ಪರ್ವತ ಪ್ರಸಂಗ

15/43

“ಆಣೆಯನ್ನೇ ಇಡಬೇಡ”

ಈ ಆಜ್ಞೆಗೆ ಕಾರಣವು ಕೊಡಲ್ಪಟ್ಟಿದೆ: ನಾವು ಆಕಾಶದ ಮೇಲೆ ಆಣೆಯಿಡಬಾರದು, “ಅದು ದೇವರ ಸಿಂಹಾಸನವು. ಭೂಮಿಯ ಮೇಲೆ ಆಣೆಯಿಡಬೇಡ; ಅದು ಆತನ ಪಾದಪೀಠವು, ಯೆರೂಸಲೇಮಿನ ಮೇಲೆ ಆಣೆಯಿಡಬೇಡ; ಅದು ಆ ದೊಡ್ಡ ಅರಸನ ಪಟ್ಟಣವಾಗಿದೆ. ನಿನ್ನ ತಲೆಯ ಮೇಲೆ ಕೂಡ ಆಣೆಯಿಡಬೇಡ; ನೀನು ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕರ್ರಗೆ ಮಾಡಲಾರಿ.” MBK 70.1

ಸಕಲವೂ ದೇವರಿಂದಲೇ ಬಂದವುಗಳು. ನಾವು ಆತನಿಂದ ಹೊಂದದಿರುವುದು ಯಾವುದೂ ಇಲ್ಲ; ಮತ್ತು ಇದಕ್ಕಿಂತಲೂ ಹೆಚ್ಚಾಗಿ. ಕ್ರಿಸ್ತನ ರಕ್ತದಿಂದ ನಮಗಾಗಿ ಕ್ರುಅಯಕ್ಕೆ ಕೊಳ್ಳಲ್ಪಡದ ವಸ್ತುವು ಯಾವುದೂ ಇಲ್ಲ. ನಮ್ಮಲ್ಲಿರುವುದೆಲ್ಲಾ ಕ್ರೂಜೆಯಿಂದ ಮುದ್ರಿತವಾಗಿ ನಮಗೆ ಬರುತ್ತದೆ, ಎಲ್ಲಾ ಗಣನೆಗೂ ಮೀರಿದ ಅಮೂಲ್ಯ ರಕ್ಸ್ತದಿಂದ ಕೊಳ್ಳಲ್ಪಟ್ಟಿದ್ದೇವೆ. ಯಾಕಂದರೆ ಅದು ದೇವರ ಜೀವವಾಗಿದೆ. ಆದುದರಿಂದ ನಮ್ಮ ಮಾತುಗಳು ಈಡೇರುವಂತೆ, ನಮಗೆ ಸ್ವಂತವಾದವುಗಳಂತೆ, ನಾವು ಆಣೆಯಿಡಲು ಅದಿಕಾರವಿಲ್ಲ. MBK 70.2

ಮೂರನೆಯ ಆಜ್ಞೆಯು ದೇವರ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದೆಂದು ಹೇಳುವುದನ್ನು ಯೆಹೂದ್ಯರು ಅರಿತಿದ್ದರು; ಆದರೂ ತಾವು ಇತರ ಆಣೆಗಳನ್ನಿಡಲು ಸ್ವಾತಂತ್ರರೆಂದು ಅವರು ತಿಳಿದರು. ಆಣೆಯಿಡುವುದು ಅವರೊಳಗೆ ಸಾಮಾನ್ಯವಾಗಿತ್ತು. ಮೋಶೆಯ ಮೂಲಕವಾಗಿ ಸುಳ್ಳಾಣೆಯಿಡಬಾರದೆಂದು ಆಜ್ಞಾಪಿಸಲ್ಪಟ್ಟಿದ್ದರು; ಆದರೂ ಆಣೆಯಿಂದ ಹೊರಿಸಲ್ಪಟ್ಟ ನಿರ್ಬಂಧದಿಂದ ಬಿಡುಗಡೆ ಹೊಂದಲು ಅನೇಕ ವ್ಯವಸ್ಥೆಗಳಿದ್ದುವು. ನಿಜವಾಗಿಯೂ ಅಯೋಗ್ಯವಾದ ಕಾರ್ಯಾಸಕ್ತರಾಗಿರಲು ಅವರು ಭಯಪಡಲಿಲ್ಲ, ಯಾವುದಾದರೊಂದು ತಂತ್ರವನ್ನು ಹೂಡಿ ಆಜ್ಞೆಗಳಿಂದ ನುಣುಚಿಕೊಳ್ಳಲು ಸೋಗು ಹಾಕಿಕೊಂಡಿರುವವರೆಗೂ, ಸುಳ್ಳಾಣೆಯಿಂದ ಹಿಮ್ಮೆಟ್ಟುತ್ತಿರಲಿಲ್ಲ. MBK 70.3

