ಪರ್ವತ ಪ್ರಸಂಗ

35/43

“ರಾಜ್ಯವೂ ಬಲವೂ ಮಹಿಮೆಯೂ ನಿನ್ನವೇ.”

ಕರ್ತನ ಪ್ರಾರ್ಥನೆಯ ಅಂತ್ಯೋಕ್ತಿಗಳು ಮೊದಲನೆಯವುಗಳಂತೆ, ನಮ್ಮ ತಂದೆಯು ಎಲ್ಲಾ ಪ್ರಭುತ್ವಕ್ಕೂ ಅಧಿಕಾರಕ್ಕೂ ಮತ್ತು ಎಲ್ಲಾ ಹೆಸರುಗಳಿಗೂ ಅಧಿಕನಾದವನೆಂದು ಶ್ರುತಪಡಿಸುತ್ತವೆ. ರಕ್ಷಕನು ತನ್ನ ಶಿಷ್ಯರ ಮುಂದಿದ್ದ ಅನೇಕ ವರ್ಷಗಳನ್ನು ತನ್ನ ಜ್ಞಾನದೃಷ್ಟಿಯಿಂದ ನೋಡಿದನು. ಅವರು ಬಯಸಿದಂತೆ ಪ್ರಾಪಂಚಿಕ ಉಚ್ಛ್ರಾಯ ಸ್ಥಿತಿ ಮತುಉ ಮಾನ ಗೌರವಗಳಲ್ಲ, ಆದರೆ ಮಾನವರ ದ್ವೇಷವೆಂಬ ಪ್ರಚಂಡ ಮಾರುತನಿಂದ ಬಡಿಯಲ್ಪಟ್ಟು, ಸೈತಾನನ ಕೋಪೋದ್ರೇಕಕ್ಕೆ ತುತ್ತಾದ ಗಾಡಾಂಧಕಾರ ಕಾಲಗಳು. ಜನಾಂಗಗಳ ಹೋರಾಟ ನಾಶನಗಳ ಮಧ್ಯದಲ್ಲಿ ಶಿಷ್ಯರ ಪ್ರತಿಯೊಂದು ಹೆಜ್ಜೆಗೂ ಆಪತ್ತುಗಳು ಅಮರಿಕೊಂಡಿರುವುವು ಮತ್ತು ಅನೇಕ ವೇಳೆಗಳಲ್ಲಿ ಅವರ ಹೃದಯಗಳು ಭಯದಿಂದ ಪೀಡಿಸಲ್ಪಡುವುವು. ಯೆರೂಸಲೇಮು ಹಾಳುಬೀಳುವುದನ್ನೂ ದೇವಾಲಯವು ಸೂರೆಗೊಳ್ಳುವುದನ್ನೂ, ಅದರ ಆರಾಧನೆಯು ಎಂದೆಂದಿಗೂ ಅಂತ್ಯಗೊಂಡು, ಇಸ್ರಾಯೇಲರು ಮರುಭೂಮಿಯ ತೀರದಲ್ಲಿ ಚೆದರಿರುವ ಒಡಕು ಉರುಕುಗಳಂತೆ ಎಲ್ಲಾ ನಾಡುಗಳಲ್ಲೂ ಚದರಿಸಲ್ಪಡುವುದನ್ನು ಅವರು ನೋಡಬೇಕಾಗಿತ್ತು. ಯೆಸುಸ್ವಾಮಿಯು ಹೇಳಿದ್ದು: “ಯುದ್ಧಗಳಾಗುವುದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ಧಿಗಳನ್ನೂ ನೀವು ಕೇಳಬೇಕಾಗಿರುವುದು.” “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವುವು; ಮತ್ತು ಅಲ್ಲಲ್ಲಿ ಬರಗಳು ಬರುವುವು, ಭೂಕಂಪಗಳು ಆಗುವುವು; ಇವೆಲ್ಲಾ [ನೂತನ ಕಾಲವು ಹುಟ್ಟುವ} ಪ್ರಸವ ವೇದನೆಯ ಪ್ರಾರಂಭ.” ಮತ್ತಾಯ 24: 6-8. ಹೀಗಿದ್ದರೂ ತಮ್ಮ ನಿರೀಕ್ಷೆ ಭಂಗವಾಯಿತೆಂದಾಗಲೀ ಅಥವಾ ದೇವರು ಭೂಮಿಯನ್ನು ಕೈಬಿಟ್ಟನೆಂದಾಗಲೀ ಕ್ರಿಸ್ತನ ಹಿಂಬಾಲಕರು ಭಯಪಡದವರಾಗಿರಬೇಕಿತ್ತು. ಬಲವೂ ಮಹಿಮೆಯೂ ಉಳ್ಳಾತನ ಮಹೋದ್ದೇಶಗಳು ಅವುಗಳ ಪರಿಪೂರ್ಣತೆಯ ವರೆಗೂ ಯಾವ ಅಡ್ಡಿ ಅಭ್ಯಂತರವಿಲ್ಲದೆ ಸಾಗುವುವು. ಅವರ ಪ್ರತಿನಿತ್ಯದ ಕೊರತೆಗಳನ್ನು ಹೊರಸೂಸುವ ಅವರ ಪ್ರಾರ್ಥನೆಯಲ್ಲಿ, ಯೇಸುಕ್ರಿಸ್ತನ ಶಿಷ್ಯರು ದುಷ್ಟತನದ ಎಲ್ಲಾ ಪ್ರಭುತ್ವ ಮತ್ತು ಶಕ್ತಿಗಳನ್ನುಳಿದು, ಅವರ ದೇವರಾದ ಕರ್ತನನ್ನು ನೋಡುವಂತೆ ಬೋಧಿಸಿದನು. ದೇವರ ರಾಜ್ಯವು ಎಲ್ಲರ ಮೇಲೂ ಅಧಿಕಾರ ನಡಿಸುತ್ತದೆ, ಮತ್ತು ಆತನು ಅವರ ತಂದೆಯೂ ಶಾಶ್ವತ ಮಿತ್ರನೂ ಆಗಿದ್ದಾನೆ. MBK 121.3

