ಪರ್ವತ ಪ್ರಸಂಗ
“ನಿನ್ನ ರಾಜ್ಯವು ಬರಲಿ.”
ದೇವರು ನಮ್ಮ ತಂದೆ, ಆತನು ನಮ್ಮನ್ನು ತನ್ನ ಮಕ್ಕಳಂತೆ ಪ್ರೀತಿಸಿ ಸಂರ ಕ್ಷಿಸುತ್ತಾನೆ; ಆತನು ಪ್ರಪಂಚಕ್ಕೆ ಮಹಾರಾಜನೂ ಹೌದು, ಆತನ ರಾಜ್ಯದ ಮೇಲ್ಮೆಯು ನಮ್ಮ ಮೇಲ್ಮೆಯಾಗಿದೆ. ಆದುದರಿಂದ ಅದರ ಉನ್ನತಿಗಾಗಿ ನಾವು ದುಡಿಯಬೇಕು. MBK 109.2
ಕ್ರಿಸ್ತನ ಶಿಷ್ಯರು ಆತನ ಮಹಿಮೆಯ ರಾಜ್ಯದ ತಕ್ಷಣ ಬರುವಿಕೆಯನ್ನು ಎದುರುನೋಡುತ್ತಿದ್ದರು; ಆದರೆ ಈ ಪ್ರಾರ್ಥನೆಯ ಮೂಲಕ ಆ ರಾಜ್ಯವು ಆಗ ಸ್ಥಾಪನೆಯಾಗಬೇಕಾದ್ದಲ್ಲವೆಂದು ಯೇಸುವು ಅವರಿಗೆ ವ್ಯಕ್ತಪಡಿಸಿದನು. ಅದು ಇನ್ನು ಮುಂದೆ ಬರಬೇಕಾದ ಸಂಭವವೆಂದು ತಿಳಿದು ಪ್ರಾರ್ಥಿಸಬೇಕಾಗಿತ್ತು. ಆದರೂ ಈ ಮನವೆಯು ಅವರಿಗೆ ಭರವಸದಾಯಕವೂ ಆಗಿತ್ತು. ಅವರು ಆತನ ರಾಜ್ಯದ ಬರುವಿಕೆಯನ್ನು ಆಗ ಕಾಣಲಾರದಿದ್ದುದರಿಂದಲೂ ಮತ್ತು ಯೇಸುವು ಅವರನ್ನು ಅದಕ್ಕಾಗಿ ಪ್ರಾರ್ಥಿಸುವಂತೆ ಹೇಳಿದ್ದೂ, ದೇವರ ಸ್ವಂತ ಕಾಲದಲ್ಲಿ ಅದು ನಿಷ್ಚಯವಾಗಿಯೂ ಬರುವುದೆಂದು ಖಚಿತವಾಗುತ್ತದೆ. MBK 110.1
ದೇವರ ಕೃಪೆಯ ರಾಜ್ಯವು ದಿನದಿಂದ ದಿನಕ್ಕೆ, ಪಾಪಭರಿತವೂ ಅವಿಧೇಯತೆಯಿಂದ ಕೂಡಿದ್ದೂ ಆಗಿದ್ದ ಹೃದಯಗಳು ಆತನ ಪ್ರೀತಿಯ ಅದಿಕಾರಕ್ಕೆ ಅಧೀನವಾಗುವುದರಲ್ಲಿ ಈಗಲೇ ಸ್ಥಾಪಿತವಾಗುತ್ತಿದೆ. ಆದರೆ ಆ ರಾಜ್ಯದ ಸಂಪೂರ್ಣ ಸ್ಥಾಪನೆಯು ಕ್ರಿಸ್ತನು ಈ ಲೋಕಕ್ಕೆ ಎರಡನೆಯ ಸಾರಿ ಬರುವವರೆವಿಗೂ ಮುಕ್ತಾಯವಾಗುವುದಿಲ್ಲ. “ರಾಜ್ಯಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನ ಭಕ್ತಜನರಿಗೆ” ಕೊಡಲ್ಪಡಬೇಕು. (ದಾನಿಯೇಲ 7: 27) “ಲೋಕಾದಿಯಿಂದ” ಅವರಿಗೋಸ್ಕರ “ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ” (ಮತ್ತಾಯ 25: 34), ಹೊಂದಬೇಕು. ಆಗ ಕ್ರಿಸ್ತನು ತನ್ನ ಮಹಾ ಪ್ರಭಾವವನ್ನು ಹೊಂದಿ ಪ್ರಭುತ್ವ ಮಾಡುವನು. MBK 110.2
