ವೋಕ್ಷ ಮಾರ್ಗವು
ವೋಕ್ಷ ಮಾರ್ಗವು
ಪೀಠಿಕೆ.
“ನನ್ನ ಬಳಿಗೆ ಬನ್ನಿರಿ ‘” ಎಂಬ ದಯಾರ್ಥ ಶಬ್ದವು ಬಹುಜನರ ಕಿವಿಗೆ ಕೇಳಿಬರುತ್ತಾ ಇದೆ. ಕರುಣಾಪೂರಿತನಾದ ರಕ್ಷಕನಿಂದ ದೂರವಾಗಿ ಅಲೆದಾಡುತ್ತಿರುವವರಿಗೆಲ್ಲಾ ಈ ಧ್ವನಿಯು ಕೇಳಿಬರುತ್ತಿದೆ. ಈ ಆಶೀರ್ವಾದವು ನಮ್ಮನ್ನು ಪೂರ್ತಿಯಾಗಿ ಆತನಿಗೆ ಅಧೀನ ಮಾಡುವುದರಿಂದಲೂ ಆತನ ಕೃಪಾರಕ್ಷಣೆಯಲ್ಲೂ. ಪಾಪಾತ್ಮರ ಮಿತ್ರನಾದ ಆತನ ಶಕ್ತಿಯಲ್ಲೂ ಸ್ಥಿರವಾದ ನಂಬಿಕೆಯನ್ನಿಡುವುದರಿಂದಲೂ ನಮಗೆ ಲಭಿಸುತ್ತದೆ. ಈ ಗ್ರಂಥದಲ್ಲಿರುವ ಬೋಧನೆಯು ನೊಂದ ಆತ್ಮಗಳಾದ ಅನೇಕರಿಗೆ ಮನಶ್ಯಾಂತಿಯನ್ನೂ ನಿರೀಕ್ಷೆಯನ್ನು ತಂದಿರುವುತ್ತದೆ; ಮತ್ತು ಆತನ ಹಿಂಬಾಲಕರಲ್ಲಿ ಅನೇಕರು ಹೆಚ್ಚು ಭರವಸೆಯಿಂದಲೂ ಉಲ್ಲಾಸದಿಂದಲೂ ಆತನ ದೈವಿಕವಾದ ಹೆಜ್ಜೆಜಾಡಿನಲ್ಲಿ ನಡೆಯಲು ಶಕ್ತಿಯನ್ನು ಕೊಟ್ಟಿರುತ್ತದೆ. ಇದೇ ತರವಾದ ಸಹಾಯವನ್ನು ಅಪೇಕ್ಷಿಸುವವರಿಗೆ ಈ ಶುಭ ಸಮಾಚಾರವನ್ನು ಸಾರುತ್ತದೆ. “ಸ್ವರ್ಗಕ್ಕೆ ನಡಿಸುವ ಸೋಪಾನಗಳಿಂದ ಕೂಡಿದ ಹಾದಿಯು ಕಂಡು ಬರಲಿ.” ಪಾಪವು ನನ್ನನ್ನು ದೇವರಿಂದ ದೂರ ಮಾಡಿದೆ ಎಂಬ ಮನೋಭಾವದಿಂದ ಕೂಡಿದ ಯಾಕೋಬನ ಸ್ಥಿತಿಯು ಹೀಗೆಯೇ ಇದ್ದಿತು. ಆಯಾಸ ಪರಿಹಾರ ಮಾಡಿಕೊಳ್ಳಲು ಮಲಗಿದಾಗ ಆತನು ಕನಸು ಕಂಡನು. “ಅಗೋ ಅದರಲ್ಲಿ ಒಂದು ಏಣಿ, ಅದರ ಮೇಲ್ಭಾಗವು ಸ್ವರ್ಗವನ್ನೂ ಕೆಳಭಾಗವು ಭೂಮಿಯನ್ನೂ ಮುಟ್ಟುತ್ತಿತ್ತು.” ಸ್ವರ್ಗಕ್ಕೂ ಭೂಮಿಗೂ ಇದ್ದ ಸಂಬಂಧವು ಆತನಿಗೆ ಪ್ರಕಟವಾಯಿತು; ಮತ್ತು ಏಣಿಯ ತುದಿಯಲ್ಲಿದ್ದ ದೇವರು ಅಲೆದಾಡುವ ಈತನಿಗೆ ಮನಶ್ಯಾಂತಿಯನ್ನೂ ನಿರೀಕ್ಷೆಯನ್ನೂ ಉಂಟು ಮಾಡುವ ಮಾತುಗಳನ್ನಾಡಿದನು. ಆಗ ಈತನಿಗೆ ಸಮಾಧಾನವಯಿತು. ಜೀವದ ದಾರಿಯನ್ನು ಕುರಿತು ಓದುವ ಅನೇಕರಿಗೆ ಇಂತಹ ಸ್ವರ್ಗದ ದರ್ಶನವು ಪದೇ ಪದೇ ಉಂಟಾಗಲಿ. LI iii.1