ಯೇಸುವು ಅವರ ಪದ್ಧತಿಯನ್ನು ಖಂಡಿಸಿ, ಅವರ ಆಣೆಯಿಡುವ ಸಂಪ್ರದಾಯವು ದೇವರ ಆಜ್ಞೆಯ ಉಲ್ಲಂಘನೆಯೆಂದು ಸ್ಪಷ್ಟವಾಗಿ ತಿಳಿಯಪಡಿಸಿದನು. ನಮ್ಮ ರಕ್ಷಕನು ನ್ಯಾಯಬದ್ಧವಾದ ಆಣೆಯನ್ನು ನಿಷೇಧಿಸಲಿಲ್ಲ, ಇದರಲ್ಲಿ ತಾನು ಹೇಳಿದ್ದು ಸತ್ಯ, ಸತ್ಯವೇ, ಎಂಬುದಕ್ಕೆ ದೇವರು ಸಾಕ್ಷಿಯಾಗಿರುವಂತೆ ಭಯಭಕ್ತಿಯಿಂದ ಕರೆಯುವುದು ನಿಷೇಧಿಸಲ್ಪಡಲಿಲ್ಲ, ಯೇಸುಕ್ರಿಸ್ತನು ತಾನೇ, ಸನ್ಹೆದ್ರಿಮ್ ಸಂಘದ ಮುಂದೆ ಆತನ ವಿಚಾರಣೆಯಲ್ಲಿ, ಆಣೆಯಿಟ್ಟು ಸಾಕ್ಷಿಕೊಡಲು ತಿರಸ್ಕರಿಸಲಿಲ್ಲ. ಮಹಾ ಯಾಜಕನು ಆತನಿಗೆ “ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂದು ನಮಗೆ ಹೇಳಬೇಕು ಎಂದು ಅನ್ನಲಾಗಿ ಯೇಸು-ನೀನೇ ಹೇಳಿದ್ದೀ.....ಅಂದನು” ಮತ್ತಾಯ 26: 63-64. ಕ್ರಿಸ್ತನಾದರೋ ಪರ್ವತ ಪ್ರಸಂಗದಲ್ಲಿ ನ್ಯಾಯಬದ್ಧವಾದ ಆಣೆಯನ್ನು ನಿಷೇಧಿಸಿದ್ದರೆ, ಆತನು ತನ್ನ ವಿಚಾರಣೆಯ ಸಮಯದಲ್ಲಿ ಮಹಾ ಯಾಜಕನನ್ನು ಆಕ್ಷೇಪಿಸಿ, ತನ್ನ ಹಿಂಬಾಲಕರ ಪ್ರಯೋಜನಾರ್ಥವಾಗಿ ತನ್ನ ಸ್ವಂತ ಬೋಧನೆಯನ್ನು ನಿರ್ಬಂಧ ಪಡಿಸುತ್ತಿದ್ದನು. MBK 70.4

ತಮ್ಮ ಸಹೋದರರನ್ನು ಮೋಸಪಡಿಸಲು ಹೆದರದ ಅನೇಕರಿದ್ದಾರೆ, ದೇವರ ಆತ್ಮನಿಂದ ಬೋಧಿಸಲ್ಪಟ್ಟು ತಮ್ಮ ಸೃಷ್ಟಿಕರ್ತನಲ್ಲಿ ಸುಳ್ಳು ಹೇಳುವುದು ಮಹಾ ಭಯಂಕರ ಪಾತಕವೆಂದು ಮನದಟ್ಟು ಮಾಡಲ್ಪಟ್ಟಿದ್ದಾರೆ. ಅವರು ಆಣೆಯಿಡುವಾಗ ಮನುಷ್ಯರೆದುರಲ್ಲಿ ಮಾತ್ರವಲ್ಲ ಆದರೆ ದೇವರ ಮುಂದೆಯೂ ಸಾಕ್ಷಿಕೊಡುತ್ತಿದ್ದಾರೆಂದು ನೆನಸುವಂತೆ ಎಚ್ಚರಿಸಲ್ಪಟ್ಟಿದ್ದಾರೆ; ಅವರು ಸುಳ್ಳಾಣೆಯನ್ನಿಟ್ಟರೆ, ಅದು ಹೃದಯವನ್ನು ಸಂಪೂರ್ಣವಾಗಿ ಓದಬಲ್ಲ ಮತ್ತು ನಿಕರವಾದ ಯಥಾರ್ಥತೆಯನ್ನು ತಿಳಿದಾತನಿಗೆ ಸಲ್ಲುತ್ತದೆ. ಈ ಪಾಪದ ಫಲವಾಗಿ ಬಂದಿರುವ ಭಯಂಕರ ನ್ಯಾಯತೀರ್ಪಿನ ಪರಿಜ್ಞಾನವು ಅವರ ಮೇಲೆ ನಿರ್ಬಂಧ ಪರಿಣಾಮವನ್ನು ಹೊಂದಿದೆ. MBK 71.1

ಆದರೆ ಯಾವನಾದರೂ ಸಮಂಜಸವಾಗಿ ಆಣೆಯಿಟ್ಟು ಸಾಕ್ಷಿ ಕೊಡುವವನಿದ್ದರೆ, ಅವನು ಕ್ರೈಸ್ತನೊಬ್ಬನೆ. ನಾವು ಯಾರೊಡನೆ ಸಂಬಂಧವುಳ್ಳವರಾಗಿದ್ದೇವೋ ಆತನ ಕಣ್ಣಿಗೆ ಮನಸ್ಸಿನ ಪ್ರತಿಯೊಂದು ಯೋಚನೆಯೂ ವ್ಯಕ್ತವಾಗಿದೆ ಎಂದು ತಿಳಿದು, ದೇವರ ಸನ್ನಿಧಿಯಲ್ಲೋ ಎಂಬಂತೆ ನಿಷ್ಠೆಯಿಂದ ಜೀವಿಸುತ್ತಾನೆ; ಮತ್ತು ಹಾಗೆ ನ್ಯಾಯಸಮ್ಮತವಾದ ರೀತಿಯಲ್ಲಿ ಮಾಡಬೇಕಾದಾಗ, ತಾನು ಹೇಳುವುದು ಸತ್ಯವೇ ಎಂಬುದಕ್ಕೆ ದೇವರು ಸಾಕ್ಷಿಯಾಗಿರುವಂತೆ ಮನವೆ ಮಾಡುವುದು ಸರಿಯಾದದ್ದು. MBK 71.2

