ಪರ್ವತ ಪ್ರಸಂಗ

41/43

“ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗುವುದಕ್ಕೆ ಹೆಣಗಾಡಿರಿ.”

ಕಾಲಮೀರಿ ಬಂದ ಪ್ರಯಾಣಿಕನು, ಸೂರ್ಯಾಸ್ತಮಾನಕ್ಕೆ ಮೊದಲು ಪಟ್ಟಣದ ಬಾಗಲನ್ನು ಸೇರಬೇಕೆಂಬ ಇಚ್ಛೆಯಿಂದ ಅವಸರವಾಗಿ ನಡೆಯುವಾಗ್ಗೆ, ಬೇರಾವುದರಿಂದಲೂ ಆಕರ್ಷಿಸಲ್ಪಟ್ಟು ಹಿಂದಿರುಗನು. ಅವನ ಮನವೆಲ್ಲಾ ಒಂದೇ ಒಂದು ಉದ್ದೇಶದ ಮೇಲೆ-ಬಾಗಿಲನ್ನು ಪ್ರವೇಶಿಸುವುದರ ಮೇಲೆಯೇ ಕೇಂದ್ರೀಕೃತವಾಗಿತ್ತು. ಕ್ರಿಸ್ತಜೀವಮಾನದಲ್ಲೂ ಇದೇ ರೀತಿಯಾದ ಗಾಢ ಉದ್ದೇಶವು ಅವಶ್ಯವಾಗಿದೆ ಎಂದು ಯೇಸುವು ಬೋಧಿಸಿದನು. ನಾನು ನಿಮಗೆ ಸೌಜನ್ಯದ ಮಹಿಮೆಯನ್ನು ಪ್ರಕಟಿಸಿದ್ದೇನೆ, ಅದು ನನ್ನ ರಾಜ್ಯದ ಸತ್ಯವಾದ ಮಹಿಮೆಯೇ ಆಗಿದೆ. ಅದು ನಿಮಗೆ ಲೌಕೀಕ ರಾಜ್ಯ ಸಂಪತ್ತನ್ನು ವಾಗ್ದಾನ ಮಾಡುವುದಿಲ್ಲ; ಆದರೂ ನಿಮ್ಮ ಅತ್ಯುಚ್ಛ ಬಯಕೆ ಮತ್ತು ಪ್ರಯತ್ನವು ಯುಕ್ತವಾದದ್ದು, ಪ್ರಾಪಂಚಿಕ ಚಕ್ರಾಧಿಪತ್ಯದ ಪರಮಾಧಿಕಾರಕ್ಕೆ ಹೋರಾಡಲು ನಾನು ನಿಮ್ಮನ್ನು ಕರೆಯುವುದಿಲ್ಲ, ಆದರ್ಯ್ ಹೋರಾಟಗಳೂ ಮತ್ತು ಜಯಾಭಿಲಾಷೆಯೂ ನನ್ನ ಬಳಿಗೆ ಬರುವವರಿಗೆ ಅವಶ್ಯವಿಲ್ಲವೆಂದು ತೀರ್ಮಾನಿಸಲಾಗದು. ನನ್ನ ಆತ್ಮೀಯ ರಾಜ್ಯವನ್ನು ಪ್ರವೇಶಿಸುವುದಕ್ಕಾಗಿ ಹೆಣಗಾಡಿರಿ, ಪರಿತಪಿಸಿರಿ ಎಂದು ನಾನು ನಿಮಗೆ ಆಜ್ಞಾಪಿಸುತ್ತೇನೆ. MBK 141.2

ಕ್ರೈಸ್ತ ಜೀವಮಾನವು ಹೋರಾಟದ ಮತ್ತು ಪ್ರಗತಿಯ ಜೀವನವಾಗಿದೆ. ಆದರೆ ಹೊಂದಬೇಕಾಗಿರುವ ಜಯವು ಮಾನವನ ಶಕ್ತಿಯಿಂದ ಸಾಧ್ಯವಿಲ್ಲ, ಹೃದಯವೆಂಬ ಪ್ರಭಾವಕ್ಷೇತ್ರವೇ ರಣರಂಗವಾಗಿದೆ. ನಾವು ಹೆಣಗಬೇಕಾಗಿರುವ ಮಹಾ ಕದನವು-ಮನುಷ್ಯನು ಎಂದೂ ಮಾಡದಿರುವ ಮಹಾ ಕದನವು-ಸ್ವಾರ್ಥವನ್ನು ದೇವರ ಚಿತ್ತಕ್ಕೊಪ್ಪಿಸುವುದು, ಹೃದಯವನ್ನು ಪ್ರೀತಿಯ ಪರಮಾಧಿಕಾರಕ್ಕೆ ಅಧೀನಪಡಿಸುವುದೇ ಆಗಿದೆ. ರಕ್ತದಲ್ಲಿಯೂ ಮಾಂಸೇಚ್ಛೆಯಲ್ಲಿಯೂ ಜನಿಸಿದ ಹಳೆಯ ಸ್ವಭಾವವು ದೇವರ್ ರಾಜ್ಯಕ್ಕೆ ಸೇರಲಾರದು. ಪರಂಪರಾಗತವಾದ ಸ್ವಭಾವಗಳನ್ನೂ ಮತ್ತು ಹಿಂದಿನ ಗುಣಗಳನ್ನೂ ವರ್ಜಿಸಬೇಕು. MBK 142.1

ಆತ್ಮೀಯ ರಾಜ್ಯವನ್ನು ಪ್ರವೇಶಿಸಲು ದೃಢಮಾಡಿದವನು ಆಧ್ಯಾತ್ಮಿಕ ಉನ್ನತಿಯನ್ನೈದದ ಸ್ವಭಾವದ ಶಕ್ತಿಗಳೂ ಮತ್ತು ಭಾವೋದ್ರೇಕಗಳೂ, ಅಂಧಕಾರ ರಾಜ್ಯದ ಸೈನ್ಯಗಳ ಬೆಂಬಲದಿಂದ ತನಗೆ ವಿರೋಧವಾಗಿ ವ್ಯೂಹ ರಚಿಸುವುದನ್ನು ನೋಡುವನು. ಪಾಪವೆಂದು ಕಾಣುವ ಯಾವುದನ್ನಾದರೂ ಸ್ವಾರ್ಥತೆಯೂ ಮತ್ತು ದುರಭಿಮಾನವೂ ಎದುರಿಸುವುವು. ನಮ್ಮಲ್ಲಿ ಪರಮಾಧಿಕಾರಕ್ಕಾಗಿ ಹೆಣಗುವ ದುಷ್ಟ ಹಂಬಲಿಕೆ ಮತ್ತು ಗುಣಗಳನ್ನು ನಮ್ಮ ಶಕ್ತಿಯಿಂದ ಜಯಿಸಲಾರೆವು. ತನ್ನ ಗುಲಾಮಗಿರಿಯಲ್ಲಿ ನಮ್ಮನ್ನು ಬಂಧಿಸಿರುವ ಮಹಾ ವಿರೋಧಿಯನ್ನು ನಾವು ಜಯಿಸಲಾರೆವು. ದೇವರೊಬ್ಬನೇ ನಮಗೆ ಜಯವನ್ನು ಕೊಡಬಲ್ಲನು. ನಾವು ನಮ್ಮ ಮೇಲೆಯೂ ಮತ್ತು ನಮ್ಮ ಸ್ವಯಿಚ್ಎ ಮತ್ತು ಮಾರ್ಗಗಳ ಮೇಲೆಯೂ ಮೊದಲು ಜಯ ಹೊಂದಬೇಕೆಂದು ಆತನು ಇಚ್ಛಿಸುತ್ತಾನೆ. ಆದರೆ ನಮ್ಮ ಸಮ್ಮತಿ ಮತ್ತು ಸಹಕಾರವಿಲ್ಲದೆ ಆತನು ನಮ್ಮಲ್ಲಿ ಕಾರ್ಯಸಾಧಿಸನು. ಮಾನವನಿಗೆ ಕೊಡಲ್ಪಟ್ಟಿರುವ ವಿವೇಚನಾಶಕ್ತಿಯ ಮೂಲಕವಾಗಿ ದೇವಾತ್ಮನು ಕಾರ್ಯ ನಿರ್ವಹಿಸುತ್ತಾನೆ. ದೇವರೊಡನೆ ಸಹಕರಿಸಲು ನಮ್ಮ ಸರ್ವಸಾಮರ್ಥ್ಯವೂ ಅವಶ್ಯವಾಗಿದೆ. MBK 142.2

