅಸತ್ಯದ ಆಶ್ರಯವನ್ನು ಬಡಿದುಕೊಂಡು ಹೋಗುವದು, ಜಲಪ್ರವಾಹವು [ಮೋಸದ] ಮರೆಯನ್ನು ಮುಣುಗಿಸುವುದು.” ಯೆಶಾಯ 28: 16, 17. MBK 151.1

ಆದರೆ ಈ ಹೊತ್ತು ಕೃಪೆಯು ಪಾಪಿಯೊಂದಿಗೆ ವಾದಿಸುತ್ತದೆ. “ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಾಯೇಲ್ ವಂಶದವರೇ ನಿಮ್ಮ ದುರ್ಮಾರ್ಗಗಳನ್ನು ಬಿಡಿರಿ, ಬಿಟ್ಟು ಬಿಡಿರಿ; ನೀವು ಸಾಯಲೇಕೆ?” ಯೆಹೆಜ್ಕೇಲ 33: 11. ಮಾನಸಾಂತರ ಪಡದ ಪಾಪಿಯ ಹೃದಯದಲ್ಲಿ ಮಾತನಾಡುವ ಧ್ವನಿಯು, ತನ್ನ ಪ್ರೀತಿಯ ಪಟ್ಟಣವನ್ನು ನೋಡಿ ಹೃದಯಯಾತನೆಯಿಂದ ಖಂಡಿಸಿದಾತನ ಸ್ವರವೇ ಆಗಿದೆ: “ಯೆರೋಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವುದಕ್ಕೆ ನನಗೆ ಎಷ್ಟೋ ಸಾರಿ ಮನಸಿತ್ತು; ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು! ನೋಡಿರಿ ನಿಮ್ಮ ಆಲಯವು ನಿಮಗೆ ಬರಿದಾಗಿಬಿಟ್ಟಿದೆ.” ಲೂಕ 13: 34, 35. MBK 151.2

ಯೇಸುಸ್ವಾಮಿಯು, ಯೆರೂಸಲೇಮ್ ಪಟ್ಟಣದ ಸಂಕೇತದಲ್ಲಿ, ತನ್ನ ಕೃಪೆ ಯನ್ನು ತಿರಸ್ಕರಿಸಿ ಉಪೇಕ್ಷಿಸಿದ ಲೋಕವನ್ನೇ ಕಂಡನು. ಮೊಂಡಹೃದಯದವರಾದವರೇ ನಿಮಗಾಗಿ ಆತನು ದುಃಖಪಟ್ಟನು! ಆತನು ಪರ್ವತದ ಮೇಲೆ ತನ್ನ ಅಶ್ರುಧಾರೆಯನ್ನು ಸುರಿಸಿದಾಗಲೂ, ಯೆರೂಸಲೇಮು ಮಾನಸಾಂತರ ಪಟ್ಟು ಬರಬೇಕಾಗಿದ್ದ ದಂಡನೆಯಿಂದ ಪಾರಾಗಬಹುದಾಗಿತ್ತು. ಪರಲೋಕದ ವರವು ಸ್ವಲ್ಪಕಾಲ ಆಕೆಯು ಅದನ್ನು ಸ್ವೀಕರಿಸಲೆಂದು ಕಾದಿತ್ತು. ಹಾಗೆಯೇ ಓ! ಹೃದಯವೇ, ಕ್ರಿಸ್ತನು ಇನ್ನೂ ಪ್ರೀತಿಯ ಮನೋಭಾವನೆಯಿಂದ ನಿನ್ನನ್ನು ಕರೆಯುತ್ತಿದ್ದಾನೆ. “ಇಗೋ ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟಮಾಡುವನು.” ಪ್ರಕಟನೆ 3: 2೦. “ಈಗಲೇ ಆ ಸುಪ್ರಸನ್ನತೆಯ ಕಾಲ; ಇದೇ ರಕ್ಷಣೆಯ ದಿನ!” 2 ಕೊರಿಂಥ 6: 2. MBK 151.3

ಆತ್ಮಗಳ ಭರವಸೆಯುಳ್ಳ ನೀವು ಉಸುಬಿನ ಮೇಲೆ ಕಟ್ಟೂವವರಾಗಿದ್ದೀರಿ. ಆದರೂ ಸಂಭವಿಸುವುದಕ್ಕಿರುವ ಘೋರನಾಶನದಿಂದ ತಪ್ಪಿಸಿಕೊಳ್ಳಲು ಇನ್ನೂ ಸದವಕಾಶವಿದೆ. ಚಂಡಮಾರುತನು ರಭಸದಿಂದ ಬಡಿಯುವ ಮುನ್ನ, ಓಡಿ ದೃಢವಾದ ಅಸ್ತಿವಾರವನ್ನು ಆಶ್ರಯಿಸಿರಿ. “ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ-ಇಗೂ ಪರಿಕ್ಷಿತವಾಗಿಯೂ ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚಿಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ. ಭರವಸವಿಡುವವನು ಆತುರಪಡನು.” ಯೆಶಾಯ 28: 16. “ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಇಲ್ಲ.” ಯೆಶಾಯ 45: 22. ನೀನಂತೂ ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ: ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು ನಿನಗೆ ಸಹಾಯ ಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರ ಮಾಡುತ್ತೇನೆ.” ಯೆಶಾಯ 41: 1೦. “ಇಸ್ರಾಯೇಲಿಗೋ ಶಾಶ್ವತ ಯೆಹೋವನಿಂದ ಶಾಶ್ವತ ರಕ್ಷಣೆ ದೊರೆಯುವುದು; ಯುಗಯುಗಾಂತರಕ್ಕೂ ನೀವು ನಾಚಿಕೆಗೀಡಾಗುವುದಿಲ್ಲ, ಮಾನಭಂಗಪಡುವುದಿಲ್ಲ.” ಯೆಶಾಯ 45: 17. MBK 152.1

--:ಸಮಾಪ್ತಿ :--