ಯೇಸುವು ಆಣೆಯಿಡುವುದರ ಅವಶ್ಯವೇ ಇಲ್ಲದ ಒಂದು ತತ್ವವನ್ನು ತಿಳಿಸಲು ಮುಂದುವರಿದನು. ನಮ್ಮ ಮಾತುಗಳು ಯಥಾರ್ಥವಾಗಿರಬೇಕೆಂದು ಬೋಧಿಸು ತ್ತಾನೆ. “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು. MBK 71.3

ಈ ವಾಕ್ಯಗಳು ಎಲ್ಲಾ ವಿಧವಾದ ಅಯೋಗ್ಯ ಕಾರ್ಯಗಳಲ್ಲಡಗಿರುವ ಅರ್ಥವಿಲ್ಲದ ವಾಕ್ಸರಣಿಯನ್ನೂ ಮತ್ತು ಹೆಚ್ಚು ಪದಗಳನ್ನೂ ಖಂಡಿಸುತ್ತದೆ. ಸಮಾಜದಲ್ಲೂ ಮತ್ತು ವ್ಯವಹಾರ ಲೋಕದಲ್ಲೂ ಚಾಲ್ತಿಯಲ್ಲಿರುವ ಠಕ್ಕಿನ ಉಪಚಾರೋಕ್ತಿಗಳನ್ನೂ, ಯಥಾರ್ಥತೆಯಿಂದ ಜಾರಿಕೊಳ್ಳುವುದನ್ನೂ, ಮುಖಸ್ತುತಿಯ ವಾಕ್ಸರಣಿಯನ್ನೂ ಮತ್ತು ವ್ಯಾಪಾರದಲ್ಲಿ ತಪ್ಪು ನಿರೂಪಣೆಯನ್ನೂ ಇವು ಖಂಡಿಸುತ್ತವೆ. ತನ್ನ ನಿಜಸ್ಥಿತಿಯನ್ನಲ್ಲದೆ ನಟನೆಯನ್ನು ತೋರಿಸಲು ಪ್ರಯತ್ನಿಸುವ ಅಥವಾ ಯಾರ ಮಾತುಗಳು ಅವರ ಹೃದಯದ ಯಥಾರ್ಥ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲವೋ ಅಂಥವರು ಪ್ರಾಮಾಣಿಕರೆಂದು ಕರೆಯಲ್ಪಡಲಾರರೆಂದು ಬೋಧಿಸುತ್ತವೆ. MBK 72.1

ಕ್ರಿಸ್ತನ ಈ ವಾಕ್ಯಗಳಿಗೆ ಗಮನ ಕೊಟ್ಟಿದ್ದರೆ, ಅವರು ಕೆಡುಕಿನ ಊಹೆಯನ್ನೂ ಮತ್ತು ನಿರ್ದಯ ಗುಣದೋಷ ವಿಮರ್ಶೆಯನ್ನೂ ಉಚ್ಚರಿಸದಂತೆ ತಡೆಯುವರು; ಇತರರ ನಡತೆಯನ್ನೂ ಮತ್ತು ಉದ್ದೇಶವನ್ನೂ ಟೀಕಿಸುವುದರಲ್ಲಿ, ಯಾರು ತಾನೆ ನಿಕರವಾದ ಯಥಾರ್ಥವನ್ನೇ ಹೇಳಲಾರರು? ಎಷ್ಟು ಸಾರಿ ದುರಭಿಮಾನ, ಭಾವೋದ್ರೇಕ ಮತ್ತು ವೈಯಕ್ತಿಕ ಅಸಮಾಧಾನವೂ ಮನಸ್ಸಿನ ಮೇಲೆ ಉಂಟಾದ ಪರಿಣಾಮವನ್ನು ಮರೆಸಲು ವೇಷ ಧರಿಸುವುದು! ಒಂದು ವ್ಯಂಗದೃಷ್ಟಿ, ಒಂದು ನುಡಿ, ಒಂದು ಧ್ವನಿಯ ವಂಚನೆಯೂ, ಅನೃತದಿಂದ ಕೂಡಿರಬಹುದು. ಅಥವಾ ಸತ್ಯವಾದುವುಗಳೂ ಕೂಡ ಸುಳ್ಳುಭಾವನೆಯನ್ನು ಕೊಡುವಂತೆ ಉಚ್ಚರಿಸಲ್ಪಡಬಹುದು. “ಇದಕ್ಕಿಂತ (ಯಥಾರ್ಥತೆಗಿಂತ) ಹೆಚ್ಚಾದದ್ದು ಸೈತಾನನಿಂದ ಬಂದದ್ದು.” MBK 72.2