ಯೆರುಸಲೇಮಿನ ನಾಶನವು ಲೋಕದ ಮೇಲೆ ಬಾರಲಿದ್ದ ನಾಶನದ ಸೂಚನೆಯಾಗಿತ್ತು. ಯೆರುಸಲೇಮಿನ ಪತನದಲ್ಲಿ ನೆರವೇರಿದ ಅಪೂರ್ಣ ಪ್ರವಾದನೆಗಳು ವಿಶೇಷವಾಗಿ ಅಂತ್ಯದಿನಗಳಿಗೆ ಹೋಲುತ್ತವೆ. ಈವಾಗ ನಾವು ಮಹತ್ತಾದ ಮತ್ತು ಗಂಭೀರವಾದ ಸಂಭವಗಳ ಹೊಸ್ತಿಲ ಮೇಲೆ ನಿಂತಿದ್ದೇವೆ. ಲೋಕವು ಎಂದೂ ಕಂಡರಿಯದ ಮುಗ್ಗಟ್ಟಿನ ಕಾಲವು ನಮ್ಮ ಮುಂದಿದೆ. ಪ್ರಥಮ ಶಿಷ್ಯರಿಗೆ ಬಂದಂತೆ ದೇವರ ರಾಜ್ಯವು ಎಲ್ಲರ ಮೇಲೂ ಪ್ರಭುತ್ವ ನಡಿಸುವುದೆಂಬ ಭರವಸವು ನಮಗೂ ಇನಿದಾಗಿ ಬರಿತ್ತಿದೆ. ಸಂಭವಿಸಬೇಕಾದ ಘಟನೆಗಳ ಕಾರ್ಯಸರಣಿಯ ವಿವರಣೆಯು ಸೃಷ್ಟಿಕರ್ತನ ಕೈಯ್ಯಲ್ಲಿದೆ. ಪರಲೋಕದ ಸಾರ್ವಭೌಮನು ಜನಾಂಗಗಳ ಪರ್ಯವಸಾನವನ್ನು ಮತ್ತು ಆತನ ಸಭೆಗಳ ವ್ಯವಹಾರವನ್ನು ತನ್ನ ಅಧೀನದಲ್ಲಿಟ್ಟಿದ್ದಾನೆ. ದೈವಬೋಧಕನು ಕೊರೇಷನಿಗೆ ಹೇಳಿದಂತೆ “ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡು ಕಟ್ಟುವೆನು” ಯೆಶಾಯ 45: 5, ಎಂದು ತನ್ನ ಪ್ರತಿನಿಧಿಗಳಿಗೆ, ತನ್ನ ಯೋಚನೆಗಳ ನೆರವೇರಿಕೆಯನ್ನು ಕುರಿತು ಹೇಳುತ್ತಾನೆ. MBK 122.1