ಮತ್ತೊಮ್ಮೆ ಪರಲೋಕದ ಹೆಬ್ಬಾಗಿಲುಗಳು ತೆರೆಯಲ್ಪಟ್ಟು, ನಮ್ಮ ರಕ್ಷಕನು ರಾಜಾಧಿರಾಜನಂತೆಯೂ ಕರ್ತರ ಕರ್ತನಂತೆಯೂ ಲಕ್ಷೋಪಲಕ್ಷ, ಕೋಟ್ಯಾನುಕೋಟಿ ಪರಿಶುದ್ಧರೊಡನೆ ಬರುವನು. “ಯೆಹೋವ ಇಮ್ಮಾನುವೇಲನು” ಭೂಲೋಕಕ್ಕೆಲ್ಲಾ ರಾಜನಾಗಿರುವನು; ಆ ದಿನದಲ್ಲಿ ಯೆಹೋವನೊಬ್ಬನೇ ದೇವರೆಂದೂ ಆತನ ಹೆಸರೊಂದೇ ಸ್ತುತ್ಯವೆಂದೂ ಎಲ್ಲರಿಗೂ ತಿಳಿದಿರುವುದು.” “ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು; ಅವರು ಆತನಿಗೆ ಪ್ರಜೆಗಳಾಗಿರುವರು, ದೇವರು ತಾನೇ ಅವರ ಸಂಗಡ ಇರುವನು, ಆತನು ಅವರ ದೇವರಾಗಿರುವನು” ಜೆಕರ್ಯ 14: 9; ಪ್ರಕಟನೆ 21: 3. MBK 110.3
ಆದರೆ ಆ ಬರುವಿಕೆಗೆ ಮುಂಚೆ “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು, ಆಗ ಅಂತ್ಯವು ಬರುವುದು” ಮತ್ತಾಯ 24: 14, ಎಂದು ಕ್ರಿಸ್ತನು ಹೇಳಿದನು. ಆತನ ಕೃಪೆಯ ಸುವಿಶೇಷವು ಲೋಕದಲ್ಲೆಲ್ಲಾ ಸಾರಲ್ಪಟ್ಟ ಹೊರತು ಆತನ ರಾಜ್ಯವು ಬರುವುದಿಲ್ಲ. ಹೇಗೆ, ನಾವು ನಮ್ಮನ್ನು ದೇವರಿಗೊಪ್ಪಿಸಿ, ಇತರ ಆತ್ಮಗಳನ್ನು ಆತನಿಗಾಗಿ ಆದಾಯ ಮಾಡುವಾಗ, ಆತನ ರಾಜ್ಯದ ಬರುವಿಕೆಯನ್ನು ಸ್ವರೆಗೊಳಿಸುತ್ತೇವೆ. ಆತನ ಸೇವೆಗೆ ತಮ್ಮನ್ನು ಪ್ರತಿಷ್ಟಿಸಿಕೊಂಡವರು ಮಾತ್ರವೇ “ಇಗೋ ನಾನಿದ್ದೇನೆ” ಕುರುಡರಿಗೆ ಕಣ್ಣು ಕೊಡುವುದಕ್ಕೂ ಮನುಷ್ಯರನ್ನು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ, ತಿರುಗಿಕೊಂಡು...ಪಾಪಪರಿಹಾರವನ್ನೂ ಪವಿತ್ರರಾದವರಲ್ಲಿ ಹಕ್ಕನ್ನೂ ಹೊಂದುವಂತೆ” ಮಾಡಲು “ನನ್ನನ್ನು ಕಳುಹಿಸು.” - ಎಂದು ಅವರು ಮಾತ್ರವೇ “ನಿನ್ನ ರಾಜ್ಯವು ಬರಲಿ” ಎಂದು ಪ್ರಾರ್ಥಿಸುವರು. (ಯೆಶಾಯ 6: 8; ಅಪೊಸ್ತಲ 26: 18). MBK 110.4