ಕ್ರೈಸ್ತರು ಮಾಡುವುದೆಲ್ಲಾ ಸೂರ್ಯನ ಬೆಳಕಿನಂತೆ ಪಾರದರ್ಶಕವಾಗಿರಬೇಕು. ಸತ್ಯವು ದೇವರಿಂದಾದುದು; ಮೋಸವು, ಅದರ ಅಸಂಖ್ಯಾತ ರೂಪದಲ್ಲಿಯೂ, ಸೈತಾನನಿಂದಾದುದು; ಯಾವನಾದರೂ ಯಾವ ರೀತಿಯಲ್ಲಾದರೂ ಪ್ರಾಮಾಣಿಕ ಮಾರ್ಗದಿಂದ ಓರೆಯಾದರೆ ತನ್ನನ್ನು ಸೈತಾನನ ಅಧಿಕಾರಕ್ಕೆ ಒಪ್ಪಿಸುವವನಾಗಿದ್ದಾನೆ. ನಿರ್ದಿಷ್ಟವಾದ ಸತ್ಯವಚನವನ್ನು ಮಾತಾಡುವುದು ಸುಲಭವಲ್ಲ. ಸತ್ಯವನ್ನು ಅರಿಯದಿದ್ದರೆ ನಾವು ಅದನ್ನು ಹೇಳಲೂ ಸಾಧ್ಯವಿಲ್ಲ; ಎಷ್ಟು ಸಾರಿ ಮನೋಭಾವನೆಯ ಸಲಹೆಗಳೂ, ಮನಸ್ಸಿನ ಪ್ರೇರಣೆ, ಅಸಂಪೂರ್ಣ ತಿಳಿವಳಿಕೆ, ನ್ಯಾಯವಾದದಲ್ಲಿ ತಪ್ಪುಗಳು, ನಾವು ಒಡನಾಡಲಿರುವ ಸಂಭವಗಳಲ್ಲಿ ಯುಕ್ತ ವಿವೇಚನೆಯನ್ನು ನಿವಾರಿಸುತ್ತವೆ! ನಮ್ಮ ಮನಸ್ಸುಗಳು ಸತ್ಯವಾದಾತನಿಂದ ಸತತವೂ ನಡಿಸಲ್ಪಡದಿದ್ದರೆ ನಾವು ಸತ್ಯವನ್ನು ಹೇಳಲಾರೆವು. MBK 72.3

ಅಪೋಸ್ತಲನಾದ ಪೌಲನ ಮೂಲಕವಾಗಿ, ಕ್ರಿಸ್ತನು ಆಜ್ಞಾಪಿಸುವುದೇನಂದರೆ, “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ.” “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿ ಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.” ಕೊಲೊಸ್ಸೆ 4: 6; ಎಫೆಸ 4:29. ಈ ವೇದವಾಕ್ಯಗಳಿಗನುಸಾರವಾಗಿ ಪರ್ವತ ಮೇಲ್ರ್ ಕ್ರಿಸ್ತನು ನುಡಿದ ಮಾತುಗಳು, ಕುಚೋದ್ಯ, ಲಘುವರ್ತನೆ ಮತ್ತು ದುಶ್ಶೀಲ ಸಂಭಾಷಣೆಗಳನ್ನು ಖಂಡಿಸುತ್ತವೆ. ನಮ್ಮ ಮಾತುಗಳು ಯಥಾರ್ಥವಾಗಿ ಮಾತ್ರವಲ್ಲದೆ ಶುದ್ಧವಾಗಿಯೂ ಇರಬೇಕೆಂದು ಇವು ಕೋರುತ್ತವೆ. MBK 73.1

ಕ್ರಿಸ್ತನಲ್ಲಿ ಕಲಿತವರು “ಕತ್ತಲೆಗೆ ಸಂಬಂಧವಾದ ಅಪ್ರಯೋಜಕ ಕೃತ್ಯಗಳೊಡನೆ ಪಾಲುಗಾರರಾಗುವುದಿಲ್ಲ.” ಎಫೆಸ 5:11. ನುಡಿಯಲ್ಲಿಯೂ ಮತ್ತು ಜೀವ್ಯದಲ್ಲಿಯೂ ಸರಳವಾಗಿಯೂ, ಮುಚ್ಚುಮರೆಯಿಲ್ಲದೆಯೂ ಮತ್ತು ಸತ್ಯವಂತರಾಗಿರುವರು; ಯಾಕಂದರೆ “ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ.” (ಪ್ರಕಟನೆ 14: 5),ಎಂದು ದೇವರಿಂದ ಹೊಗಳಿಸಿಕೊಂಡ ಪರಿಶುದ್ಧರ ಗುಂಪಿನಲ್ಲಿರಲು ಸಿದ್ದರಾಗುತ್ತಿದ್ದಾರೆ. MBK 73.2

“ಕೆಡುಕನ್ನು ಎದುರಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು.” MBK 73.3

