ಪರ್ವತ ಪ್ರಸಂಗ

10/43

“ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನು ಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು.”

ಯೆಹೋವನು ಮೋಶೆಯ ಮೂಲಕವಾಗಿ ಹೇಳಿದ್ದೇನಂದರೆ: “ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು.... ನಿಮ್ಮ ಸ್ವಜನರಲ್ಲಿ ಯಾರಿಗಾದರೂ ಕೇಡಿಗೆ ಕೇಡನ್ನು ಮಾಡದೆ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಬೇಕು” ಯಾಜಕಕಾಂಡ 19:17, 18. ಕ್ರಿಸ್ತನು ನಿರೂಪಿಸಿದ ಸತ್ಯಗಳೆಲ್ಲಾ ಪ್ರವಾದಿಗಳಿಂದ ಬೋಧಿಸಲ್ಪಟ್ಟವುಗಳೇ, ಆದರೆ ಮಾನವರ ಹೃದಯಕಾಠಿಣ್ಯದಿಂದಲೂ ಮತ್ತು ಪಾಪಾಶೆಯಿಂದಲೂ ಅವು ಅಸ್ಫುಟವಾಗಿದ್ದುವು. MBK 60.2

ರಕ್ಷಕನ ವಾಕ್ಯಗಳು, ಅವುಗಳನ್ನು ಕೇಳುವವರು ಇತರರನ್ನು ದೋಷಿಗಳೆಂದು ನ್ಯಾಯ ತೀರಿಸುತ್ತಾ ತಾವೇ ಅವರಷ್ಟೇ ತಪ್ಪಿನಲ್ಲಿದ್ದರೆಂಬುದನ್ನು ವ್ಯಕ್ತಪಡಿಸಿದುವು; ಯಾಕಂದರೆ ಅವರು ದ್ವೇಷಾಸೂಯೆಗಳನ್ನು ಆದರಿಸುವವರಾಗಿದ್ದರು. MBK 60.3

ಅವರು ಕೂಡಿದ್ದ ಸ್ಥಳದಿಂದ ಸಮುದ್ರದ ಆಚೆ, ಬಾರ್ಷಾ ಎಂಬ ಒಂದು ಏಕಾಂತಪ್ರದೇಶ, ಇದರ ಅರಣ್ಯ ಪ್ರದೇಶವೂ ಮತ್ತು ಅಡವಿಯ ಬೆಟ್ಟಗಳೂ ಬಹಳಕಾಲದಿಂದಲೂ ಎಲ್ಲಾ ತರಹೆಯ ಅಪರಾಧಿಗಳ ನೆಚ್ಚಿನ ಅವಿತುಕೊಳ್ಳುವ ತಾವಾಗಿತ್ತು. ಈ ಸ್ಥಳದಲ್ಲಿ ನಡೆದ ದರೋಡೆ ಮತ್ತು ಕೊಲೆಗಳ ವರದಿಯು ಎಲ್ಲಾ ಮನುಷ್ಯರ ಮನಸ್ಸಿನಲ್ಲಿಯೂ ಮಾಸಿಲ್ಲದೆ ಇತ್ತು, ಮತ್ತು ಅನೇಕರು ಈ ಅಕ್ರಮ ಪ್ರವರ್ತಕರಿಗೆ ಪ್ರತೀಕಾರ ಮಾಡಲು ಛಲವನ್ನು ಸಾಧಿಸುತ್ತಿದ್ದರು. ಅದೇ ಸಮಯದಲ್ಲಿ ಅವರೇ ಭಾವೋದ್ದೀಪ್ತರೂ ಮತ್ತು ಕಲಹಶೀಲರೂ ಆಗಿದ್ದರು; ತಮ್ಮನ್ನು ಪೀಡಿಸುತ್ತಿದ್ದ ರೋಮನರನ್ನು ದ್ವೇಷಿಸಿದರು, ಮತ್ತು ಬೇರೆಲ್ಲಾ ಜನರನ್ನೂ ದ್ವೇಷಿಸಿ ತುಚ್ಛವಾಗೆಣಿಸಲು ತಾವು ಸ್ವಾತಂತ್ರರೆಂದು ತಮ್ಮಲ್ಲೇ ತಿಳಿದರು, ಮಾತ್ರವಲ್ಲದೆ ಅವರ ಸಲಹೆಗಳಿಗೆ ಸರಿಹೊಂದದ ತಮ್ಮ ಸ್ವಜನರನ್ನೂ ದ್ವೇಷಿಸುವವರಾಗಿದ್ದರು. ಹೀಗೆ ಇವರು ಇವುಗಳಲ್ಲೆಲ್ಲಾ “ನರಹತ್ಯ ಮಾಡಬಾರದು” ಎಂಬ ಧರ್ಮಶಾಸ್ತ್ರದ ಆಜ್ಞೆಯನ್ನು ಮೀರುವವರಾಗಿದ್ದರು. MBK 60.4