ಪ್ರತಿಯೊಂದು ಹೆಜ್ಜೆಯಲ್ಲೂ ಸ್ವಾರ್ಥತೆಯನ್ನು ತ್ಯಜಿಸಿ ದೀನಮನಸ್ಸಿನಿಂದಲೂ ಆಸಕ್ತಿಯಿಂದಲೂ ಪ್ರಾರ್ಥಿಸದಿದ್ದರೆ ಜಯವು ಲಭಿಸದು. ದೇವರೊಡನೆ ಸಹಕರಿಸಲು ನಮ್ಮ ಚಿತ್ತವನ್ನು ಬಲಾತ್ಕರಿಸಲಾಗದು, ಆದರೆ ಖುದ್ದು ರಾಜಿಯಿಂದ ನಮ್ಮನ್ನು ಒಪ್ಪಿಸಿಕೊಡಬೇಕು. ಪರಿಶುದ್ಧಾತ್ಮನ ಪ್ರೇರಣೆಯನ್ನು ನಿಮ್ಮ ಮೇಲೆ ನೂರ್ಮಡಿಯಾಗಿ ಬಲಾತ್ಕಾರದಿಂದ ಉಪಯೋಗಿಸುವುದಾದರೂ ಅದು ನಿಮ್ಮನ್ನು ಪರಲೋಕಕ್ಕೆ ಯೋಗ್ಯರಾದ ಪ್ರಜೆಗಳಾದ ಕ್ರೈಸ್ತರನ್ನಾಗಿ ಮಾಡಲಾರದು. ಸೈತಾನನ ಬಲವಾದ ಕೋಟೆಯನ್ನು ಭೇದಿಸಲಸದಳವಾಗುವುದು. ನಮ್ಮ ಚಿತ್ತವು ದೇವರ್ ಚಿತ್ತದ ಪಕ್ಕದಲ್ಲಿರಿಸಲ್ಪಡಬೇಕು. ನೀವೇ ನಿಮ್ಮ ಶಕ್ತಿಯಿಂದ ನಿಮ್ಮ ಉದ್ದೇಶ, ಆಕಾಂಕ್ಷೆ, ಅಭಿಲಾಷೆಗಳನ್ನು ದೇವರ ಚಿತ್ತಕ್ಕೆ ಅಧೀನ ಪಡಿಸಲಾರಿರಿ; ಆದರೆ ನೀವು ಇಷ್ಟಪಡುವುದಾದರೆ ದೇವರು “ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವುದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲುಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳೂ ಕ್ರಿಸ್ತನಿಗೆ ವಿಧೀಯವಾಗುವಂತೆ ಸೆರೆಹಿಡಿದು ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಶಿಕ್ಷೆಮಾಡುವುದಕ್ಕೆ 2 ಕೊರಿಂಥ 1೦: 5, ಸಿದ್ಧನಾಗಿದ್ದಾನೆ. ಆಗ ನೀವು “ಬಹು ಹೆಚ್ಚಾದ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೇಯನ್ನು ಸಾಧಿಸಿ” ಕೊಳ್ಳುವಿರಿ. “ಯಾಕಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡಿದ್ದಾನೆ.” ಫಿಲಿಪ್ಪಿಯ 2: 12, 13. MBK 142.3