ರೋರ್ಮ ಸಿಪಾಯಿಗಳ ಸಂಪರ್ಕದಿಂದ ಯೆಹೂದ್ಯರು ಪದೇ ಪದೇ ಸಿಟ್ಟಿಗೆಬ್ಬಿಸಲ್ಪಡುವ ಸಂದರ್ಭವು ಒದಗುತ್ತಿತ್ತು. ಯೂದಾಯ ಮತ್ತು ಗಲಿಲಾಯದ ಬೇರೆ ಬೇರೆ ಭಾಗಗಳಲ್ಲಿ ಸೇನಾ ಸಮೂಹವು ಇಳಿದಿದ್ದುವು, ಮತ್ತು ಇವರ ಪ್ರಸನ್ನತೆಯು ಯೆಹೂದ್ಯರಿಗೆ ತಾವೂ ಒಂದು ಜನಾಂಗವಾಗಿರದೆ ಅವನತಿಯನ್ನೈದಿದುದನ್ನು ಅವರ ಸ್ಮೃತಿಪಥಕ್ಕೆ ತರುತ್ತಿತ್ತು. ಆತ್ಮಕರಕರೆಯಿಂದ ತುತೂರಿಯ ಮಹಾ ಧ್ವನಿಯನ್ನು ಕೇಳುತ್ತಾ, ಸೈನ್ಯವೆಲ್ಲಾ ರೋಮನರ ಧ್ವಜದ ಸುತ್ತಲೂ ನಿಲ್ಲುವುದನ್ನೂ ಮತ್ತು ಅವರ ಪ್ರಭುತ್ವದ ಗುರುತಾದ ಈ ಧ್ವಜಕ್ಕೆ ಪ್ರಭುನಿಷ್ಠೆಯಿಂದ ಎರಗುವುದನ್ನು ನೋಡುತ್ತಿದ್ದರು. ಪದೇ ಪದೇ ಜನರಿಗೂ ಸೈನಿಕರಿಗೂ ಕಚ್ಚಾಟಗಳುಂಟಾಗುತ್ತಿದ್ದುವು. ಇದರ ಪರಿಣಾಮವಾಗಿ ಜನಸಾಮಾನ್ಯವಾದ ದ್ವೇಷವನ್ನು ಕೆರಳಿಸುತ್ತಿದ್ದುವು. ಪದೇ ಪದೇ ರೋರ್ಮ ಅಧಿಕಾರಿಗಳು ಸಿಪಾಯಿ ಗಳ ಪಹರೆಯೊಡನೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭರದಿಂದ ಸಾಗುವಾಗ, ಹೊಲಗಳಲ್ಲಿ ದುಡಿಯುತ್ತಿದ್ದ ಯೆಹೂದ್ಯ ರೈತರನ್ನು ಹಿಡಿದೆಳೆದು, ಬೆಟ್ಟದಾಚೆಗೆ ಹೊರೆಗಳನ್ನು ಹೊರುವುದಕ್ಕಾಗಲೀ ಅಥವಾ ಅವಶ್ಯವಾದ ಇತರ ಯಾವ ಸೇವೆಯನ್ನಾದರೂ ಮಾಡುವಂತೆ ಬಲಾತ್ಕರಿಸುತ್ತಿದ್ದರು. ಇದು ರೋಮನರ ಕಾಯಿದೆಗಳಿಗೂ ಪದ್ಧತಿಗೂ ಸಮಂಜಸವಾಗಿತ್ತು. ಆದುದರಿಂದ ಅಂಥಾ ನಿರ್ಬಂಧಗಳನ್ನು ಪ್ರತಿಭಟಿಸುವುದು ಇನ್ನೂ ಹೆಚ್ಚಿನ ಮೂದಲಿಕೆಗೂ ಮತ್ತು ಕ್ರೌರ್ಯಕ್ಕೂ ಕಾರಣವಾಗುತ್ತಿತ್ತು. ರೋಮನರ ಮೊಗವನ್ನು ಕಿತ್ತೊಗೆಯುವ ಹಂಬಲಿಕೆ ಜನರ ಹೃದಯದಲ್ಲಿ ದಿನೇ ದಿನೇ ಅಧಿಕವಾಗುತ್ತಿತ್ತು. ವಿಶೇಷವಾಗಿ ಕೆಚ್ಚೆದೆಯ ಕಟ್ಟಾಳುಗಳಾದ ಗಲಿಲಾಯರಲ್ಲಿ ಬಹಿರಂಗ ಪ್ರತಿಭಟನೆಯ ಆತ್ಮವು ಬಹಳವಾಗಿ ವ್ಯಾಪಿಸಿತ್ತು. ಕಪೆರ್ನೌಮು ಗಡಿನಾಡಾಗಿದ್ದುದರಿಂದ ಅದು ರೋಮನರ ಕಾವಲುದಂಡಿನ ಕೇಂದ್ರಸ್ಥಾನವಾಗಿತ್ತು, ಮತ್ತು ಯೇಸುವು ಉಪದೇಶಿಸುವ ಸಮಯದಲ್ಲಿ, ಸೇನಾ ಸಮೂಹದ ದೃಶ್ಯವು ಕೇಳುತ್ತಿದ್ದವರಲ್ಲಿ ಇಸ್ರಾಯೇಲರ ತೇಜೋವಧೆಯ ಯೋಚನೆಯು ಕರಕರೆಯನ್ನುಂಟುಮಾಡುತ್ತಿತ್ತು. ರೋಮನರ ಅಹಂಭಾವವನ್ನಡಗಿಸುವವನು ಕ್ರಿಸ್ತನೇ ಎಂದು ಜನರೆಲ್ಲರೂ ತವಕದಿಂದ ನಿರೀಕ್ಷಿಸುತ್ತದ್ದರು. MBK 73.4