ದ್ವೇಷದ ಮತ್ತು ಪ್ರತೀಕಾರದ ಸ್ವಭಾವವು ಸೈತಾನನಿಂದ ಉತ್ಪತ್ತಿಯಾಯಿತು; ಇದು ಅವನು ದೇವರ ಕುಮಾರನನ್ನು ಮರಣಕ್ಕೊಪ್ಪಿಸುವಂತೆಸಗಿತು. ದ್ವೇಷ ಮತ್ತು ನಿರ್ದಯ ಗುಣವುಳ್ಳವರು ಇದೇ ಸ್ವಭಾವವುಳ್ಳವರಾಗಿದ್ದಾರೆ; ಇದರ ಅಂತ್ಯ ಫಲವು ಮರಣವೇ. ಪ್ರತೀಕಾರದ ಯೋಚನೆಯಲ್ಲಿ ದುಷ್ಟತನವು, ಬೀಜದಲ್ಲಿ ಗಿಡವು ಹುದುಗಿರುವಂತೆ ಹುದುಗಿರುವುದು. “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ.” 1 ಯೋಹಾನ 3: 15. MBK 61.1

“ತನ್ನ ಸಹೋದರನನ್ನು ನೋಡಿ-ಛೀ ನೀಚಾ ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು.” ದೇವರು ನಮ್ಮ ರಕ್ಷಣೆಗಾಗಿ ತನ್ನ ಮಗನನ್ನೇ ನಮಗೆ ಧಾರೆಯೆರೆದದ್ದರಲ್ಲಿ, ಪ್ರತಿಯೊಂದು ಮಾನವ ಆತ್ಮವು ಎಷ್ಟು ಅಮೂಲ್ಯವಾದದ್ದೆಂದು ತೋರಿಸಿದ್ದಾನೆ, ಮತ್ತು ಮತ್ತೊಬ್ಬರನ್ನು ತುಚ್ಛವಾಗಿ ಮಾತಾಡಲು ಯಾವ ಮನುಷ್ಯನಿಗೂ ಆತನು ಸ್ವಾತಂತ್ರವನ್ನು ಕೊಡುವುದಿಲ್ಲ. ನಮ್ಮ ಸುತ್ತಲಿರುವವರಲ್ಲಿ ಕುಂದುಕೊರತೆಗಳನ್ನು ನಾವು ಕಾಣುತ್ತೇವೆ, ಆದರೂ ಪ್ರತಿಯೊಂದು ಆತ್ಮವೂ ತನ್ನ ಸ್ವತ್ತೆಂದು ದೇವರು ವಾದಿಸುತ್ತಾನೆ, - ಆತನಿಂದ ಸೃಷ್ಟಿಸಲ್ಪಟ್ಟದ್ದರಿಂದ ಆತನ ಸ್ವತ್ತಾಗಿವೆ. ಎಲ್ಲರೂ ಆತನ ಸ್ವಾರೂಪ್ಯದಲ್ಲಿ ಸೃಷ್ಟಿಸಲ್ಪಟ್ಟಿರುವುದರಿಂದ, ಅತಿ ಕೀಳಾದವರನ್ನೂ ಸಹ ಮರ್ಯಾದೆಯಿಂದಲೂ ಮತ್ತು ಮಮತೆಯಿಂದಲೂ ಭಾವಿಸಬೇಕು, ಕ್ರಿಸ್ತನು ತನ್ನ ಪ್ರಾಣವನ್ನು ತೆತ್ತಿರುವ ಪ್ರತಿಯೊಂದು ಆತ್ಮದ ವಿಷಯದಲ್ಲಿ ನಾವು ತಾತ್ಸಾರ ಭವದಿಂದ ಮಾತಾಡಿದ ಒಂದು ವಾರ್ತೆಯಾದರೂ ದೇವರು ನಮ್ಮನ್ನು ಹೊಣೆಗಾರರನ್ನಾಗಿ ಹಿಡಿಯುವನು. MBK 61.2

“ನಿನಗೂ ಇತರರಿಗೂ ತಾರತಮ್ಯ ಮಾಡಿದವರು ಯಾರು? ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?” “ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪು ಮಾಡುವುದಕ್ಕೆ ನೀನು ಯಾರು? ಅವನು ನಿರ್ದೋಷಿ ಯಾಗಿ ನಿಂತರೂ ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು” 1 ಕೊರಿಂಥ 4: 7; ರೋಮಾಯ 14: 4. MBK 61.3