ಆದರೆ ಕ್ರಿಸ್ತನ ಮನೋಜ್ಞತೆಯಿಂದಲೂ ಮತ್ತು ಪರಲೋಕದ ಮಹಿಮೆಯಿಂದಲೂ ಅನೇಕರು ಆಕರ್ಷಿಸಲ್ಪಟ್ಟಾಗ್ಯೂ, ಇವುಗಳು ಅವರ ಸ್ವಂತವಾಗಬೇಕಾದರೆ ಅವರು ಅನುಸರಿಸಬೇಕಾದ ನಿಬಂಧನೆಗಳಿಗೆ ಹಿಂಜರಿಯುವವರಾಗಿದ್ದಾರೆ. ವಿಶಾಲಮಾರ್ಗದಲ್ಲಿರುವ ಅನೇಕರು ತಾವು ನಡೆಯುತ್ತಿರುವ ಮಾರ್ಗದ ವಿಷಯದಲ್ಲಿ ಅಷ್ಟು ತೃಪ್ತಿಯಾಗಿಲ್ಲ, ಪಾಪದ ಗುಲಾಮಗಿರಿಯಿಂದ ಪಾರಾಗಲು ಹಂಬಲಿಸಿ, ಪಾಪಕರ್ಮಗಳ ಅಭ್ಯಾಸಗಳನ್ನು ತಮ್ಮ ಸ್ವಂತ ಶಕ್ತಿಯಿಂದ ಎದುರಿಸಲು ಪ್ರಯತ್ನಿಸುತ್ತಾರೆ. ಕಿರಿದಾದ ಮಾರ್ಗವನ್ನೂ ಮತ್ತು ಇಕ್ಕಟ್ಟಾದ ಬಾಗಲನ್ನೂ ಈಕ್ಷಿಸುತ್ತಾರೆ; ಆದರೆ ಸ್ವಾರ್ಥರಹಿತ ಭೋಗಾಪೇಕ್ಷೆಯೂ, ಪ್ರಾಪಂಚಿಕ ಆಶೆಯೂ, ದುರಭಿಮಾನವೂ, ಧರ್ಮಸಮ್ಮತವಲ್ಲದ ಆಕಾಂಕ್ಷೆಯೂ ರಕ್ಷಕನಿಗೂ ಮತ್ತು ಇವರಿಗೂ ನಡುವೆ ಬಂದು ಅಡಚಣೆಯಾಗಿ ಪರಿಣಮಿಸುವುವು. ತಮ್ಮ ಸ್ವಂತ ಇಚ್ಛೆಗಳನ್ನು ವರ್ಜಿಸಿ, ತಾವು ಆರಿಸಿಕೊಂಡ ಪ್ರಿಯ ವಸ್ತುಗಳನ್ನು ತ್ಯಜಿಸಬೇಕಾದರೆ ಮಹಾ ತ್ಯಾಗವು ಅವಶ್ಯವಾಗಿದೆ. ಆದುದರಿಂದಲೇ ಅವರು ಹಿಮ್ಮೆಟ್ಟಿ ತಡವರಿಸುತ್ತಾ ಹಿಂದಕ್ಕೆ ಹೋಗುತ್ತಾರೆ. “ಬಹುಜನ ಒಳಕ್ಕೆ ಹೋಗುವುದಕ್ಕೆ ನೋಡುವರು, ಆದರೆ ಅವರಿಂದಾಗುವುದಿಲ್ಲ.” ಒಳ್ಳೇದನ್ನು ಆಶಿಸಿ ಅದನ್ನು ಹೊಂದಲು ಸ್ವಲ್ಪ ಪ್ರಯತ್ನಿಸುತ್ತಾರೆ; ಆದರೆ ಅವರು ಅದನ್ನು ಆರಿಸಿಕೊಳ್ಳುವುದಿಲ್ಲ; ಹೇಗಾದರೂ ಅದನ್ನು ಹೊಂದಲೇಬೇಕೆಂಬ ಸ್ಥಿರವಾದ ಉದ್ದೇಶಮಗ್ನರಾಗಿಲ್ಲ. MBK 143.1