ಯೇಸುವು ವ್ಯಥೆಯಿಂದ ಕೂಡಿದವನಾಗಿ ತನ್ನ ಮುಂದೆ ಮುಖಗಳನ್ನೆತ್ತಿ ನಿಂತಿರುವವರನ್ನು ನೋಡುತ್ತಾನೆ. ಅವರಲ್ಲಿ ಪ್ರತೀಕಾರದ ಭಾವನೆಯು ತನ್ನ ದುಷ್ಟ ಪರಿಣಾಮವನ್ನು ಅಚ್ಚೊತ್ತಿದಂತೆ ತೋರುತ್ತಿರುವುದನ್ನೂ ಮತ್ತು ತಮ್ಮ ಹಿಂಸಕರನ್ನು ಸದೆಬಡಿಯಲು ಶಕ್ತಿಯನ್ನು ಎಷ್ಟು ಉಗ್ರವಾಗಿ ಹಾರೈಸುತ್ತಿರುವರೆಂಬುದನ್ನು ಕಂಡನು. ಆತನು ವ್ಯಥೆಯಿಂದ ಕೂಡಿದ ಧ್ವನಿಯಲ್ಲಿ “ಕೆಡುಕನನ್ನು ಎದುರಿಸಬೇಡ, ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು” ಎಂಬುದಾಗ ಆಜ್ಞಾಪಿಸುತ್ತಾನೆ. MBK 74.1

ಈ ವಾಕ್ಯಗಳು ಹಳೆ ಒಡಂಬಡಿಕೆಯ ಬೋಧನೆಯ ಪುನರೋಚ್ಛಾರಣೆಯಷ್ಟೆ. “ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು” (ಯಾಜಕಕಾಂಡ 24:2೦) ಎಂಬುದು ಮೋಶೆಯ ಆಜ್ಞೆಗಳಲ್ಲಿ ಕೊಡಲ್ಪಟ್ಟಿತ್ತೆಂಬುದೇನೋ ನಿಜವೇ; ಆದರೆ ಅದು ರಾಷ್ಟ್ರ ನಿಬಂಧನೆಯಾಗಿತ್ತು. ಪ್ರತಿವೈರ ಸಾಧಿಸುವುದರಲ್ಲಿ ಯಾವನೂ ನ್ಯಾಯವಾದಿಯೆಂದೆನಿಸಿಕೊಳ್ಳುತ್ತಿರಲಿಲ್ಲ; ಯಾಕಂದರೆ ಯೆಹೋವನು ಅವರಿಗೆ ಹೇಳಿದ್ದನು. “ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ.” “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು....ಅಂದುಕೊಳ್ಳಬೇಡ”. ನಿನ್ನ ಶತ್ರು ಬಿದ್ದರೆ ಹಿಗ್ಗ ಬೇಡ.” “ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರು ಕೊಡು.” ಜ್ಞಾನೋಕ್ತಿ 2೦: 22; 24: 29, 17; 25: 21, 22. MBK 74.2

ಯೇಸುವಿನ ಭೂವಾಸವೆಲ್ಲಾ ಆತನ ತತ್ವದ ಪ್ರಕಟನೆಯಾಗಿತ್ತು. ತನ್ನ ವಿರೋಧಿಗಳಿಗೆ ಜೀವಕೊಡುವ ರೊಟ್ಟಿಯನ್ನು ಕೊಡಲಿಕ್ಕಾಗಿಯೇ ಆತನು ಪರಲೋಕವಾಸವನ್ನು ತ್ಯಜಿಸಿದನು. ಆತನ ಜನನದಿಂದ ಮರಣದವರೆಗೂ ನಿಂದೆ ಸಂಕಟಗಳು ಆತನ ಮೇಲೆ ಹೊರಿಸಲ್ಪಟ್ಟರೂ ಕ್ಷಮಾಗುಣದಿಂದ ಕೂಡಿದ ಮಮತೆಯನ್ನೇ ಆತನಿಂದ ಹೊರಡಿಸಿದುವು. ಪ್ರವಾದಿಯಾದ ಯೆಶಾಯನ ಮೂಲಕ ಆತನು ಹೇಳುವುದೇನಂದರೆ: “ಹೊಡೆಯುವವರಿಗೆ ಬೆನ್ನು ಕೊಟ್ಟು ಕೂದಲು ಕೀಳುವವರಿಗೆ ಗಡ್ಡವನ್ನು ಒಡ್ಡಿದೆನು; ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ.” “ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ.” ಯೆಶಾಯ 5೦: 6; 53: 7. ಮತ್ತು ಕಲ್ವೇರಿಯ ಕ್ರೂಜೆಯ ಮೇಲಿನಿಂದಲೂ ಆತನ ಕೊಲೆಗಡುಕರಿಗಾಗಿ ಪ್ರಾರ್ಥನೆಯೂ, ಸಾಯುತ್ತಿದ್ದ ಕಳ್ಳನಿಗೆ ಜೀವನಿರೀಕ್ಷೆಯ ಸುವಾರ್ತೆಯೂ ಯುಗಯುಗಗಳಲ್ಲೂ ಪ್ರತಿಧ್ವನಿಸುತ್ತವೆ. MBK 75.1