“ಮೂರ್ಖಾ ಅನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು.” “ಮೂರ್ಖ” ಎಂಬ ಮಾತು ಹಳೆ ಒಡಂಬಡಿಕೆಯಲ್ಲಿ ಧರ್ಮಭ್ರಷ್ಟನಾದವನಿಗೆ ಅಥವಾ ತನ್ನನ್ನು ದುಷ್ಟತನಕ್ಕೆ ಒಪ್ಪಿಸಿಕೊಟ್ಟವನಿಗೆ ಉಪಯೋಗಿಸಲ್ಪಡುತ್ತಿತ್ತು. ತನ್ನ ಸಹೋದರರನ್ನು ಧರ್ಮಭ್ರಷ್ಟನೆಂದಾಗಲೀ ಅಥವಾ ದೇವದೂಷಕನೆಂದಾಗಲೀ ಕರೆಯುವವನು ತಾನು ಅದೇ ತಪ್ಪಿಗಾಗಿ ಖಂಡಿಸಲ್ಪಡಲು ಯೋಗ್ಯನೆಂದು ತೋರಿಸುತ್ತಾನೆ ಎಂದು ಕ್ರಿಸ್ತನು ಹೇಳುತ್ತಾನೆ. MBK 62.1

ಕ್ರಿಸ್ತನು ತಾನೇ, ಸೈತಾನನೊಡನೆ ಮೋಶೆಯ ದೇಹಕ್ಕಾಗಿ ವಾದಿಸುವಾಗ “ಸೈತಾನನ ಮೇಲೆ ದೂಷಣಾಭಿಪ್ರಾಯವನ್ನು ಹೇಳುವುದಕ್ಕೆ ಧೈರ್ಯಗೊಳ್ಳದೆ” ಯೂದ 9, ಇದ್ದನು. ಆತನು ಹಾಗೆ ಮಾಡಿದ್ದಾದರೆ ಆಗ ತನ್ನನ್ನು ಸೈತಾನನಿಗೊಳಪಡಿಸಿಕೊಳ್ಳುತ್ತಿದ್ದನು; ಯಾಕಂದರೆ ದೋಷೆಯು ಕೆಡುಕನ ಆಯುಧವಾಗಿದೆ. ಸತ್ಯವೇದದಲ್ಲಿ ಅವನು “ನಮ್ಮ ಸಹೋದರನ ಮೇಲೆ ದೂರು ಹೇಳಿದ ದೂರುಗಾರನು.” ಪ್ರಕಟನೆ 12: 1೦, ಎಂದು ಕರೆಯಲ್ಪಟ್ಟಿದ್ದಾನೆ. ಯೇಸುವು ಸೈತಾನನ ಉಪಕರಣಗಳಾವುವನ್ನೂ ಉಪಯೋಗಿಸನು. ಆತನು “ಕರ್ತನು ನಿನ್ನನ್ನು ಖಂಡಿಸಲಿ” ಯೂದ 9, ಎಂದು ಮಾತ್ರ ಹೇಳಿದನು. MBK 62.2

ಆತನ ಮಾದರಿಯು ನಮಗಾಗಿಯೇ, ಕ್ರಿಸ್ತವಿರೋಧಿಯೊಡನೆ ನಾವು ಹೋರಾಡುವ ಸಂದರ್ಭವೊದಗುವಾಗ, ನಾವು ಪ್ರತೀಕಾರ ಭಾವದಿಂದ ಏನನ್ನೂ ಹೇಳಬಾರದು, ಅಥವಾ ದೂಷಣೆಯ ಭಾವನೆಯ ತೋರ್ಕೆಯಾದರೂ ಇರಬಾರದು. ದೇವರಿಗೋಸ್ಕರವಾಗಿ ಮಾತಾಡುವಾತನು, ಪರಲೋಕದ ಸಾರ್ವಭೌಮನೂ ಸಹ ಸೈತಾನನೊಡನೆ ವಾದಿಸುವಾಗ ಉಪಯೋಗಿಸದ ಮಾತುಗಳನ್ನು, ಉಚ್ಚರಿಸಬಾರದು. ನ್ಯಾಯ ತೀರಿಸುವುದನ್ನೂ ಮತ್ತು ದೋಷಾರೋಪಿಸುವುದನ್ನೂ ದೇವರಿಗೆ ಬಿಡಬೇಕು. MBK 62.3