ಯೆಹೆಜ್ಕೇಲ ದೀರ್ಘದರ್ಶಿಯ ದರ್ಶನದಲ್ಲಿ, ಕೆರೂಬಿಯರ ರೆಕ್ಕೆಗಳಡಿಯಲ್ಲಿ ಒಂದು ಕೈಯ ಆಕಾರವಿತ್ತು. ಇದರಿಂದ ಆತನು ತನ್ನ ಸೇವಕರಿಗೆ, ಅವರಿಗೆ ಜಯವನ್ನು ಒದಗಿಸಿಕೊಡುವುದು ದೈವಶಕ್ತಿಯೇ ಎಂದು ಕಲಿಸುತ್ತಾನೆ. ದೇವರು ಯಾರನ್ನು ತನ್ನ ಪ್ರತಿನಿಧಿಗಳಾಗಿ ಆರಿಸಿಕೊಂಡಿದ್ದಾನೋ, ಅವರು ಆತನ ಸೇವೆಯ ಭಾರವೆಲ್ಲಾ ತನ್ನ ಮೇಲೆಯೇ ಆತುಕೊಂಡಿದೆ ಎಂದು ಯೋಚಿಸಬಾರದು. ಅಲ್ಪರಾದ ಮಾನವರು ಈ ಜವಾಬ್ದಾರಿಕೆಯ ಭಾರವನ್ನು ಹೊರಲು ನಿಯಮಿತರಾಗಿಲ್ಲ. ತನ್ನ ಸಂಕಲ್ಪಗಳನ್ನು ನೆರವೇರಿಸಲು ನಿದ್ರೆಮಾಡದೆನಿರಂತರವೂ ದುಡಿಯುತ್ತಿರುವಾತನು, ತನ್ನ ಸೇವೆಯನ್ನು ತಾನೇ ಮುಂದುವರಿಸುವನು. ದುಷ್ಟ ಮನುಷ್ಯರ ಉದ್ದೇಶಗಳನ್ನು ಮುರಿದುಬಿಡುವನು, ಆತನ ಜನರಿಗೆ ವಿರುದ್ಧವಾಗಿ ಕೇಡಿನ ಸಂಚುಮಾಡುವವರ ಆಲೋಚನೆಯನ್ನು ತಾರುಮಾರು ಮಾಡುವನು. ಸೈನ್ಯಗಳ ಅರಸನೂ ತರ್ಕನೂ ಆಗಿರುವಾತನೂ, ಕೆರೀಬಿಯರ ನಡುವೆ ಆಸೀನನಾಗಿರುವವನೂ, ಜನಾಂಗಗಳ ಕದನ, ಕೋಲಾಹಲಗಳ ಮಧ್ಯೆ ತನ್ನ ಮಕ್ಕಳನ್ನು ಸುರಕ್ಷಿತವಾಗಿ ಸಂರಕ್ಷಿಸುವನು. ಪರಲೋಕಾಧಿಪನು ನಮ್ಮ ರಕ್ಷಕನಾಗಿದ್ದಾನೆ. ಆತನು ಪ್ರತಿಯೊಂದು ಸಂಕಟವನ್ನೂ ಅಳೆದಿದ್ದಾನೆ, ಪ್ರತಿಯೊಮ್ದು ಆತ್ಮವನ್ನೂ ಪರಿಶೋಧಿಸುವ ಅಗ್ನಿಪರೀಕ್ಷೆಯನ್ನೂ ಗಮನಿಸುತ್ತಾನೆ. ರಾಜರುಗಳ ಕೋಟೆ ಕೊತ್ತಲುಗಳು ಪತನವಾದಾಗ, ಆತನ ಕೋಪದ ಸರಳುಗಳು ಆತನ ವಿರೋಧಿಗಳ ಎದೆಯನ್ನು ಬೇಧಿಸುವಾಗ, ಆತನ ಜನರು ಆತನ ಕರಗಳ ಆಶ್ರಯದಲ್ಲಿ ಸುರಕ್ಷಿತರಾಗಿರುವರು. MBK 123.1

“ಯೆಹೋವ ಮಹಿಮೆ ಪ್ರತಾಪ ವೈಭವ ಪರಾಕ್ರಮ ಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನದೇ....ಬಲ ಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ. ಎಲ್ಲಾ ದೊಡ್ಡಸ್ತಿಕೆಗೂ ಶಕ್ತಿಗೂ ನೀನೇ ಮೂಲನು.” ಪೂರ್ವಕಾಲವೃತ್ತಾಂತ 29: 11, 12. MBK 123.2

ತೀರ್ಪುಮಾಡುವದಲ್ಲ ಅದರಂತೆ ನಡೆಯುವುದೇ. MBK 123.3