ತಂದೆಯ ಪ್ರಸನ್ನತೆಯು ಕ್ರಿಸ್ತನನ್ನು ಆವರಿಸಿತ್ತು, ಮತ್ತು ಲೋಕಕ್ಕೆ ಆಶೀರ್ವಾದವಾಗಲೆಂದು ಆಜ್ಞಾಪಿಸಲ್ಪಟ್ಟ ಅಪಾರ ಪ್ರೀತಿಯೇ ಹೊರತು ಬೇರಾವುದೂ ಆತನಿಗೆ ಸಂಘಟಿಸಲಿಲ್ಲ. ಇದರಲ್ಲಿಯೇ ಆತನಿಗೂ ಮತ್ತು ನಮಗೂ ಉಪಶಮನದ ಮೂಲ. ಕ್ರಿಸ್ತನಲ್ಲಿದ್ದ ಆತ್ಮದಿಂದ ತುಂಬಿರುವವರು ಕ್ರಿಸ್ತನಲ್ಲಿ ನೆಲೆಸಿರುವನು. ಅವನೆಡೆಗೆ ಗುರಿಕಟ್ಟಿದ ಪೆಟ್ಟುಗಳು, ತನ್ನ ಪ್ರಸನ್ನತೆಯ ಮೂಲಕವಾಗಿ ಅವನನ್ನು ಆವರಿಸಿರುವ ರಕ್ಷಕನಿಗೆ ತಗುಲುವುವು. ಅವನು ಕೆಡುಕನನ್ನು ಎದುರಿಸುವ ಅವಶ್ಯವಿಲ್ಲ; ಯಾಕಂದರೆ ಕ್ರಿಸ್ತನೇ ಅವನ ಕಾವಲಾಗಿದ್ದಾನೆ. ನಮ್ಮ ಕರ್ತನ ಅನುಜ್ಞೆಯಿಲ್ಲದೆ ಯಾವುದೂ ಅವನನ್ನು ಮುಟ್ಟಲಾರದು; ಆತನ ಸಂಕಲ್ಪದ ಮೇರೆಗೆ ಸಂಭವಿಸುವುದೆಲ್ಲಾ “ಆತನನ್ನು ಪ್ರೀತಿಸುವವನ ಹಿತಕ್ಕಾಗು ಎಲ್ಲಾ ಕಾರ್ಯಗಳೂ ಅನುಕೂಲವಾಗುತ್ತವೆ.” ರೋಮಾಯ 8:28. MBK 75.2

“ನಿನ್ನ ಸಂಗಡ ವಾಜ್ಯವಾಡಿ ನಿನ್ನ ಒಳಂಗಿಯನ್ನು ತಕ್ಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಡು. ಒಬ್ಬನು ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀ ಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು” ಮತ್ತಾಯ 5: 4೦, 41. MBK 75.3

ಅಧಿಕಾರದಲ್ಲಿರುವವರ ಜಕ್ಕನ್ನು ಪ್ರತಿಭಟಿಸುವ ಬದಲು, ಅವರು ಕೇಳುವುದಕ್ಕಿಂತಲೂ ಹೆಚ್ಚಿಗೆ ಮಾಡಿದರೆ ಎಂದು ಕ್ರಿಸ್ತನು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು. ಮತ್ತು ಸಾಧ್ಯವಾದಷ್ಟೂ ಪ್ರತಿಯೊಂದು ಕರ್ತವ್ಯವನ್ನೂ-ದೇಶದ ಆಜ್ಞೆಗಳಿಗೆ ಮೀರಿದ್ದಾದರೂ-ನಿರ್ವಹಿಸಬೇಕು. ಮೋಶೆಯ ಮೂಲಕವಾಗಿ ಕೊಡಲ್ಪಟ್ಟ ಆಜ್ಞೆಗಳು, ಬಡವರನ್ನು ಕುರಿತು ಅತಿ ದಯೆಯನ್ನು ಪ್ರಕಟಿಸಿದೆ. ಒಬ್ಬ ಬಡ ಮನುಷ್ಯನು ತನ್ನ ವಸ್ತ್ರವನ್ನು ಒತ್ತೆಯಾಗಿ ಕೊಟ್ಟರೆ, ಅಥವಾ ಸಾಲಕ್ಕಾಗಿ ಈಡು ಕೊಟ್ಟರೆ, ಸಾಲಗಾರನು ಅದನ್ನು ತೆಗೆದುಕೊಳ್ಳಲು ಅವನ ಮನೆಯೊಳಗೆ ಹೋಗಬಾರದು; ಒತ್ತೆಯ ಸಾಮಾನನ್ನು ಸಾಲ ತೆಗೆದುಕೊಂಡವನು ತಂದುಕೊಡುವವರೆವಿಗೂ ಹೊರಗಡೆ ಬೀದಿಯಲ್ಲಿಯೇ ನಿಂತಿರಬೇಕು. ಸಂದರ್ಭವೇನಾಗಿದ್ದರೂ ಸರಿಯೇ ಒತ್ತೆಯ ವಸ್ತು ಹೊತ್ತು ಮುಳುಗುವುದಕ್ಕೆ ಮುಂಚಿತವಾಗಿ ಅದರ ಮಾಲೀಕನಿಗೆ ಹಿಂದಕ್ಕೆ ಕೊಡಲ್ಪಡಬೇಕು. (ಧರ್ಮೋಪದೇಶಕಾಂಡ 24: 1೦-13) ಕ್ರಿಸ್ತನ ಕಾಲದಲ್ಲಿ ಇಂಥಾ ಕರುಣೆಯ ಏರ್ಪಾಡುಗಳು ಲಕ್ಷಿಸಲ್ಪಡಲಿಲ್ಲ; ಆದರೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ ನ್ಯಾಯಸ್ಥಾನದ ತೀರ್ಪಿಗೆ ಅಧೀನರಾಗಿರಿ, ಒಂದು ವೇಳೆ ಇದು ಮೋಶೆಯ ಆಜ್ಞೆಗಳಿಂದ ನಿಯಮಿಸಲ್ಪಟ್ಟಿದ್ದಕ್ಕಿಂತಲೂ ಅಧಿಕವಾದರೂ ಅದಕ್ಕೆ ಅಧೀನರಾಗಿರಿ. MBK 76.1

ತಮ್ಮ ವಸ್ತ್ರದ ಒಂದು ಭಾಗವನ್ನು ಕೇಳಿದರೂ, ಅದಕ್ಕೆ ಅಧೀನರಾಗಿರಬೇಕು. ಇದಕ್ಕಿಂತಲೂ ಹೆಚ್ಚಾಗಿ ಸಾಲಗಾರನ ಸಾಲವನ್ನು ಕೊಡಬೇಕು, ಅವಶ್ಯವಾದರೆ ನ್ಯಾಯಸ್ಥಾನದಲ್ಲಿ ಅವನಿಂದ ಕಿತ್ತುಕೊಳ್ಳಬೇಕೆಂದು ಆಜ್ಞಾಪಿಸಲ್ಪಟ್ಟದ್ದಕ್ಕಿಂತಲೂ ಹೆಚ್ಚಾಗಿಯೇ ಕೊಡಬೇಕು. “ನಿನ್ನ ಸಂಗಡ ವ್ಯಾಜ್ಯಮಾಡಿ ನಿನ್ನ ಒಳಂಗಿಯನ್ನು ತಕ್ಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಡು, ಒಬ್ಬನು-ಒಂದು ಮೈಲುದೂರ ಬಾ ಎಂದು ನಿನ್ನನ್ನು ಬಿಟ್ಟೀ ಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು. MBK 76.2

ಮತ್ತೂ ಯೇಸುವು ಹೇಳಿದ್ದೇನಂದರೆ, “ನಿನ್ನನ್ನು ಬೇಡುವವನಿಗೆ ಕೊಡು; ನಿನ್ನಲ್ಲಿ ಕಡಾ ಈಸಿಕೊಳ್ಳಬೇಕೆಂದು ಬಂದವನಿಗೆ ಮುಖ ತಿರುವಿಕೊಳ್ಳಬೇಡ.” ಇದೇ ಪಾಠವು ಮೋಶೆಯಿಂದಲೂ ಬೋಧಿಸಲ್ಪಟ್ಟಿತ್ತು. “ಸ್ವದೇಶದವನಾದ ಬಡವನು ಇದ್ದರೆ, ನೀವು ಆ ಬಡ ಸಹೋದರನಿಗೆ ಮನಸ್ಸನ್ನು ಕಠಿನ ಮಾಡಿಕೊಂಡು ಅವನಿಗೆ ಸಹಾಯ ಮಾಡದೆ ಇರಬಾರದು. ನೀವು ಕೈದೆರೆದು ಅವನ ಅವಸರಕ್ಕೆ ಬೇಕಾದದ್ದನ್ನು ಕೊಟ್ಟು ಸಹಾಯ ಮಾಡಬೇಕು.” ಧರ್ಮೋಪದೇಶ 15: 7, 8. ನಮ್ಮ ರಕ್ಷಕನ ನುಡಿಗಳನ್ನು ವೇದವು ಪರಿಷ್ಕಾರವಾಗಿ ಹೇಳುತ್ತದೆ. ಸಹಾಯವನ್ನು ಬೇಡುವವರೆಲ್ಲರಿಗೂ ಗೊತ್ತು ಗುರಿಯಿಲ್ಲದೆ ಕೊಡಬೇಕೆಂದು ಕ್ರಿಸ್ತನು ಬೋಧಿಸುವುದಿಲ್ಲ; ಆದರೆ ಆತನು ಹೇಳುವುದೇನಂದರೆ, “ಅವನ ಅವಸರಕ್ಕೆ ಬೇಕಾದದ್ದನ್ನು ಕೊಟ್ಟು ಸಹಾಯ ಮಾಡಬೇಕು.” ಮತ್ತು ಇದು ಒಂದು ದಾನವಾಗಿರಬೇಕೇ ಹೊರತು ಸಾಲವಾಗಿರಬಾರದು. ಯಾಕಂದರೆ “ನಮಗೂ ಸಾಲ ಕೊಟ್ಟಾರೆಂಬ” ನಿರೀಕ್ಷೆಯಿಂದ ಕೊಡಬಾರದು. ಲೂಕ 6:35. MBK 76.3