ನಾವು ಜಯಶೀಲರಾಗಬೇಕಾದರೆ ನಮ್ಮ ಚಿತ್ತವನ್ನು ದೇವರ ಚಿತ್ತಕ್ಕೊಪ್ಪಿಸಿ ಆತನೊಡನೆ ದಿನೇ ದಿನೇ ಸಹಕರಿಸಿ ಕಾರ್ಯ ಸಾಧಿಸುವುದೊಂದೇ ನಮ್ಮ ನಿರೀಕ್ಷೆ ಯಾಗಿದೆ. ನಾವು ಆತ್ಮ ಪ್ರಿತ್ಯಾಗ ಮಾಡದೆ ದೇವರ ರಾಜ್ಯವನ್ನು ಸೇರಲಾರೆವು. ನಾವು ಪರಿಶುದ್ಧತೆಯನ್ನು ಹೊಂದಬೇಕಾದರೆ ಆತ್ಮತ್ಯಾಗದ ಮೂಲಕವೂ ಮತ್ತು ಕ್ರಿಸ್ತನಲ್ಲಿದ್ದ ಮನಸ್ಸು ನಮ್ಮಲ್ಲಿರುವದಾದರೆ ಮಾತ್ರ ಸಾಧ್ಯವಾಗುತ್ತದೆ. ದುರಭಿಮಾನ ಮತ್ತು ಆತ್ಮ ತೃಪ್ತಿಯನ್ನು ಶಿಲುಬೆಗೆ ಜಡಿಯಬೇಕು. ನಾವು ನಮ್ಮಿಂದ ಕೇಳಲ್ಪಡತಕ್ಕ ಬೆಲೆಯನ್ನು ಕೊಡಲು ಇಷ್ಟವುಳ್ಳವರಾಗಿದ್ದೇವೋ? ನಮ್ಮ ಚಿತ್ತವನ್ನು ದೇವರ ಚಿತ್ತಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ ಮಾಡಲು ಇಚ್ಛಿಸುತ್ತೇವೋ? ನಾವು ಇಷ್ಟಪಡುವವರೆವಿಗೂ ದೇವರ ಪರಿವರ್ತನ ಕೃಪೆಯು ನಮ್ಮಲ್ಲಿ ಪ್ರಕಟವಾಗಲಾರದು. MBK 143.2

ನಾವು ಹೋರಾಡಬೇಕಾದ ಹೋರಾಟವು “ಶ್ರೇಷ್ಠ ಹೋರಾಟವಾಗಿದೆ.” ಅಪೋಸ್ತಲನಾದ ಪೌಲನು ಹೇಳುವುದನ್ನು ಗಮನಿಸಿರಿ: “ನನ್ನಲ್ಲಿ ಕಾರ್ಯ ಸಾಧಿಸುವ ದೇವರ ಬಲವನ್ನು ಪ್ರಯೋಗ ಮಾಡಿ ಇದಕ್ಕೋಸ್ಕರವೇ ಹೋರಾಡುತ್ತೇನೆ.” ಕೊಲೊಸ್ಸೆ 1: 29. MBK 144.1

ಯಾಕೋಬನು, ತನ್ನ ಜೀವನದ ಉತ್ಕಟಸ್ಥಿತಿಯಲ್ಲಿ ಪ್ರಾರ್ಥನೆ ಮಾಡಲನುವಾದನು. ಅವನು ಒಂದೇ ಒಂದು ಪ್ರಬಲ ಉದ್ದೇಶದಿಂದ ತುಂಬಿದ್ದನು,-ತನ್ನ ಗುಣಗಳ ಪರಿವರ್ತನೆಯನ್ನು ಹಂಬಲಿಸಿದನು. ದೇವರೊಡನೆ ವಿಜ್ಞಾಪಿಸುವ ವೇಳೆಯಲ್ಲಿ, ಅವನು ಭಾವಿಸಿದನಂತೆ, ಒಬ್ಬ ವೈರಿಯು ಅವನನ್ನು ಮುಟ್ಟಿದನು; ಆ ರಾತ್ರಿಯೆಲ್ಲಾ ತನ್ನ ಜೀವನ ಹೋರಾಟವನ್ನು ಹೋರಾಡಿದನು, ಅವನ ಶಕ್ತಿಯೆಲ್ಲಾ ಕುಂದಿಹೋದಾಗ, ದೇವದೂತನು ತನ್ನ ದೈವಶಕ್ತಿಯನ್ನಿಟ್ಟನು, ಆತನ ಸ್ಪರ್ಶದಿಂದ, ತಾನು ಯಾರೊಡನೆ ಹೋರಾಡುತ್ತಿದ್ದೆನೆಂದು ಯಾಕೋಬನು ಆಗಲೇ ಅರಿತನು. ಗಾಯಗೊಂಡು ಸಹಾಯಶೂನ್ಯನಾಗಿ, ಅವನು ರಕ್ಷಕನ ಎದೆಯನ್ನೊರಗಿ, ತನ್ನನ್ನು ಆಶೀರ್ವದಿಸುವಂತೆ ಬೇಡಿದನು. ಅವನನ್ನು ಆ ಉದ್ದೇಶದಿಂದ ಯಾವುದೂ ತಿರುಗಿಸಲಾಗಲಿಲ್ಲ, ಅಥವಾ ತನ್ನ ಪ್ರಾರ್ಥನೆಯನ್ನಾದರೂ ನಿಲ್ಲಿಸಲಿಲ್ಲ. ಕ್ರಿಸ್ತನು ಸಹಾಯಶುನ್ಯವಾದ ಮತ್ತು ಮಾನಸಾಂತರ ಪಟ್ಟ ಆ ಆತ್ಮದ ವಿಜ್ಞಾಪನೆಯನ್ನು ತನ್ನ ವಾಗ್ದಾನಕ್ಕನುಸಾರವಾಗಿ ಅನುಗ್ರಹಿಸಿದನು. “ನನ್ನ ಬಲವನ್ನು ಶರ್ಣು ಹೊಂದಲಿ, ನನ್ನ ಸಂಗಡ ಸಮಾಧಾನಕ್ಕೆ ಬರಲಿ, ನನ್ನೊಡನೆ ಸಂಧಿಮಾಡಿಕೊಳ್ಳಲಿ.” ಯೆಶಾಯ 25: 7. ಯಾಕೋಬನು ದೃಢಮನಸ್ಸಿನಿಂದ ಪ್ರಾರ್ಥಿಸಿದನು, “ನಿನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವುದಿಲ್ಲ ಅಂದನು.” ಆದಿಕಾಂಡ 32: 26. ಈ ದೃಢಮನಸ್ಸು, ಮೂಲಪಿತೃವಿನೊಡನೆ ಹೋರಾಡಿದಾತನಿಂದಲೇ ಪ್ರೇರಿಸಲ್ಪಟ್ಟಿತು. ಆತನೇ ಯಾಕೋಬನಿಗೆ ಜಯ ವನ್ನು ಅನುಗ್ರಹಿಸಿ, ಅವನ ಹೆಸರನ್ನು ಇಸ್ರಾಯೇಲನೆಂದು ಮಾರ್ಪಡಿಸಿದನು. “ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದ್ದರಿಂದ ನಿನಗೆ ಇಸ್ರಾಯೇಲನೆಂದು ಹೆಸರುಂಟಾಗುವದು ಎಂದು ಹೇಳಿದನು.” ಆದಿಕಾಂಡ 32: 28. ಯಾವುದಕ್ಕಾಗಿ ಯಾಕೋಬನು ತನ್ನ ಸ್ವಂತ ಶಕ್ತಿಯಿಂದ ವ್ಯರ್ಥವಾಗಿ ಹೋರಾಡಿದನೋ, ಅದನ್ನು ಆತ್ಮಾರ್ಪಣೆಯಿಂದಲೂ ಮತ್ತು ವಿಶ್ವಾಸದಿಮ್ದಲೂ ಗೆದ್ದನು. “ಲೋಕವನ್ನು ಜಯಿಸುವಂಥಾದ್ದು ನಮ್ಮ ನಂಬಿಕೆಯೇ.” 1 ಯೋಹಾನ 5: 4. MBK 144.2